ವಿದ್ಯಾರ್ಥಿನಿಯರಿಗೆ ಮಹಿಳಾ ಕಂಡಕ್ಟರ್ ದರ​‍್: ಸಾರಿಗೆ ಸಿಬ್ಬಂದಿ ಮೇಲೆ ಕ್ರಮಜರುಗಿಸಲು ವಿದ್ಯಾರ್ಥಿನಿಯರ ಆಗ್ರಹ

Female conductor rate for students: Students demand action on transport staff

ವಿದ್ಯಾರ್ಥಿನಿಯರಿಗೆ ಮಹಿಳಾ ಕಂಡಕ್ಟರ್ ದರ​‍್: ಸಾರಿಗೆ ಸಿಬ್ಬಂದಿ ಮೇಲೆ ಕ್ರಮಜರುಗಿಸಲು ವಿದ್ಯಾರ್ಥಿನಿಯರ ಆಗ್ರಹ

ರಾಣೇಬೆನ್ನೂರ 13: ನಗರದ ಹೊರವಲಯದಲ್ಲಿರುವ ಹಲಗೇರಿ ರಸ್ತೆಯ ಎಸ್‌.ಆರ್‌.ಕೆ ಬಡಾವಣೆ ಹತ್ತಿರದ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಕಡ್ಡಾಯವಾಗಿ ಬಸ್ ನಿಲ್ಲಿಸಲು ಹಾಗೂ ವಿದ್ಯಾರ್ಥಿನಿಯರಿಗೆ ದರ​‍್, ಅನುಚಿತ ವರ್ತನೆ ತೋರಿದ ಮಹಿಳಾ ಕಂಡಕ್ಟರ್ ಮೇಲೆ ಶಿಸ್ತು ಕ್ರಮ ಜರುಗಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ನೇತೃತ್ವದಲ್ಲಿ  ವಿದ್ಯಾರ್ಥಿನಿಯರು ಸಾರಿಗೆ ನಿಯಂತ್ರಣಾಧಿಕಾರಿ ಉಮೇಶ್ ನಾಯಕ ಅವರ ಮೂಲಕ ಘಟಕ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.  

ನಗರದ ಹೊರವಲಯದಲ್ಲಿ ಬಾಲಕಿಯರ ವಸತಿ ನಿಲಯವಿದ್ದು 150ಕ್ಕೂ ಅಧಿಕ ವಿದ್ಯಾರ್ಥಿನಿಯರು ನಗರದ ವಿವಿಧ ಕಾಲೇಜುಗಳಿಗೆ ಪ್ರತಿನಿತ್ಯ ತೆರಳುತ್ತಾರೆ. ಅಧಿಕೃತವಾಗಿ ಕೋರಿಕೆ ನಿಲುಗಡೆಗೆ ಅವಕಾಶವಿದ್ದು ವಿದ್ಯಾರ್ಥಿನಿಯರನ್ನು ನಗರದ ಕೇಂದ್ರ ಬಸ್ ನಿಲ್ದಾಣದಿಂದ ಹತ್ತಿಸಿಕೊಂಡು ವಸತಿ ನಿಲಯಕ್ಕೆ ನಿಲ್ಲಿಸದೆ 8 ಕಿ ಮೀ  ದೂರದ ಹಲಗೇರಿ ಗ್ರಾಮಕ್ಕೆ ಬಿಡುತ್ತಾರೆ ಇಲ್ಲವೇ ನಡು ರಸ್ತೆಯಲ್ಲಿ ಇಳಿಸಿ ಹೋಗುತ್ತಾರೆ. ಈ ರೀತಿಯ ಅಮಾನವೀಯವಾಗಿ ವಿದ್ಯಾರ್ಥಿನಿಯರನ್ನು ಕೆಲ ಕಂಡಕ್ಟರ್ ಹಾಗೂ ಡ್ರೈವರ್ ಗಳು ನಡೆಸಿಕೊಳ್ಳುವ ರೀತಿಯನ್ನು ಎಸ್‌ಎಫ್‌ಐ ತೀವ್ರವಾಗಿ ಖಂಡಿಸುತ್ತದೆ.ಪ್ರತಿನಿತ್ಯವೂ ನಿಲ್ಲದ ಬಸ್ ಗಳ ಪೈಕಿ ದಿನಾಂಕ:- 12.12.2024 ಗುರುವಾರ ರಂದು ಬಸ್ ಸಂಖ್ಯೆ ಕೆಎ42 ಎಫ್ 0725 ಗಾಡಿಗೆ ಅಡ್ಡಾಗಟ್ಟಿ ಬಸ್ ನಿಲ್ಲಿಸಿ ಹತ್ತಿದ ವಿದ್ಯಾರ್ಥಿನಿಯರಿಗೆ ಮಹಿಳಾ ಕಂಡಕ್ಟರ್  ನಮ್ಮ ಬಸ್ ಮಾತ್ರವೇ ಇರೋದಾ? ಬೇರೆ ಬಸ್ ಗೆ ಹೋಗಿ ನಮ್ಮ ಬಸ್ ಹತ್ತಬೇಡಿ ನಿಲ್ಲಿಸಬೇಡಿ ಎಂದು ಇದೆ ಕೊನೆ ಇನ್ನೊಮ್ಮೆ ಈ ರೀತಿ ನಮ್ಮ ಬಸ್ ಗೆ ಬಂದರೆ ಸರಿ ಇರುವುದಿಲ್ಲ ಎಂದು ಕೈ ಮಾಡಿ ದರ​‍್ ತೋರಿದಲ್ಲದೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು ವಸತಿ ನಿಲಯದ ವಿದ್ಯಾರ್ಥಿನಿಯರು ದೂರಿದ್ದಾರೆ.ವಿದ್ಯಾರ್ಥಿನಿಯರು ಇದೆ ಸಮಸ್ಯೆ ಪರಿಹಾರಕ್ಕಾಗಿ ರಸ್ತೆ ತಡೆಮಾಡಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಿ ಅರ್ಧವಾರ್ಷಿಕ ಕಳೆದಿಲ್ಲ ಹೀಗೆ ಪದೇ ಪದೇ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ, ದರ​‍್ಪಕಕೆ ಕೊನೆ ಎಂದು?  ಈ ರೀತಿಯ ಅಮಾನವೀಯವಾಗಿ ನಡೆದುಕೊಳ್ಳುತ್ತಿರುವ ಕಂಡಕ್ಟರ್ ಮತ್ತು ಡ್ರೈವರ್ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಹಲಗೇರಿ ಮಾರ್ಗವಾಗಿ ತೆರಳುವ ಶಿಕಾರಿಪುರ, ರಟ್ಟಿಹಳ್ಳಿ, ಮಾಸೂರ ಹಿರೆಕೇರೂರ, ಅಂತರವಳ್ಳಿ ಸೇರಿದಂತೆ ಎಲ್ಲಾ ಬಸ್ ಗಳು ಕಡ್ಡಾಯವಾಗಿ ನಿಲ್ಲಿಸಲು ಆದೇಶ ಹೊರಡಿಸಬೇಕೆಂದು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಶಾಲಾ-ಕಾಲೇಜ್ ವಿದ್ಯಾರ್ಥಿಗಳಿಂದ ಬಸ್ ನಿಲ್ದಾಣ ಬಂದ್ ಮಾಡಲಾಗುವುದು ಎಂದು ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಆಗ್ರಹಿಸಿದರು.ವಿದ್ಯಾರ್ಥಿನಿಯರ ಜೊತೆಗೆ ನಿರ್ವಾಹಕರು ಸೌಜನ್ಯದಿಂದ ವರ್ತಿಸುವುದಿಲ್ಲ. ಬೇಕಾಬಿಟ್ಟಿಯಾಗಿ ಮಾತನಾಡುತ್ತಾರೆ.  ವಿದ್ಯಾಭ್ಯಾಸಕ್ಕಾಗಿ ಬಂದಿರುವ ನಾವು ಎಲ್ಲವನ್ನೂ ಸಹಿಸಿಕೊಂಡು ಬಸ್ನಲ್ಲಿ ಪ್ರಯಾಣಿಸುತ್ತಿದ್ದೇವೆ ವಿದ್ಯಾರ್ಥಿನಿಯರ ಜೊತೆ ಸೌಜನ್ಯದಿಂದ ವರ್ತಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಬುದ್ಧಿವಾದ ಹೇಳಬೇಕು. ಇಲ್ಲದಿದ್ದರೆ ಘಟಕ ವ್ಯವಸ್ಥಾಪಕರ ವಿರುದ್ಧವೂ ಪ್ರತಿಭಟನೆ ನಡೆಸಲಾಗುವುದು ಎಂದು ಹಾಸ್ಟೆಲ್ ವಿದ್ಯಾರ್ಥಿನಿ ಶ್ವೇತಾ ವಿ ಎಚ್ಚರಿಸಿದರು.ಅನೇಕ ಬಾರಿ ಮನವಿ ಪತ್ರ ನೀಡಿದ್ದೆವೆ ಅದರ ಪರಿಣಾಮವಾಗಿ ಕೆಲವು ದಿನಗಳ ಕಂಟ್ರೋಲ್ ನೇಮಕ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ, ಪ್ರತಿದಿನವೂ ನಿಲ್ಲದೆ ಇರುವ ಬಸ್ ಪೋಟೋ, ವಿಡಿಯೋ ಮಾಡಿ ಘಟಕ ವ್ಯವಸ್ಥಾಪಕರು, ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಕಳಿಸಿದ್ದೆವೆ ಯಾವುದೇ ರೀತಿಯ ಸ್ಪಂದನೆ ಸಿಗದೆ ಅನಿವಾರ್ಯವಾಗಿ ಬೀದಿಯಲ್ಲಿ ನ್ಯಾಯ ಕೇಳುವುದಾಗಿದೆ ಎಂದು ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿನಿಯರು ಬೇಸರ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡರಾದ ನಂದೀಶ್ ಕುರುವತ್ತಿ, ಹಾಲಸ್ವಾಮಿ ಜಿ ಪಿ, ನಂದೀಶ್ ಅಸ್ವಾಲಿ, ಪುನೀತ್ ಬಣಗಾರ, ವಿದ್ಯಾರ್ಥಿನಿಯರಾದ ಐಶ್ವರ್ಯ ಎಸ್ ಎಚ್, ಸಂಗೀತಾ ಎಲ್ ಎಸ್, ಅನುಷ್ ಬಿ ಕೆ, ನಿವೇದಿತಾ ಬಿ, ಅಶ್ವಿನಿ ಬಿ ಕೆ, ನಾಗವೇಣಿ ಬಿ, ಶೈಲಾ ಎಮ್ ಆರ್  ಅಶ್ವಿನಿ ಯು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.