ಲೋಕದರ್ಶನ ವರದಿ
ಗಂಗಾವತಿ 26: ದೇಶದಲ್ಲಿ ರೇಲ್ವೆ ಕ್ಷೇತ್ರದಲ್ಲಿ ಜಾಫರ್ಷರೀಪ್ ಅವರು ಬೃಹತ್ ಕ್ರಾಂತಿಯನ್ನು ಮಾಡಿದ್ದರು ಎಂದು ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷ ಮತ್ತು ನಗರಸಭೆ ಸದಸ್ಯ ಶಾಮೀದ್ ಮನಿಯಾರ್ ತಿಳಿಸಿದರು.
ಭಾನುವಾರ ನಿಧನರಾದ ಕೇಂದ್ರದ ಮಾಜಿ ರೇಲ್ವೆ ಸಚಿವ ಜಾಫರ್ಷರೀಪ್ ಅವರಿಗೆ ಗಾಂಧಿ ವೃತ್ತದಲ್ಲಿ ಪಕ್ಷದವತಿಯಿಂದ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಮಾಜಿ ಪ್ರಧಾನಿ ಇಂದಿರಾಗಾಂಧಿ ಕುಟುಂಬದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಷರೀಫರು ರೇಲ್ವೆ ಖಾತೆ ಸಚಿವರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರು. ಅವರ ಆಡಳಿತದ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ಇಲ್ಲದೆ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಿದ ಕೀತರ್ಿ ಇವರಿಗೆ ಸಲ್ಲುತ್ತದೆ ಎಂದು ಹೇಳಿದರು. ಇವರ ಅಗಲಿಕೆ ದೇಶದ ಅಲ್ಪಸಂಖ್ಯಾತರ ಸಮುದಾಯಕ್ಕೆ ಮಾತ್ರ ನಷ್ಟವಾಗಿರದೆ ಇಡೀ ದೇಶಕ್ಕೆ ನಷ್ಟವಾಗಿದೆ ಎಂದು ಹೇಳಿದರು. ನಗರಸಭೆ ಸದಸ್ಯ ಮನೋಹರಸ್ವಾಮಿ ಮುದೇನೂರು ಹಿರೇಮಠ, ಖಾಸಿಂಅಲಿ ಮುದ್ದಾಬಳ್ಳಿ, ಬಳ್ಳಾರಿ ರಾಮಣ್ಣನಾಯಕ, ಕಮ್ಲಿಬಾಬಾ ಪಾಲ್ಗೊಂಡಿದ್ದರು.