ಫೆಬ್ರುವರಿ 15 ರಿಂದ 33 ದಿನಗಳು:ರಾಜ್ಯಾದಂತ ಅರಣ್ಯವಾಸಿಗಳ ಕಾನೂನು ಜಾಗೃತ ಜಾಥಾ-2025 -ರವೀಂದ್ರ ನಾಯ್ಕ
ಕಾರವಾರ 10 : ಅರಣ್ಯ ಭೂಮಿ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಮೂರು ತಲೆಮಾರಿನ ದಾಖಲೆಯ ಶರತ್ತು, ಕೈ ಬಿಡಿ ಅರಣ್ಯ ಭೂಮಿ ಹಕ್ಕು ನೀಡಿ ಎಂಬ ಶಿರೋನಾಮೆ ಅಡಿಯಲ್ಲಿ 5 ಪ್ರಮುಖ ಅಂಶಕ್ಕೆ ಸಂಬಂಧಿಸಿ 500 ಕ್ಕೂ ಮಿಕ್ಕಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ರಾಜ್ಯಾದಂತ ಅರಣ್ಯವಾಸಿಗಳ ಕಾನೂನು ಜಾಗೃತ ಜಾಥಾ 2025 ನ್ನು ಪೆ.15 ರಿಂದ 33 ದಿನಗಳ ಕಾಲ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.ಅವರು ಸೋಮವಾರ ಕಾರವಾರದ ಪತ್ರಿಕಾ ಭವನದಲ್ಲಿ ಅರಣ್ಯವಾಸಿಗಳಿಗೆ ಗುರುತಿನ ಪತ್ರ ವಿತರಿಸಿ ಪತ್ರಿಕಾಗೋಷ್ಠಿ ಮಾಡಿದರು.ಅರಣ್ಯವಾಸಿಗಳ ಜಾಥವು ಉತ್ತರ ಕನ್ನಡ ಜಿಲ್ಲೆಯ 163 ಗ್ರಾಮಪಂಚಾಯತಿ ವ್ಯಾಪ್ತಿಯೊಂದಿಗೆ, ಹೋರಾಟಗಾರರ ಸಂಘಟನೆಯ ರಾಜ್ಯದ 16 ಜಿಲ್ಲೆಗಳಲ್ಲಿ ಜಾಗೃತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಇರುತ್ತದೆ ಎಂದು ಅವರು ಹೇಳಿದರು.ರಾಜ್ಯಾದಂತ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಕಳೆದ 33 ವರ್ಷದಿಂದ ಸಾಂಘಿಕ ಮತ್ತು ಕಾನೂನತ್ಮಕ ವಿವಿಧ ರೀತಿಯ ಹೋರಾಟದ ಹಿನ್ನಲೆಯಲ್ಲಿ ಅರಣ್ಯವಾಸಿಗಳ ಜಾಥಾವು ಅರಣ್ಯವಾಸಿಗಳ ಕಾನೂನು ಜ್ಞಾನವನ್ನ ಹೆಚ್ಚಿಸುವ ಚಿಂತನೆಯನ್ನು ಇಟ್ಟುಕೊಳ್ಳಲಾಗಿದೆ ಎಂದು ಅವರು ಹೇಳಿದರು.ಕರ್ನಾಟಕ ರಾಜ್ಯದ 25 ಜಿಲ್ಲೆಗಳಲ್ಲಿ 2,95,048 ಅರ್ಜಿಗಳನ್ನ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳು ಸಲ್ಲಿಸಿದ್ದು ಇರುತ್ತದೆ. ಅವುಗಳಲ್ಲಿ, 15,798 ಅರ್ಜಿಗಳಿಗೆ ಮಾತ್ರ ಹಕ್ಕು ಪತ್ರ ದೊರಕಿದೆ. ಬಂಧಿರುವಂತಹ ಅರ್ಜಿಗಳಲ್ಲಿ ಪ್ರಥಮ ಹಂತದಲ್ಲಿ 1,84,358 ಅರ್ಜಿಗಳು ತಿರಸ್ಕಾರ ಆಗಿರುವುದು ವಿಷಾದಕರ. ಬಂದಿರುವಂತಹ ಅರ್ಜಿಗಳಲ್ಲಿ ಶೇ.62.48 ಅರ್ಜಿಗಳು ತಿರಸ್ಕಾರವಾಗಿರುತ್ತದೆ ಎಂದು ಅವರು ಹೇಳಿದರು.ಪೆ.15 ಕ್ಕೆ ಹೊನ್ನಾವರದಲ್ಲಿ ಚಾಲನೆ:ಅರಣ್ಯವಾಸಿಗಳ ಜಾಥಾ ಪೆ.15 ರಂದು ಹೊನ್ನಾವರದಲ್ಲಿ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ತದನಂತರ ದಿನಗಳಲ್ಲಿ ಹೋರಾಟದ ವಾಹಿನಿಗಳ ಮೂಲಕ ರಾಜ್ಯಾದಂತ ಸಂಚಾರಿಸಲಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕರಾದ ಇಬ್ರಾಹಿಂ ಗೌಡಳ್ಳಿ, ಕುಮಟ ಅಧ್ಯಕ್ಷರಾದ ಮಂಜುನಾಥ ಮರಾಠಿ, ಯಲ್ಲಾಪುರ ಅಧ್ಯಕ್ಷ ಭೀಮಶಿ ವಾಲ್ಮೀಕಿ, ಗ್ರೀನ್ ಕಾರ್ಡ ಪ್ರಮುಖರಾದ ಅಮೋಸ ಸ ಈದಾ, ಪೆಂಚಲಯ್ಯ ಕೊಸಿನಪೊಗು ಮುಂತಾದವರು ಉಪಸ್ಥಿತರಿದ್ದರು.....,........