ಕುಂದಗೋಳ-21, ನಮ್ಮ ದೇಶದ ಅರ್ಥ ವ್ಯವಸ್ಥೆಯಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಅತ್ಯಂತ ಮಹತ್ವದ್ದೆಂದು ಕೆ.ಸಿ.ಸಿ. ಬ್ಯಾಂಕ ನಿದರ್ೆಶಕರ ಉಮೇಶ ಹೆಬಸೂರ ಹೇಳಿದರು.
ಬಸವಣ್ಣಜ್ಜನವರ ಕಲ್ಯಾಣಪುರ ಮಠದ ಸಭಾಭವನ, ಕುಂದಗೋಳದಲ್ಲಿ ಕನರ್ಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಹಾಗೂ ಧಾರವಾಡ ಜಿಲ್ಲಾ ಸಹಕಾರಿ ಯೂನಿಯನ್ ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕುಂದಗೋಳ ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿವರ್ಾಹಕರುಗಳ ವಿಶೇಷ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನ ಸಾಮಾನ್ಯರಿಗೆ ಹೆಚ್ಚಿನ ಹಾಗೂ ಪರಿಣಾಮಕಾರಿ ಸೇವೆ ಸಲ್ಲಿಸುತ್ತಿರುವ ಈ ಸಹಕಾರಿ ಸಂಸ್ಥೆಗಳಿಗೆ ತೆರಿಗೆ ಸಲ್ಲದು. ಪ್ರತಿಯೊಬ್ಬರಿಗೂ ಇಂದಿನ ಆಧುನಿಕತೆಯ ಜ್ಞಾನವಿರಬೇಕು. ಜ್ಞಾನವೆ ಒಂದು ಶಕ್ತಿ ಇದ್ದಂತೆ. ದಿನೇ ದಿನೇ ಹೆಚ್ಚುತ್ತಿರುವ ಈ ಆಧುನಿಕತೆಯನ್ನು ಇಂತಹ ತರಬೇತಿಗಳ ಮೂಲಕ ಅಳವಡಿಸಿಕೊಳ್ಳುವುದು ಅಗತ್ಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ.ಸಿ.ಸಿ. ಬ್ಯಾಂಕಿನ ಮುಖ್ಯ ಕಾರ್ಯನಿವರ್ಾಹಕ ಕೆ. ಮುನಿಯಪ್ಪ ಅವರು ಸಹಕಾರ ಸಂಘಗಳ ಅಭಿವೃದ್ದಿಗೆ ಶಿಕ್ಷಣ ತರಬೇತಿ ಅವಶ್ಯ. ಸಹಕಾರ ಸಂಘಗಳ ಉತ್ತಮ ಕಾರ್ಯನಿರ್ವಹಣೆಗಾಗಿ ಸಹಕಾರ ಕಾಯ್ದೆ ಮತ್ತು ಉಪವಿಧಿಗಳ ಅರಿವು ಅಗತ್ಯವಾಗಿರುತ್ತದೆ ಎಂದರು. ಸಹಕಾರ ಸಂಘಗಳು ಪ್ರಜಾ ಸತ್ತಾತ್ಮಕ ಸಂಘಟನೆಗಳಾಗಿದ್ದು, ಅವುಗಳ ಕಾರ್ಯ ಚಟುವಟಿಕೆಗಳಲ್ಲಿ ಸದಸ್ಯರುಗಳು ಸಕ್ರಿಯವಾಗಿ ಭಾಗವಹಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಕೆ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಬಾಪುಗೌಡ ಡಿ. ಪಾಟೀಲ ಅವರು ಸಹಕಾರ ಕ್ಷೇತ್ರ ವಿಶಾಲವಾದ ಕ್ಷೇತ್ರ. ಕೃಷಿ ಪತ್ತಿನ ಸಹಕಾರಿ ಸಂಘಗಳಿಂದಲೇ ನಿರುದ್ಯೋಗಿ ವಿದ್ಯಾವಂತರ ಅಭಿವೃದ್ಧಿ ಸಾಧ್ಯವೆಂದು ತಿಳಿಸುತ್ತ, ವಿಶ್ವದಾದ್ಯಂತ ಚಾಲತಿಯಲ್ಲಿರುವ ಉದಾರೀಕರಣ, ಖಾಸಗೀಕರಣ ಹಾಗೂ ಜಾಗತಿಕರಣದಿಂದಾಗಿ ಇಂದು ಎಲ್ಲ ರಂಗದಲ್ಲಿಯೂ ಪೈಪೋಟಿ ಕಂಡು ಬಂದಿದ್ದು ಅದನ್ನು ಸಮರ್ಥವಾಗಿ ಎದುರಿಸಲು ವೃತ್ತಿಯಲ್ಲಿ ಕೌಶಲ್ಯತೆಯನ್ನು ಕಂಡುಕೊಳ್ಳಲು ಸಿಬ್ಬಂದಿಗಳು ಸಿದ್ಧರಾಗಬೇಕಿದೆ ಎಂದರು.
ನಬಾರ್ಡ ಹಾಗೂ ಅಪೆಕ್ಸ ಬ್ಯಾಂಕಿನಿಂದ ಸಿಗುವ ಸಾಲ ಸೌಲಭ್ಯಗಳನ್ನು ಕುಂದಗೋಳ ತಾಲೂಕಿನ ರೈತರಿಗೆ ಹೆಚ್ಚು ಹೆಚ್ಚು ನೀಡುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಸಮಾರಂಭದಲ್ಲಿ ಹಿರಿಯ ಸಹಕಾರಿಗಳಾದ ಟಿ.ಎಸ್. ಗೌಡಪ್ಪನರ, ಯೂನಿಯನ್ ನಿದರ್ೆಶಕರುಗಳಾದ ಬಿ.ಎಸ್. ಕುರಹಟ್ಟಿ ಮತ್ತು ಪಿ.ಪಿ. ಗಾಯಕವಾಡ ಅವರು ಉಪಸ್ಥಿತರಿದ್ದರು.
ಆನಂದ ತಳವಾರ ಸ್ವಾಗತಿಸಿದರು. ಸವಿತಾ ಹಿರೇಮಠ ನಿರೂಪಿಸಿದರು. ಮೆಣಸಿನಹಾಳ ವಂದಿಸಿದರು.