ರಾಯಬಾಗ ತಾಲೂಕು ಮಟ್ಟದ ಪ್ರಥಮ ಕದಳಿ ಮಹಿಳಾ ಸಮಾವೇಶ

First Kadali Women's Conference at Raibag Taluk level

ರಾಯಬಾಗ ತಾಲೂಕು ಮಟ್ಟದ ಪ್ರಥಮ ಕದಳಿ ಮಹಿಳಾ ಸಮಾವೇಶ 

ಹಾರೂಗೇರಿ  8 : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು, ಮಹಿಳಾ ಕದಳಿ ವೇದಿಕೆ ಜಿಲ್ಲಾ ಘಟಕ ಬೆಳಗಾವಿ ಹಾಗೂ ರಾಯಬಾಗ ತಾಲೂಕು ಮಹಿಳಾ ಕದಳಿ ವೇದಿಕೆ ಆಶ್ರಯದಲ್ಲಿ ಫೆ.9ರಂದು ರವಿವಾರ ರಾಯಬಾಗ ತಾಲೂಕು ಮಟ್ಟದ ಪ್ರಥಮ ಮಹಿಳಾ ಸಮಾವೇಶವನ್ನು ಪಟ್ಟಣದ ಬಸವ ಬ್ಯಾಕೂಡ ರಸ್ತೆಯ ನಿಶ್ಚಿಂತ ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬೆಳಗಾವಿ ಜಿಲ್ಲಾ ಘಟಕ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ಧ್ವಜಾರೋಹನ :  ರವಿವಾರ ಬೆಳಿಗ್ಗೆ ಶರಣ ವಿಚಾರ ವಾಹಿನಿ ಅಧ್ಯಕ್ಷ ಐ.ಆರ್‌.ಮಠಪತಿ ಅವರ ಸಾನಿಧ್ಯದಲ್ಲಿ ಧ್ವಜಾರೋಹನ ನೇರವೇರಲಿದ್ದು, ಮಾಜಿ ಶಾಸಕ ಬಿ.ಸಿ.ಸರಿಕರ ಅಧ್ಯಕ್ಷತೆ ವಹಿಸಲಿದ್ದಾರೆ. ತಾಲೂಕು ವೈದ್ಯಾಧಿಕಾರಿ ಡಾ.ಸೋಮನಗೌಡ ಪಾಟೀಲ ಬಸವ ಭಾವಪೂಜೆ, ನಿವೃತ್ತ ಸೇನಾಧಿಕಾರಿ ಮಹಾದೇವ ಜಾಧವ ರಾಷ್ಟ್ರ ಧ್ವಜಾರೋಹನ, ಜಿಲ್ಲಾಧ್ಯಕ್ಷೆ ಪ್ರೇಮಕ್ಕ ಅಂಗಡಿ ಷಟ್‌ಸ್ಥಲ ಧ್ವಜಾರೋಹನ, ಶರಣ ಸಾಹಿತ್ಯ ಪರಿಷತ್ತಿನ ಅಶೋಕ ಮಳಗಲಿ ಪರಿಷತ್ ಧ್ವಜಾರೋಹನ, ಕದಳಿ ವೇದಿಕೆ ತಾಲೂಕಾಧ್ಯಕ್ಷೆ ಅನುಸೂಯಾ ಮುಳವಾಡ ನಾಡ ಧ್ವಜಾರೋಹನ ನೇರವೇರಿಸಲಿರುವರು. 

ವಚನ ಗ್ರಂಥ ಮೆರವಣಿಗೆ : ಪುರಸಭೆ ಅಧ್ಯಕ್ಷ ವಸಂತ ಲಾಳಿ ಹಾಗೂ ಉಪಾಧ್ಯಕ್ಷ ಬಸವರಾಜ ಅರಕೇರಿ ವಚನ ಗ್ರಂಥ ಮೆರವಣಿಗೆಗೆ ಚಾಲನೆ ನೀಡುವರು. ಸಿಪಿಐ ರವಿಚಂದ್ರನ ಡಿ.ಬಿ ವಚನವನ್ನು ಪಠಣ ಮಾಡುವರು. ಮುಖ್ಯಾಧಿಕಾರಿ ಅಭಿಷೇಕ ಪಾಂಡೆ, ಪಿಎಸ್‌ಐ ಮಾಳಪ್ಪ ಪೂಜೇರಿ, ಸಿಪಿಐ ಶಿವಾನಂದ ಕಾರಜೋಳ, ಶರಾವತಿ ನಿಡಸೋಸಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. 

ಉದ್ಘಾಟನೆ : ನಾಗನೂರ ರುದ್ರಾಕ್ಷಿ ಮಠದ ಪೂಜ್ಯಶ್ರೀ ಅಲ್ಲಮಪ್ರಭು ಸ್ವಾಮೀಜಿ ಅವರ ಪಾವನ ಸಾನಿಧ್ಯ ಹಾಗೂ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಅವರ ಅಧ್ಯಕ್ಷತೆಯಲ್ಲಿ ವಚನ ನೃತ್ಯದ ಮೂಲಕ ಸ್ತ್ರೀರೋಗ ತಜ್ಞೆ ಡಾ.ನಂದಿತಾ ಒಡೆಯರ ಉದ್ಘಾಟಿಸುವರು. ಡಾ.ರತ್ನಾ ಬಾಳಪ್ಪನವರ ಸರ್ವಾಧ್ಯಕ್ಷತೆಯಲ್ಲಿ ಸವಸುದ್ದಿಯ ಶೋಭಾ ಪಾಟೀಲ ಅವರಿಗೆ ಕದಳಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಬೆಳಗಾವಿಯ ನಿವೃತ್ತ ಪ್ರಾಧ್ಯಾಪಕಿ ಡಾ.ಗುರುದೇವಿ ಹೆಲೆಪ್ಪನವರಮಠ ಉಪನ್ಯಾಸಕರಾಗಿ ಪಾಲ್ಗೊಳ್ಳುವರು. 

ಸಾಧಕರ ಸನ್ಮಾನ : ಅಂತರಾಷ್ಟ್ರೀಯ ಮಟ್ಟದ ಖ್ಯಾತ ಚಿಕಿನಿ ಚಿತ್ರ ಕಲಾವಿದೆ ರಾಯಬಾಗದ ಅಶಾರಾಣಿ ನಡೋಣಿ ಮತ್ತು ಲೆಕ್ಕ ಪರಿಶೋಧಕ ಶಿವಾನಂದ ಬಾಗೇವಾಡಿ ಅವರನ್ನು ಸನ್ಮಾನಿಸಲಾಗುತ್ತದೆ. 

ಚಿಂತನಾ ಗೋಷ್ಠಿ : ಮಧ್ಯಾಹ್ನ 12 ಗಂಟೆಗೆ ಪರಮಾನಂದವಾಡಿ ಬ್ರಹ್ಮಾನಂದ ಆಶ್ರಮದ ಶ್ರೀ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿಯವರ ಸಾನಿಧ್ಯದಲ್ಲಿ ಚಿಂತನಾ ಗೋಷ್ಠಿ ನಡೆಯಲಿದೆ. ರಾಷ್ಟ್ರ​‍್ರಶಸ್ತಿ ಪುರಸ್ಕೃತೆ ಡಾ.ಸಪನಾ ಅನಿಗೋಳ ಅಧ್ಯಕ್ಷತೆ ವಹಿಸುವರು. ವಚನಗಳಲ್ಲಿ ಮಹಿಳೆ ವಿಷಯ ಕುರಿತು ಅಥಣಿಯ ಡಾ.ಪ್ರಿಯಂವದಾ ಹುಲಗಬಾಳಿ ಉಪನ್ಯಾಸ ನೀಡಲಿದ್ದು, ಅತಿಥಿಗಳಾಗಿ ರಾಯಬಾಗ ಶಾಸಕ ಡಿ.ಎಂ.ಐಹೊಳೆ ಪಾಲ್ಗೊಳ್ಳುವರು. 

ಸಮಾರೋಪ : ಅಪರಾಹ್ನ 3 ಗಂಟೆಗೆ ಸಮಾರೋಪ ಮತ್ತು ಸನ್ಮಾನ ಸಮಾರಂಭ ನಡೆಯಲಿದ್ದು, ಹಂದಿಗುಂದ ಸಿದ್ದೇಶ್ವರ ವಿರಕ್ತಮಠದ ಪೂಜ್ಯಶ್ರೀ ಶಿವಾನಂದ ಸ್ವಾಮೀಜಿ ಸಾನಿಧ್ಯ, ಶೇಗುಣಸಿ ವಿರಕ್ತಮಠದ ಪೂಜ್ಯಶ್ರೀ ಡಾ.ಮಹಾಂತಪ್ರಭು ಸ್ವಾಮೀಜಿಯವರ ಸಮ್ಮುಖ, ಮಾಜಿ ಶಾಸಕ ಪಿ.ರಾಜೀವ ನೇತೃತ್ವದಲ್ಲಿ, ತಾಲೂಕಾಧ್ಯಕ್ಷೆ ಅನುಸೂಯಾ ಮುಳವಾಡ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಧ್ಯಾಪಕಿ ತ್ರೀಶಲಾ ನಾಗನೂರ ಅತಿಥಿಗಳಾಗಿ ಪಾಲ್ಗೊಳ್ಳಲಿರುವರೆಂದು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷೆ ಪ್ರೇಮಕ್ಕ ಅಂಗಡಿ ತಿಳಿಸಿದ್ದಾರೆ. 

  ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಕದಳಿ ವೇದಿಕೆ ಜಿಲ್ಲಾ ಘಟಕ ಗೌರವಾಧ್ಯಕ್ಷೆ ರಾಜೇಶ್ವರಿ ಕವಟಗಿಮಠ, ಪ್ರಧಾನ ಕಾರ್ಯದರ್ಶಿ ಗೌರಮ್ಮ ಕರ್ಕಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಅಶೋಕ ಮಳಗಲಿ, ತಾಲೂಕಾಧ್ಯಕ್ಷೆ ಅನುಸೂಯಾ ಮುಳವಾಡ, ಶರಣ ವಿಚಾರ ವಾಹಿನಿ ಅಧ್ಯಕ್ಷ ಐ.ಆರ್‌.ಮಠಪತಿ, ಸಂಚಾಲಕರಾದ ಎಸ್‌.ಎಲ್‌.ಬಾಡಗಿ ಮತ್ತೀತರರು ಉಪಸ್ಥಿತರಿದ್ದರು.