ಪಂಚೇಂದ್ರಿಯಗಳ ನಿಗ್ರಯವೆ ರಂಜಾನ್ ಮಾಸದ ಉಪವಾಸ

Fasting in the month of Ramadan is a feast for the five senses

ಪಂಚೇಂದ್ರಿಯಗಳ ನಿಗ್ರಯವೆ ರಂಜಾನ್ ಮಾಸದ ಉಪವಾಸ 

ಕೊಪ್ಪಳ  24: ನಗರದ ವಿವಿಧ ಜಾಮಿಯಾ ಮಸೀದಿಗಳಿಗೆ ಇಪ್ತಿಯಾರ ಸೌಹಾರ್ದತೆಯ ಕೂಟದಲ್ಲಿ ಭಾಗವಹಿಸಿ ಬಳಿಕ ಮಾತನಾಡಿದ ಕೊಪ್ಪಳ ಸಂಸದ ಕೆ. ರಾಜಶೇಖರ ಹಿಟ್ನಾಳರವರು ರಂಜಾನ್ ಹಬ್ಬವು ಸಮಾನತೆ ಸಾರುವ ಹಬ್ಬವಾಗಿದ್ದು, ದೀನ ದಲಿತರ ಹಾಗೂ ಬಡವರಿಗೆ ಸ್ಥಿತಿವಂತರು ದಾನದ ಮೂಲಕ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿ ಸಮಾಜದಲ್ಲಿ ಮೇಲು ಕೀಳು ಎಂಬುವುದು ದೂರ ಮಾಡುವುದೆ ರಂಜಾನ್ ಮಾಸದ ಉದ್ದೇಶವಾಗಿದೆ ಇಸ್ಲಾಂ ಧರ್ಮದಲ್ಲಿ “ಜಕಾತ್‌” ಪದ್ದತಿಯು ಕಡ್ಡಾಯವಾಗಿದ್ದು ಪ್ರತಿಯೊಬ್ಬ ಮುಸಲ್ಮಾನರು ತಾವು ಸಂಪಾದಿಸುವ ಹಣದಲ್ಲಿ ಬಡವರ ಪಾಲನ್ನು ಕಡ್ಡಾಯವಾಗಿ ಕೊಟ್ಟಗಾ ಮಾತ್ರ ಆ ಸೃಷ್ಟಿಕರ್ತನ ಕೃಪೆಗೆ ಪಾತ್ರರಾಗುತ್ತಾರೆ.  ರಂಜಾನ್ ಉಪವಾಸು ಹಸಿವಿನ ಅರಿವನ್ನು ಮೂಡಿಸಿ ಬಡಜನತೆ ಹಸಿವಿನಿಂದ ಪರಿತಪ್ಪುಸು ಅನುಭವ ರಂಜಾನ್ ಉಪವಾಸ ಮಾಡುವವರಿಗೆ ಅರಿವು ಮೂಡಿಸುತ್ತದೆ.  ರಂಜಾನ್ ಉಪವಾಸವು ಕೇವಲ ಉದರದ ಬಕ್ಷ ಭೋಜನಗಳನ್ನು ನಿಯಂತ್ರಿಸುವುದಲ್ಲದೇ ಪಂಚೇಂದ್ರಿಗಳನ್ನು ನಿಗ್ರಹಿಸಿ ಸೃಷ್ಟಿಕರ್ತನಿಗೆ ಶರಣಾಗುವುದೆ ರಂಜಾನ್ ಮಾಸದ ಧೇಯ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ. ಬಸವರಾಜ ಹಿಟ್ನಾಳ ಧರ್ಮ ಗುರುಗಳಾದ ಮುಪ್ತಿ ನಜೀರ್ ಅಹಮ್ಮದ್ ತಸ್ಕಿನ್ ಖಾದ್ರಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ ಪಾಷ ಪಲ್ಟನ್ ಮುಖಂಡರುಗಳಾದ ವಿಶ್ವನಾಥ ರಾಜು ಬಾಷು ಸಾಬ ಖತ್ತಿಬ್ ಕಾಟನ್ ಪಾಷ ಕೆ.ಎಂ ಸೈಯದ್ ಇಬ್ರಾಯಿಮ್ ಅಡ್ಡೆವಾಲೆ ಅಜುಮುದ್ದಿನ್ ಅತ್ತಾರ ಇಕ್ಬಾಲ ಸಿದ್ದಿಕಿ ಮುನೀರ್ ಪಾಷ ಬಾಬ ಅರಗಂಜಿ ಮಾನ್ವಿ ಪಾಷ ಹುಸೇನೆ ಪೀರಾ ಮುಜಾವರ್ ಜಾಫರ್ ಸಂಗಟಿ ಮೌಲಾಹುಸೇನ ಜಮೇದಾರ ಗೈಬುಸಾಬ ವಕೀಲ್ ಸಿರಾಜ್ ಮನಿಯಾರ ಪಾಷ ತಳಕಲ್ಲ್‌ ಹಾಗೂ ಇನ್ನೀತರ ಮುಖಂಡರ ಉಪಸ್ಥಿತರಿದ್ದರು.