ಹೂವಿನ ಹಡಗಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ

Festive Christmas celebration with flower boats

ಹೂವಿನ ಹಡಗಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ

ಹೂವಿನ ಹಡಗಲಿ 26: ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ಇರುವ ಶಾಲೋಂ ಕೃಪಾ ಸುವಾರ್ತಾ ಸಭೆಯಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ ಮಾಡಲಾಯಿತು.ಫಾಸ್ಟರ್  ಕೆ.ಹಾಲೇಶನಾಯ್ಕ ಮಾತನಾಡಿ ಯೇಸು ಕ್ರಿಸ್ತನ ಆದರ್ಶಗಳನ್ನು ಅಳವಡಿಸಿಕೊಳ್ಳಿರಿ ಎಂದು ಹೇಳಿದರು.ಕ್ರಿಸ್ಮಸ್ ಎಂದರೆ ಕ್ರಿಸ್ತನ ಮನಸ್ಸು ನಮ್ಮಲ್ಲಿ ಇರಬೇಕು. ಯೇಸು ಸ್ವಾಮಿ ದೇವರ ಸ್ವರೂಪವಾಗಿದ್ದಾರೆ. ನಮಗಾಗಿ ತನ್ನ ಜೀವ ಕೊಟ್ಟ ದೇವರು ಯೇಸುಕ್ರಿಸ್ತನು ನಮ್ಮಮದ್ಯದಲ್ಲಿ ಜೀವಂತ ದೇವರಾಗಿದ್ದಾರೆ ಎಂದು ಪ್ರಾರ್ಥಿಸಿದರು.ಶಾಸಕರಾದ  ಕೃಷ್ಣ ನಾಯ್ಕ ರವರು ಕ್ರಿಸ್ಮಸ್ ಸಂಭ್ರಮಾಚರಣೆ ನಿಮಗೆ ಯೇಸುಸ್ವಾಮಿ ನಿಮ್ಮನ್ನು  ಆಶ್ರೀರ್ವದಿಸಲಿ.ಯೇಸು ಕ್ರಿಸ್ತನ ಒಂದು ಜಾತಿಗೆ ಸಿಮಿತ ದೇವರಲ್ಲ ಆತನಿಗೆ ಸಾವೇ ಇಲ್ಲ.ತನ್ನಂತೆ ತನ್ನ ನರೆಯವರನ್ನು ಪ್ರಿತಿಸಬೇಕು.ನಮಗಾಗಿ ಶಿಲುಬೆ ಮೇಲೆ ಮುಳ್ಳಿನ ಕೀರೀಟವನ್ನು ಧರಿಸಿ ನಮ್ಮ ಪಾಪಕ್ಕಾಗಿ ತಾನು ರಕ್ತ ಸುರಿಸಿ ನಮಗಾಗಿ ಇನ್ನೂ ಜೀವಂತ ಜೀವಿಸುವ ದೇವರೆ ಯೇಸು ಕ್ರಿಸ್ತ ಎಂದರು.ಮಾಜಿ ಶಾಸಕರಾದ ನಂದಿಹಳ್ಳಿ ಹಾಲಪ್ಪನವರು ಯೇಸು ಕ್ರಿಸ್ತನು ಹುಟ್ಟುವುದಕ್ಕೆ ಮುಂಚೆ ಈ ನಾವಲ್ಲರು ಕ್ಯಾಲೆಂಡರ್ ನೋಡಿಲ್ಲ.ಮೊದಲು ಕ್ರಿಸ್ತ ಪೂರ್ವ ಎಂದು ಓದುತ್ತಿದ್ದೆವು. ಕ್ರಿಸ್ತನು ಹುಟ್ಟಿದ ಮೇಲೆ ಕ್ರಿಸ್ತಶಕ ಎಂದು ಕರೆಯುತ್ತೇವೆ.ಕ್ರಿಸ್ತನ ಪ್ರೀತಿಯನ್ನು ನಾವು ಮೊದಲು ನಮ್ಮಲ್ಲಿ ಅಳವಡಿಸಿ ಕೊಳ್ಳುಬೇಕು ಎಂದರು.ಯೇಸುವನ್ನು ಶಿಲುಬೆ ಗೆ ಹಾಕಿದಾಗ ಆತನು ಹೆಳಿದಮಾತು ದೇವರೆ ಇವರು ಏನು ಮಾಡುವುದು ಇವರಿಗೆ ಅರಿಯದು ಇವರನ್ನು ಕ್ಷಮಿಸು ಎಂದು ಮೊದಲು ಪರಮಾತ್ಮನಲ್ಲಿ ಬೇಡಿಕೊಳ್ಳುತ್ತಾನೆ. ಯೇಸುವನ್ನು ನಂಬಿದವರು ಯಾರು ಬಡವರಾಗಿಲ್ಲ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಹೆಚ್‌.ಪೂಜಪ್ಪ. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೃಷ್ಣನಾಯ್ಕ.ಕೊಟ್ರೇಶನಾಯ್ಕ.ಸ್ವಾಮ್ಯಾನಾಯ್ಕ,ತಳಕಲ್ಲ ಕರಿಬಸಪ್ಪ.ಬೊರವಲ್ ಕೊಟೇಪ್ಪ.ಕೆ.ಪುತ್ರೇಶ್‌.ವಕೀಲರಾದ ಶಿವಕುಮಾರ,ಪುರಸಭೆ ಸದಸ್ಯರಾದ ಶಾಂತಮ್ಮ.ಸೇವಕಿಯಾದ ರೂಪಬಾಯಿ.ಅಖಿಲ ಭಾರತ ಕ್ರೈಸ್ತ ಮಹಾ ಸಭಾ ಅಧ್ಯಕ್ಷ ಹಲಗಿಸುರೇಶ,ಟಿ.ಸುರೇಶ,ಶೇಖರ್ ಕುಮಾರ.ಅಣ್ಣಪ್ಪ.ಗಿರಿಶ್‌.ಪರಮೇಶ.ರಾಜೇಂದ್ರನಾಯ್ಕ.ಸಂಕಿರ್ಣ.ಜ್ಯೋತಿ.ಸ್ವಫ್ನ.ಪ್ರಜ್ವಲ್‌.ಪ್ರಶಾಂತ ಇತರರು ಉಪಸ್ಥಿತರಿದ್ದರು. ಸಂದೇಶಕರಾದ ಫಾಸ್ಟರ್ ರವಿ ಡೇವಿಡ್ ಬೆಂಗಳೂರು ರವರು ಪ್ರಾರ್ಥನೆ ಮಾಡಿದರು. ನಂತರ ಚಿಕ್ಕ ಮಕ್ಕಳ ನೃತ್ಯ ಕಿರು ನಾಟಕ ಪ್ರದರ್ಶನ ಮಾಡಿ ಕ್ರಿಸ್ಮಸ್ ಸಂಭ್ರಮಾಚರಣೆ ಆಚರಿಸಿದರು.