ಲೋಕದರ್ಶನ ವರದಿ
ಸಿದ್ದಾಪುರ:ಆರ್ಥಿಕ ಸಾಕ್ಷರತಾ ವಾರದ ಆಚರಣೆ ವಿಜಯ ಆರ್ಥಿಕ ಸಾಕ್ಷತರಾ ಕೇಂದ್ರ ಹಾಗೂ ಸಿಂಡಿಕೇಟ್ ಬ್ಯಾಂಕ್ ಸಹಯೋಗದೊಂದಿಗೆ ತಾಲೂಕಿನ ಮನಮನೆಯಲ್ಲಿ ನಡೆಯಿತು.
ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳಿಗೆ ಈ ಕುರಿತು ಮಾಹಿತಿ ನೀಡಲಾಯಿತು. ವಿಜಯ ಆರ್ಥಿಕ ಸಾಕ್ಷತರಾ ಕೇಂದ್ರದ ಸಮಾಲೋಚಕರಾದ ಎ.ಶಬ್ಬೀರ್ ಅಹಮದ್ ಆರ್ಥಿಕ ಸಾಕ್ಷರತಾ ವಾರದ ಆಚರಣೆಯ ಕುರಿತು ಮಾಹಿತಿ ನೀಡಿ ಬ್ಯಾಂಕ್ ನಲ್ಲಿ ಜನಸಾಮಾನ್ಯರಿಗೆ ಕೂಲಿ ಕಾರ್ಮಿಕರಿಗೆ ಕೃಷಿಕರಿಗೆ ಸಿಗುವ ಸೌಲಭ್ಯಗಳು, ಫ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಸೇರಿದಂತೆ ಇನ್ನಿತರ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಿರಿಯ ಸಮಾಲೊಚಕರಾದ ಶಿವಶಂಕರ ಎನ್ ಕೆ. ಮನಮನೆ ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ನಾಯ್ಕ, ಸಿದ್ದಾಪುರ ಸಿಂಡಿಕೇಟ್ ಬ್ಯಾಂಕ್ ನ ರೋಹಿತ್, ಬ್ಯಾಂಕ್ ಮಿತ್ರ ಲೂರ್ದಿಯಾ ಫರ್ನಾಡೀಸ್ , ಉಪಸ್ಥಿತರಿದ್ದರು.