ಸರ್ಕಾರಿ ಹೊರ ಗುತ್ತಿಗೆ ವಾಹನ ಚಾಲಕರ ಸಂಘದಿಂದಪ್ರಥಮ ವಾರ್ಷಿಕ ಸಮ್ಮೇಳನ

ಸರ್ಕಾರಿ ಹೊರ ಗುತ್ತಿಗೆ ವಾಹನ ಚಾಲಕರ ಸಂಘದಿಂದಪ್ರಥಮ ವಾರ್ಷಿಕ ಸಮ್ಮೇಳನ First Annual Conference by Government Outsourced Vehicle Drivers Association

              ಬಳ್ಳಾರಿ 12: ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಪತ್ರಿಕಾ ಭವನದಲ್ಲಿ ಶನಿವಾರ ಸರ್ಕಾರಿ ಹೊರ ಗುತ್ತಿಗೆ ವಾಹನ ಚಾಲಕರ ಸಂಘದಿಂದ ಪ್ರಥಮ ವಾರ್ಷಿಕೋತ್ಸವ ಸಮಾರಂಭದ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಸಂಘದ ಅಧ್ಯಕ್ಷ ಮಲ್ಲೇಶಪ್ಪ ಅವರು, ವಾಹನ ಚಾಲಕರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಬೇಕು. ಮತ್ತು ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕತೆ ಹೊಂದಬೇಕು. ಇದರಿಂದ ನಮ್ಮ ಸಂಘಕ್ಕೆ ಮತ್ತು ಚಾಲಕರಿಗೆ ಒಳ್ಳೆಯ ಹೆಸರು ಬರುತ್ತದೆ. ಚಾಲಕರ ಸಮಸ್ಯೆಗಳು ಇದ್ದಾಗ ಸದಾ ನನ್ನ ನಂಬರ್ ಗೆ ಕರೆ ಮಾಡಿ ನಿಮ್ಮ ಸಮಸ್ಯೆಗಳನ್ನು ಬಗೆ ಹರಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ.

              ವಾಹನ ಚಾಲನೆಯ ಸಂದರ್ಭದಲ್ಲಿ ಜಾಗೃತೆಯಿಂದ ಚಾಲನೆ ಮಾಡಿ ಎಂದು ಅವರು ಸಲಹೆ ನೀಡಿದರು.ನಮ್ಮ ಸಂಘದಿಂದ ಯಾವುದೇ ಕಾರ್ಯಕ್ರಮ ಮಾಡಿದಾಗ ಹೆಚ್ಚಿನ ಸಂಖ್ಯೆಯಲ್ಲಿ ಚಾಲಕರು ಬರಬೇಕು. ಇದರಿಂದ ನಮ್ಮಲ್ಲಿ ಒಗ್ಗಟ್ಟು ಇದೆ ಎಂಬ ಸಂದೇಶವನ್ನು ನೀಡಬಹುದಾಗಿದೆ. ಜೊತೆಗೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಯಾವುದೇ ಸಮಯದಲ್ಲಿ ನಮಗೆ ಕರೆ ಬರಬಹುದು ಆ ಸಂದರ್ಭದಲ್ಲಿ ನಾವು ಸಿದ್ದವಾಗಿರಬೇಕು ಎಂದು ಅವರು ಹೇಳಿದರು.ಕೊಪ್ಪಳ ಜಿಲ್ಲೆಯ ಸರ್ಕಾರಿ ಹೊರ ಗುತ್ತಿಗೆ ವಾಹನ ಚಾಲಕರ ಸಂಘದ ಅಧ್ಯಕ್ಷ. ವಿಜಯ ಹೀರೆಮಠ್ ಅವರು ಮಾತನಾಡಿ, ವಾಹನ ಚಾಲಕರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು.

            ನಮ್ಮ ಸಂಘದ ಸದಸ್ಯರಿಗೆ ಏನಾದರೂ ತೊಂದರೆ ಬಂದಲ್ಲಿ ನಮ್ಮ ಗಮನಕ್ಕೆ ತಂದರೆ ಸಮಸ್ಯೆಗಳನ್ನು ಬಗೆ ಹರಿಸುವ ಕೆಲಸ ಮಾಡುತ್ತೇವೆ ಎಂದರು.ಈ ಸಂದರ್ಭದಲ್ಲಿ ಸರ್ಕಾರಿ ವಾಹನ ಚಾಲಕರ ಸಂಘದ ಅಧ್ಯಕ್ಷ ಶ್ರಿನಿವಾಸಲು, ಖಜಾಂಚಿ ಕಬೀರ, ಗೌರವ ಅಧ್ಯಕ್ಷರಾದ ಸುಮನ್ ಕುಮಾರ್, ಉಪಾಧ್ಯಕ್ಷ ಬಿ. ಪರಶುರಾಮ, ಖಜಾಂಚಿ ಕೆ. ಶಿವು, ಅಂತೋನಿ, ಸಂತೋಷ ಕುಮಾರ್, ಇರ್ಫಾನ್, ವೆಂಕಟೇಶ, ನಾಗರಾಜ್, ರವಿ ಕುಮಾರ್ ಸೇರಿದಂತೆ ಸಂಘದ ಸದಸ್ಯರು ಭಾಗವಹಿಸಿದ್ದರು.