ಭಾಷಣ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯೆ
ತಾಳಿಕೋಟಿ 01 : ಮಕ್ಕಳ ದಿನಾಚರಣೆ ನಿಮಿತ್ತ ಬಾಲವಿಕಾಸ ಅಕಾಡೆಮಿ ಹಮ್ಮಿಕೊಂಡಿದ್ದ ಜವಾಹರಲಾಲ ನೆಹರು ಬಗ್ಗೆ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಮಿಣಜಗಿ ಗ್ರಾಮದ ಸಿದ್ದಲಿಂಗೇಶ್ವರ ಪ್ರಾಥಮಿಕ ಶಾಲಾ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ. ಭಾಷಣ ಸ್ಪರ್ಧೆಯಲ್ಲಿ ವಿಶಾಖಾ ಕಾಶಿನಾಥ ಕೊಳಕೂರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಪ್ರಬಂಧ ಸ್ಪರ್ಧೆಯಲ್ಲಿ ಭೂಮಿಕಾ ದೇಶಪ್ಪ ಲಮಾಣಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿಯರ ಈ ಅಪ್ರತಿಮ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಜಿ.ಜಿ.ಯರನಾಳ, ಉಪಾಧ್ಯಕ್ಷ ಜೆ.ಡಿ.ಪಾಟೀಲ, ಕಾರ್ಯದರ್ಶಿ ಎಸ್.ಎಸ್.ಮ್ಯಾಗೇರಿ,ಮುಖ್ಯ ಗುರಗಳಾದ ಆರ್.ಎಸ್. ತೋಟದ,ಮಾರ್ಗದರ್ಶಕ ಶಿಕ್ಷಕಿಯರಾದ ಜಿ.ಜಿ.ತಾಳಿಕೋಟಿ ಮತ್ತು ಕುಮಾರಿ ಎಸ್.ಎಸ್.ದೋರನಳ್ಳಿ, ಆಡಳಿತ ಮಂಡಳಿ ಸದಸ್ಯರು ಶಿಕ್ಷಕ ವೃಂದ ಹಾಗೂ ಪಾಲಕರು ಅಭಿನಂದಿಸಿದ್ದಾರೆ.