ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯ ಶ್ಲಾಘನಿಯ: ಬಡಮಕ್ಕಳು ಮರುಳಿ ಶಾಲೆಗೆ

ಲೋಕದರ್ಶನ ವರದಿ

ಸಿಂದಗಿ 22: ಶಾಲೆಯಿಂದ ದೂರುಳಿದು ಇಟ್ಟಂಗಿಬಟ್ಟಿಯಲ್ಲಿ ಕೆಲಸ ಮಾಡುತ್ತಿರುವ ಮಕ್ಕಳನ್ನು ಗುರುತಿಸಿ ಮಕ್ಕಳಿಗೆ ಮತ್ತು ಪಾಲಕರಿಗೆ ಮನವಲಿಸಿ ಮಕ್ಕಳನ್ನು ಮರುಳಿ ಶಾಲೆಗೆ ಕಳುಹಿಸಿದ ಘಟನೆ ತಾಲೂಕಿನ ದೇವರಹಿಪ್ಪರಗಿ ಪಟ್ಟಣದ ಹೊರವಲಯದ ಇಟ್ಟಂಗಿ ಬಟ್ಟಿಯಲ್ಲಿ ಗುರುವಾರ ನಡೆದಿದೆ.

ಕ್ಷೇತ್ರಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಅವರು ಸ್ವತಃ ತಮ್ಮ ಸಿಬ್ಬಂದಿಯೊಂದಿಗೆ ಗುರುವಾರ ದೇವರಹಿಪ್ಪರಗಿಯಲ್ಲಿನ ಇಟ್ಟಂಗಿಬಟ್ಟಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಇಟ್ಟಂಗಿ ಬಟ್ಟಿ ಕೆಲಸ ಮಾಡುತ್ತಿರುವ ಇಬ್ಬರು ಶಾಲಾ ಮಕ್ಕಳನ್ನು ಗುರುತಿಸಿದ್ದಾರೆ. ತಾಲೂಕಿನ ಹೊನ್ನಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕಶಾಲೆಯಲ್ಲಿ ಹೆಸರು ದಾಖಲಾಗಿರುವ  2ನೇ ತರಗತಿಯ ವಿದ್ಯಾಥರ್ಿ ರವಿ ಲಕ್ಕಪ್ಪ ದೇವೂರ, 3ನೇ ತರಗತಿಯ ವಿದ್ಯಾಥರ್ಿ ಸಾದೇವಪ್ಪ ಲಕ್ಕಪ್ಪ ದೇವೂರ ಅವರನ್ನು ಗುರುತಿಸಿದ್ದಾರೆ. ಅವರಿಗೆ ತಿಳಿ ಹೇಳಿ ಮರುಳಿ ಶಾಲೆಗೆ ಕಳುಹಿಸಿದ್ದಾರೆ.

   ಮಕ್ಕಳೊಂದಿಗೆ ಆಪ್ತಸಮಾಲೋಚನೆ ಮಾಡಿದ ಕ್ಷೇತ್ರಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಅವರು ಮಾತನಾಡಿ, ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ ಕೆಲಸಕ್ಕೆ ಸೇರಿಸುವುದು ಅಪರಾಧ. ಕೂಲಿ ಹಣ ಉಳಿತಾಯವಾಗುತ್ತದೆ ಎಂದು ಶಾಲಾಮಕ್ಕಳನ್ನು ಕೆಸಲಕ್ಕೆ ಇಟ್ಟುಕೊಳ್ಳುವುದು ಅಪರಾಧ. ಕುಟುಂಬದ ಆಥರ್ಿಕ ಸಮಸ್ಯೆಯಿದ್ದಲ್ಲಿ ಪಾಲಕರು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಮಾಡಿ ಕೆಲಸಕ್ಕೆ ಸೇರಿಸಬೇಡಿ ಎಂದರು.

ಸರಕಾರ 14ವರ್ಷದವರೆಗೆ ಕಡ್ಡಾಯ ಶಿಕ್ಷಣಮಾಡಿದೆ. ಕಷ್ಟದ ಜೀವನದಲ್ಲಿ ಶಿಕ್ಷಣ ಕಲಿಸಲು ತೊಂದರೆಯಾಗುತ್ತಿದ್ದಲ್ಲಿ ಅನಾನೂಕೂಲವಾಗುತ್ತಿದ್ದಲ್ಲಿ ತಮಗೆ ಬೇಟಿ ಮಾಡಿ. ಆದರೆ ಮಕ್ಕಳನ್ನು ಕೂಲಿಗೆ ಕಳುಹಿಸಬೇಡಿ. ಕೂಲಿ ಮಾಡುವ ಮಕ್ಕಳನ್ನು ನೋಡಲು ನನ್ನಿಂದಾಗುವುದಿಲ್ಲ. ಸರಕಾರ ಸಾಕಷ್ಟು ಸೌಲಭ್ಯ ನೀಡುತ್ತಿದೆ. ಈ ಸೌಲಭ್ಯಗಳನ್ನು ಸದುಪಯೋಗ ಪಡೆಸಿಕೊಳ್ಳ ಬೇಕು ಎಂದರು.

ಶಾಲಾ ಮಕ್ಕಳನ್ನು ಕೆಲಸಕ್ಕೆ ಇಡಲು ಬಂದ ಪಾಲಕರಿಗೆ ತಿಳುವಳಿಕೆ ಹೇಳಿ ಶಾಲೆಗೆ ಕಳುಹಿಸುವ ಪ್ರಯತ್ನ ಮಾಡಬೇಕು ಎಂದು ಇಟ್ಟಂಗಿಬಟ್ಟಿ ಮಾಲಿಕರಿಗೆ ಕಿವಿಮಾತು ಹೇಳಿದರು. 

ಶಾಲೆಯಲ್ಲಿ ನಿರಂತರ ಮಕ್ಕಳು ಗೈರುಹಾಜರಿ ಉಳಿಯುವಂತ ಮಕ್ಕಳನ್ನು ಗುರುತಿಸಿ ಅವರ ಬಗ್ಗೆ ತಿಳಿದುಕೊಂಡು ಅಂಥವರನ್ನು ಮರುಳಿ ಶಾಲೆಗೆ ಕರೆದುಕೊಂಡು ಬರಬೇಕು ಎಂದು ಕ್ಷೇತ್ರಸಮನ್ವಯಾಧಿಕಾರಿ ಅವರು ಶಾಲಾ ಮುಖ್ಯಸ್ಥರಿಗೆ ಹಾಗೂ ಶಿಕ್ಷಕರಿಗೆ ಸೂಚಿಸಿದ್ದಾರೆ. ದೇವರಹಿಪ್ಪರಗಿಯ ಬಿಆರ್ಸಿ ಎಸ್.ಎಂ.ಪಾಟೀಲ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.