ಮಾಂಜರಿ 8: ರಾಸಾಯನಿಕ ರಸಗೊಬ್ಬರಗಳ ಬೆಲೆ ದಿಢೀರನೆ ಸರಾಸರಿ ಶೇ. 20 ರಷ್ಟು ಬೆಲೆ ದುಬಾರಿ ಯಾಗಿರುವುದರಿಂದ ರೈತಾಪಿ ಜನ ಕಂಗಾಲಾಗಿದ್ದು, ಸರಕಾರದ ವಿರುದ್ಧ ಅಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಮಳೆಯ ಅಭಾವ, ಕಾಮರ್ಿಕರ ಕೊರತೆ, ವಿದ್ಯುತ ಕಡಿತ, ಮುಂತಾದ ಸಮಸ್ಯೆಗಳಿಗೆ ರೈತರು ರೋಸಿ ಹೋಗಿದ್ದು, ಎತನ್ಮಧ್ಯೆ ರಾಸಾಯನಿಕ ಗೊಬ್ಬರಗಳ ಬೆಲೆ ದುಬಾರಿ ಪ್ರತಿ 45 ಕಿಲೊ ತೂಕದ ಚೀಲಕ್ಕೆ 200 ರೂ ದುಬಾರಿಯಾಗಿದ್ದರಿಂದ ರೈತರಲ್ಲಿ ಅಸಮಾಧಾನ ತಂದಿದೆ.
ಯುರಿಯಾ ಮತ್ತು ಸಲ್ಫೆಟ್ ಹೊರತುಪಡಸಿ ಉಳಿದೆಲ್ಲವುಗಳು ತುಟ್ಟಿಯಾಗಿವೆ. ಎಮ್.ಒ.ಪಿ. ರಸಗೊಬ್ಬರ ಪ್ರತಿ 45 ಕೆ.ಜಿ. ಚೀಲಕ್ಕೆ 680 ರೂ ಮಾರಾಟವಾಗುತ್ತಿತ್ತು ಇಂದು 950 ರೂ ಚೀಲ ಮಾರಾಟ ಮಾಗುತ್ತಿದೆ. ಡಿ.ಎ.ಪಿ. ರಸಗೊಬ್ಬರ ಪ್ರತಿ 45 ಕೆ.ಜಿ. ಚೀಲಕ್ಕೆ 1150 ರೂ ಮಾರಾಟವಾಗುತ್ತಿತ್ತು. ಇಂದು 1470 ರೂ. ಚೀಲ ಮಾರಾಟ ಮಾಗುತ್ತಿದೆ. 10;26;26 ರಸಗೊಬ್ಬರ ಪ್ರತಿ 45 ಕೆ.ಜಿ. ಚೀಲಕ್ಕೆ 1180 ರೂ ಮಾರಾಟವಾಗುತ್ತಿತ್ತು. ಇಂದು 1380 ರೂ ಚೀಲ ಮಾರಾಟ ಮಾಗುತ್ತಿದೆ. 20;20;013 ರಸಗೊಬ್ಬರ ಪ್ರತಿ 45 ಕೆ.ಜಿ. ಚೀಲಕ್ಕೆ 900 ರೂ. ಮಾರಾಟವಾಗುತ್ತಿತ್ತು. ಇಂದು 1050 ರೂ ಚೀಲ ಮಾರಾಟ ಮಾಗುತ್ತಿದೆ. 12;32;16 ರಸಗೊಬ್ಬರ ಪ್ರತಿ 45 ಕೆ.ಜಿ. ಚೀಲಕ್ಕೆ 1180 ರೂ ಮಾರಾಟವಾಗುತ್ತಿತ್ತು ಇಂದು 1380 ರೂ ಚೀಲ ಮಾರಾಟ ಮಾಗುತ್ತಿದೆ. ಸುಪರ ಫಾಸ್ಪೇಟ್ ಪ್ರತಿ 45 ಕೆ.ಜಿ. ಚೀಲಕ್ಕೆ 350 ರೂ ಮಾರಾಟವಾಗುತ್ತಿತ್ತು ಇಂದು 410 ರೂ ಚೀಲ ಮಾರಾಟ ಮಾಗುತ್ತಿದೆ.
ಕಳೆದ 2-3 ವರ್ಷಗಳಿಂದ ಹವಾಮಾನದ ವೈಫಲ್ಯ, ಮಳೆಯ ಪ್ರಮಾಣದಲ್ಲಿ ಕುಸಿತ, ರಸಗೊಬ್ಬರಗಳ ಬೆಲೆ ದುಬಾರಿ, ಕಾಮರ್ಿಕರ ಕೊರತೆ, ಬೀಜಗಳ ದುಬಾರಿ, ನೀರಿನ ಆಭಾವ, ಮಾರುಕಟ್ಟೆಯಲ್ಲಿ ಬೆಲೆಗಳ ಏರಿಳಿತ ಹಾಗೂ ವಿದ್ಯುತ ಕಡಿತ ದಂತಹ ಹಲವಾರು ಸಮಸ್ಯೆಗಳಿಗೆ ಸಿಲುಕಿ ಒಕ್ಕಲುತನದಿಂದ ರೋಸಿಹೋಗಿದ್ದಾರೆ.
ಕಬ್ಬು ಬೆಳೆದ ರೈತರಲ್ಲಿ ನಿರಾಶೆ: ಪ್ರಸಕ್ತ ಸಾಲಿನ ಕಬ್ಬು ನುರಿಯುವ ಹಂಗಾಮು ಪ್ರಾರಂಭಗೊಂಡು ಸುಮಾರು 75 ದಿನಗಳಾದರೂ ಕಬ್ಬು ಕಳುಹಿಸಿದ ರೈತರಿಗೆ ಸಕ್ಕರೆ ಕಾರಖಾನೆಯರು ಒಂದು ಪೈಸೆಯೂ ಬಿಲ್ ನೀಡದೆ ಇರುವುದರಿಂದ ಕಾರಖಾನೆಗಳ ಮಾಲಿಕರ ವಿರುದ್ಧ ಅಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಸಾಮಾನ್ಯವಾಗಿ ರೈತರು ಕಬ್ಬನ್ನು ಕಾರಖಾನೆಗೆ ಕಳುಹಿಸಿದ 15 ದಿನಗಳಲ್ಲಿ ಹಣ ಪಾತಿಸುವುದು ಕಾನೂನು ಇದೆ ಆದರೆ ಕಬ್ಬು ಕಳುಹಿಸಿ 2 ತಿಂಗಳ ಗತಿಸಿದರೂ ರೈತರಿಗೆ ಹಣ ಸಂದಾಯ ಮಾಡದೆ ಇರುವುದು ದುರಾದೃಷ್ಟ ಸಂಗತಿಯೇ ಸರಿ!
ಚಿಕ್ಕೋಡಿ ತಾಲೂಕಿನ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬನ್ನೆ ಬೆಳೆಸುತ್ತಾರೆ. ಆದರೆ ರಾಸಾಯನಿಕ ಗೊಬ್ಬರ ಬೆಲೆ ದುಬಾರಿ ಮತ್ತು ಕಾರಖಾನೆಯರು ಹಣ ಸಂದಾಯ ಮಾಡದೆಯಿರುವುದು ರೈತರಿಗೆ ಬಿಸಿ ತುಪ್ಪಾಗಿ ಪರಿಣಮಿಸಿರುವುದು ಮಾತ್ರ ಸತ್ಯ!