ಇಂದು ಟಿ.ಬಿ.ಡ್ಯಾಂನಲ್ಲಿ ರೈತರ ಬೃಹತ್ ಪ್ರತಿಭಟನೆ

ಲೋಕದರ್ಶನ ವರದಿ

ಕಂಪ್ಲಿ12: ತುಂಗಭದ್ರ ಬಲದಂಡೆ ಕೆಳಮಟ್ಟದ ಕಾಲುವೆಗೆ ಎರಡನೇ ಬೆಳೆಗೆ ನೀರು ಹಾಯಿಸುವಂತೆ ಆಗ್ರಹಿಸಿ, ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಕನರ್ಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ಜಿಲ್ಲಾ ಸಮಿತಿಯಿಂದ ಇದೇ ನ.13ರ ಮಂಗಳವಾರದಂದು ಟಿ.ಬಿ.ಡ್ಯಾಂನಲ್ಲಿ ರೈತರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕನರ್ಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಂಪ್ಲಿ ನಗರ ಘಟಕ ಅಧ್ಯಕ್ಷ ಕೆ.ಸುದರ್ಶನ ಹೇಳಿದರು.

      ತಾಲೂಕಿನ ಅತಿಥಿ ಗೃಹದ ಆವರಣದಲ್ಲಿ, ಕಂಪ್ಲಿ ನಗರ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಸಂಘಟನಾ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿ, ಕಳೆದ ನಾಲ್ಕೈದು ವರ್ಷದಿಂದ ರಾಜ್ಯದಲ್ಲಿ ಬರಗಾಲ ಆವರಿಸಿದೆ. ಈ ವರ್ಷ ತುಂಗಭದ್ರ ಜಲಾಶಯವು ತುಂಬಿದೆ. ಬಲದಂಡೆ ಕೆಳಮಟ್ಟದ ಕಾಲುವೆಗೆ ನಿಗಧಿ ಪ್ರಕಾರ 13 ಟಿ.ಎಂ.ಸಿ ನೀರಿದ್ದು, ಇದರಲ್ಲಿ ಈತನಕ 6.75 ಟಿಎಂಸಿ ನೀರು ಬಳಕೆಯಾಗಿದೆ. ಇನ್ನೂಳಿದ 6.25 ಟಿಎಂಸಿ ನೀರು ಲಭ್ಯವಿದೆ. ಆದರೆ, ಟಿಬಿ ಬೋಡರ್್ ಅಧಿಕಾರಿಗಳ ಕಣ್ಣಾಮುಚ್ಚಾಲೆ ನಡುವೆ ಬಲದಂಡೆ ಕಾಲುವೆಗೆ ಎರಡನೇ ಬೆಳೆಗೆ ನೀರು ಸಿಗುವುದಿಲ್ಲ ಎಂಬ ಮಾತುಗಳನ್ನಾಡುತ್ತಿದ್ದಾರೆ. ಕಳದೆ 4-5 ವರ್ಷದ ಬರಗಾಲದಲ್ಲಿ ರೈತರು ಬೆಂದು ಹೋಗಿದ್ದಾರೆ. ಈ ಸಲ ತುಂಗಭದ್ರ ಜಲಾಶಯದಲ್ಲಿ ನೀರಿರುವುದರಿಂದ ಎರಡನೇ ಬೆಳೆಗೆ ನೀರು ಹಾಯಿಸಬೇಕಾಗಿದೆ. ಅದಕ್ಕಾಗಿ ಕನರ್ಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ಜಿಲ್ಲಾ ಸಮಿತಿಯಿಂದ ಟಿಬಿ ಡ್ಯಾಂನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಕಂಪ್ಲಿ ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕೆಂದು ಕೋರಿದರು.

ಇದೇ ಸಭೆಯಲ್ಲಿ ತಾಲೂಕು ಉಪಾಧ್ಯಕ್ಷ ಕೊಟ್ಟೂರ್ ರಮೇಶ್, ಜಿಲ್ಲಾ ಉಪಾಧ್ಯಕ್ಷ ವಿ.ಟಿ.ನಾಗರಾಜ, ರೈತರಾದ ಡಿ.ಮುರಾರಿ, ವಲಿಬಾಷಾ, ಅಂಚೆ ಅಜರುದ್ದೀನ್, ಅಕ್ಬರ್, ಎಂ.ಹರ್ಷದ್, ದೇವೇಂದ್ರ, ಟಿ.ಗಂಗಣ್ಣ, ಕೆ.ವೆಂಕಟೇಶ್ ಸೇರಿ ಇತರರು ಇದ್ದರು.