ಲೋಕದರ್ಶನ ವರದಿ
ವಿಜಯಪುರ 25: ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ರೈತರ ಆತ್ಮಹತ್ಯೆಯ ವಿಷಯವಾಗಿ ಬೇಜವಾಬ್ದಾರಿ ಹೇಳಿಕೆ ನೀಡಿರುವ ತೋಟಗಾರಿಕಾ ಸಚಿವ ಎಂ.ಸಿ. ಮನಗೂಳಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ
ಜಯ ಕನರ್ಾಟಕ ಸಂಘಟನೆ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸಂಘಟನೆಯ ಪ್ರಮುಖ ಮಹೇಶ ನಾಯಕ ಮಾತನಾಡಿ, ಕಳೆದೆರಡು ದಿನಗಳ ಹಿಂದೆ ದಾವಣಗೆರೆಯಲ್ಲಿ ರಾಜ್ಯ ಸಕರ್ಾರದ ತೋಟಗಾರಿಕೆ ಸಚಿವ ಹಾಗು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಅವರು ರೈತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ, ರೈತರ ಆತ್ಮಹತ್ಯೆಗೆ ಡೆತ್ ನೋಟ್ ನ ಮಾಹಿತಿ ಒಂದೇ ಅಂತಿಮವಲ್ಲ. ವೈದ್ಯರ ವರದಿ, ಎಫ್ಐಆರ್ ನ ಮಾಹಿತಿ ಬಂದ ನಂತರ ರೈತರ ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಲಿದೆ. ಇನ್ನೂ ಸಾಯುವವರನ್ನು ನಾವು ಹಿಡಿಯುವುದಕ್ಕೆ ಆಗುವುದಿಲ್ಲ, ರೈತರು ಗೊತ್ತಿಲ್ಲದಂತೆ ವಿಷ ಕುಡಿದರೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಾಗಲಿ, ನಾನಾಗಲಿ ಏನು ಮಾಡುವುದಕ್ಕಾಗುವುದಿಲ್ಲ ಎಂದು ಅತ್ಯಂತ ಬೇಜವಾಬ್ದಾರಿಯಿಂದ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಎಂ.ಸಿ.ಮನಗೂಳಿ ರಾಜ್ಯ ಸಚಿವ ಸಂಪುಟದ ಅತ್ಯಂತ ಹಿರಿಯ ಸಚಿವರು, ಮೇಲಾಗಿ ಅನುಭವಿ ರಾಜಕಾರಣಿ. ಇಂತಹ ಬೆಜವಾಬ್ದಾರಿ ಸಚಿವರು ಹಿಂದುಳಿದ ಹಾಗು ರೈತ ಜಿಲ್ಲೆಯಾಗಿರುವ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರಾಗಿರೋದು ವಿಜಯಪುರ ಜಿಲ್ಲೆಯವರಾದ ನಮಗೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ಕೃಷ್ಣಾ ಭೋಸಲೆ ಮಾತನಾಡಿ, ಎಂ.ಸಿ. ಮನಗೂಳಿ ಅವರಂತಹ ತಲೆಕೆಟ್ಟ ಸಚಿವರನ್ನು ರಾಜ್ಯ ಸಕರ್ಾರ ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು, ಅವರ ವಿರುದ್ದ ಕ್ರಮ ಜುರುಗಿಸಬೇಕು ಎಂದು ಒತ್ತಾಯಿಸಿದರು.
ರಾಜು ಹಿರೇಮಠ, ಅನೀಲ ಚವ್ಹಾಣ, ಸಂಗಮೇಶ ಗೌಡಾ ದಾಶ್ಯಾಳ, ಸೋಮನಿಂಗ ಮೇತ್ರಿ , ಪಿಂಟು ಗೊಬ್ಬೂರ, ಮೈಬೂಬ ಕಾಳಗಿ, ಹುಸೇನಬಾನು, ಯಶೋಧಾ ಸಾಗರ, ಸದಾಶಿವ ಚವ್ಹಾಣ, ಸಾಗರ ಶೇರಖಾನ, ಮಂಜುನಾಥ ಬೆಳವೆ, ಶಿವಾನಂದ ಚಿಕ್ಕೋಡಿ, ಸದಾಶಿವ ಚವ್ಹಾಣ, ಮುಬಾರಕ ಅಮದಿ ಪಾಲ್ಗೊಂಡಿದ್ದರು.
ಬಿಜೆಪಿ ರೈತ ಮೋಚರ್ಾ ಖಂಡನೆ:
ಮಂಡ್ಯ ಜಿಲ್ಲೆಯ ಮೇಲುಕೋಟೆ ತಾಲೂಕಿನ ರೈತ ನಂದೀಶ ಸಾಲೆಬಾಧೆ ತಾಳಲಾರದೆ ತನ್ನ ಕುಟುಂಬದ ಸದಸ್ಯರೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ರಾಜ್ಯದ ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಅತ್ಯಂತ ಹಗುರವಾಗಿ ಮಾತನಾಡಿರುವ ಕ್ರಮವನ್ನು ಬಿಜೆಪಿ ರೈತ ಮೋಚರ್ಾ ಜಿಲ್ಲಾಧ್ಯಕ್ಷ ಅನೀಲ ಜಮಾದಾರ ಹಾಗೂ ಪದಾಧಿಕಾರಿಗಳು ತೀವ್ರವಾಗಿ ಖಂಡಿಸಿದ್ದಾರೆ. ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿ ತನ್ನ ನೋವನ್ನು ತೋಡಿಕೊಂಡಿರೋ ರೈತ ನಂದೀಶ ಮತ್ತು ಅವನ ಕುಟುಂಬದ ಸಾವಿಗೆ ನೇರವಾಗಿ ಕುಮಾರಸ್ವಾಮಿ ನೇತೃತ್ವದ ರಾಜ್ಯಸಕರ್ಾರ ಹೊಣೆಯಾಗಿದ್ದು ಇಂತಹ ಸಂದರ್ಭದಲ್ಲಿ ಸಾಂತ್ವನದ ಮಾತುಗಳಾಡುವದನ್ನು ಬಿಟ್ಟು ತಲೆತಿರುಕನಂತೆ ಹೇಳಿಕೆ ನೀಡಿರುವ ಸಚಿವ ಎಂ.ಸಿ. ಮನಗೂಳಿಯನ್ನು ಕೂಡಲೆ ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.