ಲೋಕದರ್ಶನ ವರದಿ
ಶಿಗ್ಗಾವಿ03: ಬೆಂಗಳೂರು ಹೆಗ್ಗೇರಿಯ ಮೌಂಟ್ ಕಾಮರ್ೇಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಪ್ರಾಥಮಿಕ ವಿದ್ಯಾಥರ್ಿಗಳು ತಮ್ಮ ಶಿಕ್ಷಕರೊಂದಿಗೆ ಉತ್ಸವ ರಾಕ್ ಗಾರ್ಡನ್ ಹಾಗೂ ಇಂಡಿಯನ್ ಗಾರ್ಡನ್ಗೆ ಬುಧವಾರ ಭೇಟಿ ನೀಡಿ ಸಂಭ್ರಮಿಸಿದರು.
ಗಾರ್ಡನ್ನ ಪ್ರವೇಶ ದ್ವಾರದಲ್ಲಿನ ರಾಜ್ಕುಮಾರ್ ಸರ್ಕಲ್, ಗ್ರಾಮದಲ್ಲಿನ ಬ್ರಾಹ್ಮಣ-ಜ್ಯೋತಿಷಿ-ಪತ್ಥಾರರ ಮನೆಗಳು, ಶೆಟ್ಟರ್ ಕಿರಾಣಿ ಅಂಗಡಿ, ಗೌಡರ ಮನೆ ನೋಡಿ ತಮ್ಮಳೊಗೆ ' ಶಿಲ್ಪಗಳು ನಿಜವಾಗಿಯೂ ಮನುಷ್ಯರಂತೆ ಕಾಣುತ್ತವೆ. ಅಲ್ಲವೇ ! ಎಂದು ಚಚರ್ಿಸ ತೊಡಗಿದರು.
ಗ್ರಾಮ ಹಾಗೂ ಉತ್ತರ ಕನರ್ಾಟಕ ಹಿಂದಿನ ಗ್ರಾಮ ಸಂಸ್ಕೃತಿಯ ಗ್ಯಾಲರಿಗಳು ವಿದ್ಯಾಥರ್ಿಗಳ ಮೊಗದಲ್ಲಿ ನಗೆ ಚಿಮ್ಮುವಂತೆ ಮಾಡಿದವು ಎಂದು ಅವರೊಂದಿಗಿದ್ದ ಶಿಕ್ಷಕ ಮುರಳಿ ವಿವರಿಸಿದರು.
ಇಂದಿನ ಮಕ್ಕಳಿಗೆ ಹಿಂದಿನ ಗ್ರಾಮೀಣ ಕಲೆ, ಸಂಸ್ಕೃತಿ ಹಾಗೂ ಬದುಕಿನ ಪರಿಚಯ ಮಾಡಿಸಬೇಕೆಂದರೆ ಮಕ್ಕಳೊಂದಿಗೆ ಶಿಕ್ಷಕರು ಒಮ್ಮೆ ಉತ್ಸವ ರಾಕ್ ಗಾರ್ಡನ್ಗೆ ಭೇಟಿ ನೀಡಬೇಕು ಎಂದು ಅವರು ನುಡಿದರು. ಇಂಡಿಯನ್ ಗಾರ್ಡನ್ನಲ್ಲಿನ ಸಾಹಸಮಯ ಆಟಗಳು, ನೀರಾಟ, ಎತ್ತಿನ ಗಾಡಿ-ಟಾಂಗಾ ಸವಾರಿ, ದೋಣಿ ವಿಹಾರ, ಮಳೆ ಸ್ನಾನಗಳು ವಿದ್ಯಾಥರ್ಿಗಳನ್ನು ಭರಪೂರ ರಂಜಿಸಿದವು ಎಂದು ಅವರೊಂದಿಗಿದ್ದ ಸಹ ಶಿಕ್ಷಕಿ ಜಯಂತಿ ವಿವರಿಸಿದರು.
ರಾಕ್ ಗಾರ್ಡನ್ ನಿಜವಾಗಿಯೂ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರ. ಜಾನಪದ ರಂಗಮಂದಿರವಂತೂ ನಮ್ಮ ನಾಡು,ನುಡಿ ಸಂಸ್ಕೃತಿಯ ಮೆರಗೂ ಹೆಚ್ಚಿಸಿದೆೆ ಎಂದು ಸಹ ಶಿಕ್ಷಕ ಶಿಕ್ಷಕ ಶರಣಪ್ಪ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಗಾರ್ಡನ್ನ ಪ್ರತಿಯೊಂದು ಶಿಲ್ಪಗಳು ನಮ್ಮನ್ನು ಮಾತನಾಡಿಸಿ ಮುಂದೆ ಹೋಗಿ ಎಂದು ಪ್ರವಾಸಿಗರಿಗೆ ಹೇಳುತ್ತಿರುವಂತೆ ಭಾಸ ಆಗುತ್ತದೆ ಎಂದು ವಿದ್ಯಾಥರ್ಿಗಳು ತಮ್ಮ ಅನುಭವ ಹಂಚಿಕೊಂಡರು.