ಲೋಕದರ್ಶನ ವರದಿ
ಹೂವಿನಹಡಗಲಿ 24:ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಹಡಗಲಿ ಹಾಗೂ ಕೃಷಿ ಇಲಾಖೆ, ಹೂವಿನಹಡಗಲಿಯ ಆತ್ಮ ಯೋಜನೆಯಡಿಯಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಹಡಗಲಿ ಕೇಂದ್ರದಲ್ಲಿ ರೈತರ ದಿನಾಚಾರಣೆ" ಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ. ತವಣಪ್ಪ, ಕéೃಷಿ ಅಧಿಕಾರಿ, ಕೃಷಿ ಇಲಾಖೆ, ಹೂವಿನಹಡಲಿ ರವರು ವಹಿಸಿದ್ದು, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ರೈತರನ್ನು ಉದ್ದೇಸಿಸಿ ಮಾತನಡುತ್ತಾ ಕೃಷಿ ಇಲಾಖೆಯಲ್ಲಿರುವ ಯೋಜನೆಗಳ ಬಗ್ಗೆ ಮಾಹಿತಿ ನಿಡಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಹಡಗಲಿಯ ವಿಸ್ತರಣಾ ಮುಖ್ಯಸ್ಥರಾದ ಹನುಮಂತಪ್ಪ ಶ್ರೀಹರಿರವರು ಚೌಧರಿ ಚರಣ್ ಸಿಂಗ್ (23ನೇ ಡಿಸೆಂಬರ್, 1902 ರಿಂದ 29ನೇ ಮೇ, 1987) 28ನೇ ಜುಲೈ, 1979 ರಿಂದ 14ನೇ ಜನವರಿ, 1980 ರವರೆಗೂ ಭಾರತದ ಐದನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಪ್ರದಾನಿಯಾಗಿ ಅಧಿಕಾರ ವಹಿಸಿಕೊಂಡಾಗ ಭಾರತದಲ್ಲಿ ರೈತರ ಜೀವನವನ್ನು ಸುಧಾರಿಸಲು ಹಲವು ನೀತಿಗಳನ್ನು ಪರಿಚಯಿಸಿದರು. ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿಗೆಯಾಗುತ್ತಿದೆ, ಇದರಿಂದ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಆದ್ದರಿಂದ, ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸುವುದರಿಂದ ವಾತಾವರಣ ಮತ್ತು ಮಣ್ಣಿನ ಮೇಲೆ ಉತ್ತಮ ಪರಿಣಾಮ ಉಂಟಾಗುತ್ತದೆೆ ಎಂದು ವಿವರಿಸುತ್ತಾ ಪ್ರಾಸ್ತಾವಿಕ ನುಡಿಯನ್ನು ನುಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ತಾಲೂಕು ಕೃಷಿಕ ಸಂಘದ ಅಧ್ಯಕ್ಷರಾದ ಪಿ. ವಿ. ಬಸವರಾಜ ರವರು, ತಮ್ಮ ಉದ್ಘಾಟನಾ ಭಾಷಣದಲ್ಲಿ ರೈತರ ಪರವಾಗಿ ಧ್ವನಿ ಎತ್ತಿದ ಶ್ರೀಯುತ ಪುಟ್ಟಣ್ಣಯ್ಯ, ಶ್ರೀಯುತ ನಜುಂಡಪ್ಪ ರಂತಹವರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ಸಕ್ರಿಯವಾಗಿ ಪಾಲ್ಗೊಂಡು ರೈತರ ಚಳುವಳಿ, ಹೋರಾಟದಲ್ಲಿ ಭಾಗವಹಿಸಿದಲ್ಲಿ ರೈತರ ಸಮಸ್ಯೆಗಳನ್ನು ಶೀರ್ಘದಲ್ಲಿ ಪರಿಹರಿಸಬಹುದಾಗಿದೆ ಎಂದು ಕರೆ ನೀಡಿದರು.
ಈ ಸಂಧರ್ಭದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಂ. ಗಂಗಾಧರಪ್ಪ, ಶ್ರೀ ಕೆ. ಡಿ. ನಾಯ್ಕ್, ಸೋಮಪ್ಪ ಲಂಬಾಣಿ, ಅಂಜಿ ಮಂಜುನಾಥ, ಜಿ. ಸೋಮಶೇಖರ್, ಆಗಮಿಸಿದ್ದರು. ಜಂಗಣ್ಣನವರ್, ಪ್ರಾರ್ಥಸಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ಬೀಜ ತಜ್ಞರಾದ ಡಾ. ಹನುಮಂತಪ್ಪ ಡಿ., ಕೃಷಿ ಇಲಾಖೆಯ ಕೃಷಿ ಅಧಿಕಾರಿಯಾದ ಶಿವಮೂತರ್ಿ ನಾಯಕ್ ಆರ್., ಸಹಾಯಕ ಕೃಷಿ ಅಧಿಕಾರಿಗಳಾದ ಯು. ರಾಜಶೇಖರ್, ಶ್ರೀ ನಿಂಗಪ್ಪ, ಸವಿತಾ, ಅಂಬಣ್ಣ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನವುಲಿ, ಹಿರೇಹಡಗಲಿ, ತಿಪ್ಪಾಪುರ, ಹನಕನಹಳ್ಳಿ, ನಾಗತಿಬಸಾಪುರ, ಹೊಳಗುಂದಿ, ಉತ್ತಂಗಿ, ಹೊಳಲು ಹಾಗೂ ಹಡಗಲಿ ಸುತ್ತಮುತ್ತಲಿನ ಗ್ರಾಮಗಳ ಎಪ್ಪತ್ತ್ತಕ್ಕಿಂತಲೂ ಹೆಚ್ಚಿನ ರೈತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.