ಮೈಕ್ರೋಫೈನಾನ್ಸಗಳ ನಿಷೇದದ ಬಗ್ಗೆ ಸದನದಲ್ಲಿ ತೀರ್ಮಾನ ಕೈಗೊಳ್ಳುವಂತೆ ರೈತ ಮುಖಂಡ, ರವೀಂದ್ರಗೌಡ ಎಫ್‌. ಪಾಟೀಲ ಒತ್ತಾಯ

Farmer leader, Ravindra Gowda F. to take a decision in the House about the ban on microfinance. Pat

 ಮೈಕ್ರೋಫೈನಾನ್ಸಗಳ ನಿಷೇದದ ಬಗ್ಗೆ ಸದನದಲ್ಲಿ ತೀರ್ಮಾನ ಕೈಗೊಳ್ಳುವಂತೆ ರೈತ ಮುಖಂಡ, ರವೀಂದ್ರಗೌಡ ಎಫ್‌. ಪಾಟೀಲ ಒತ್ತಾಯ   

ರಾಣೇಬೆನ್ನೂರು 08 : ಭಾರತ ದೇಶಕ್ಕೆ ಇಡೀ ವಿಶ್ವಕ್ಕೆ ಮಾದರಿಯಾಗುವಂತಹ ಸಂವಿಧಾನವನ್ನು ರಚಿಸಿ ಅಪಾರ ಕೊಡುಗೆ ನೀಡಿರುವ ಡಾಽಽ ಬಿ.ಆರ್‌. ಅಂಬೇಡ್ಕರರವರ ಭಾವಚಿತ್ರವನ್ನು ಕಡ್ಡಾಯವಾಗಿ ಎಲ್ಲಾ ನ್ಯಾಯಾಲಯಗಳಲ್ಲಿ ಅಳವಡಿಸುವಂತೆ ಕಡ್ಡಾಯವಾಗಿ ನಾಳೆಯಿಂದ  ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಿ ಅಂಗೀಕಾರ ಪಡೆದು ಕಟ್ಟುನಿಟ್ಟಿನ ಆದೇಶ ಮಾಡಬೇಕೆಂದು ರೈತ ಮುಖಂಡ ಹಾಗೂ ಪ್ರಗತಿಪರ ಚಿಂತಕ ರವೀಂದ್ರಗೌಡ ಎಫ್‌. ಪಾಟೀಲ ಸರಕಾರ ಮತ್ತು ವಿರೋಧ ಪಕ್ಷಗಳಿಗೆ ಒತ್ತಾಯಿಸಿದ್ದಾರೆ.  

     ಅವರು ರಾಣೇಬೆನ್ನೂರು ನಗರದ ಮಹಾತ್ಮ ಗಾಂಧೀಜಿ ಸರ್ಕಲ್‌ನಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾಽಽ ಬಿ.ಆರ್‌. ಅಂಬೇಡ್ಕರವರ ಮಹಾಪರಿನಿರ್ವಾಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಮಹಾತ್ಮ ಗಾಂಧೀಜಿಯವರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಇಡೀ ತಮ್ಮ ಜೀವನವನ್ನೇ ತ್ಯಾಗ ಮಾಡಿದರೆ ಡಾಽಽ ಬಿ.ಆರ್‌. ಅಂಬೇಡ್ಕರವರು ಅವರ ಅನುಯಾಯಿಗಳಾಗಿ ಮಾನ ಅಪಮಾನಗಳನ್ನು ಅನುಭವಿಸಿ ಹೊರದೇಶಗಳಲ್ಲಿ ವಿದ್ಯಾರ್ಜನೆ ಮಾಡಿ ಅಪಾರ ವಿದ್ವತ್ವವನ್ನು ಸಂಪಾದಿಸಿ ಇಡೀ ವಿಶ್ವಕ್ಕೆ ಮಾದರೆಯಾಗುವಂತಹ ಸಂವಿಧಾನವನ್ನು ರಚಿಸಿ ಭಾರತಕ್ಕೆ ಅಪಾರ ಕೊಡುಗೆ ನೀಡಿ ನಮ್ಮೆಲ್ಲರ ಬದುಕಿಗೆ ದಾರೀದೀಪವಾಗಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರ ಭಾವಚಿತ್ರ ಎಲ್ಲಾ ನ್ಯಾಯಾಲಯಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕೆಂಬ ಕಟ್ಟುನಿಟ್ಟಿನ ಆದೇಶವನ್ನು ಆಗಿನ ಭಾರತ ಸರಕಾರ ಮಾಡಿ ಆ ಮಹಾತ್ಮನಿಗೆ ಗೌರವ ಸಲ್ಲಿಸಿರುವಾಗ ಅಂಬೇಡ್ಕರ ರಚಿಸಿದ ಸಂವಿಧಾನದ ಅಡಿಯಲ್ಲಿ ನ್ಯಾಯಾಲಯಗಳು ನಡೆಯುತ್ತಿರುವಾಗ ಆ ಮಹಾತ್ಮ, ಭಾರತ ರತ್ನಾ ಡಾಽಽ ಬಿ.ಆರ್‌. ಅಂಬೇಡ್ಕರವರ ಭಾವಚಿತ್ರವನ್ನು, ಮಹಾತ್ಮ ಗಾಂಧೀಜಿ ಭಾವಚಿತ್ರದೊಂದಿಗೆ ಯಾಕೆ ಅಳವಡಿಸಬಾರದು ಎಂದು ಸರಕಾರವನ್ನು ಪ್ರಶ್ನಿಸಿರುವ ಪಾಟೀಲರು ನಾಳೆಯ ಅಧೀವೇಶನದಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಂಡು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಈ ಅಧಿವೇಶನ ಆ ಮೂಲಕ ಚರಿತ್ರೆ ದಾಖಲಿಸಿ ಡಾಽಽ ಅಂಬೇಡ್ಕರವರಿಗೆ ಗೌರವ ಸಲ್ಲಿಸಲಿ ಎಂದರು. ಜೊತೆಗೆ ರಾಜ್ಯದಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿರುವ ಮೈಕ್ರೋ ಫೈನಾನ್ಸ್‌ಗಳ ನಿಷೇಧದ ಬಗ್ಗೆ ಗಂಭೀರ ಚರ್ಚೆ ನಡೆಸಿ ಮೈಕ್ರೋ ಫೈನಾನ್ಸ್‌ಗಳ ಶಾಶ್ವತ ನಿಷೇದಕ್ಕೆ ಸರಕಾರ ಮುಂದಾಗಬೇಕು. ತಮಿಳನಾಡು, ಕೇರಳ, ಆಂದ್ರ ಪ್ರದೇಶಗಳಿಂದ ರಾಜ್ಯಕ್ಕೆ ಲಗ್ಗೆ ಇಟ್ಟಿರುವ ಫೈವ್ ಸ್ಟಾರ್, ಮುತ್ತಟು ಫೈನಾನ್ಸ್‌, ಮಣಿಪುರಂ, ಕೋರಮಟ್ಟಂ, ಪಿರಿಮಿಲ್ ಕ್ಯಾಪಿಟಲ್ ಹ್ಯಾಡ್, ಹೌಂಸಿಂಗ್ ಫೈನಾನ್ಸ್‌, ಡಿ.ಎಚ್‌.ಎಫ್‌.ಎಲ್ ವರ್ತನಾ ಮತ್ತು ತಿರುಮಣಿಯಂತ ಫೈನಾನ್ಸ್‌ಗಳು ಕರ್ನಾಟಕ ರಾಜ್ಯದ ಗ್ರಾಮೀಣ ಭಾಗದ ಮತ್ತು ಶಹರಗಳ ಸ್ಲಂ ವಾಸಿಗಳ ಹದೆಗೆಟ್ಟ ಆರ್ಥಿಕ ಪರಿಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡು ಸಾಲ ನೀಡಿ 30ಅ ಬಡ್ಡಿ ವಿಧಿಸಿ ಬಡ ಕುಟುಂಬಗಳನ್ನು ಬೀದಿಗೆ ತಳ್ಳುತ್ತಿದ್ದು ಈ ಬಗ್ಗೆ ರಾಜ್ಯದ ನಾನು ಭಾಗಗಳಲ್ಲಿ ಸಾಕಷ್ಟು ದೂರುಗಳು ಕೇಳಿ ಬಂದಿದ್ದರೂ ಕೂಡ ಆಯಾ ಜಿಲ್ಲಾಧಿಡಳಿತಗಳು ಸರಕಾರಕ್ಕೆ ಯಾವುದೇ ಮಾಹಿತಿಯನ್ನು ಈವರೆಗೂ ಮುಟ್ಟಿಸದೆ ಇರುವುದು ದುರಂತವೇ ಸರಿ. ರೈತ ಆತ್ಮಹತ್ಯಾಗಳ ತನಿಖೆ ನಡೆಸಿದಾಗ ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಅತೀ ಹೆಚ್ಚು ಈ ಮೈಕ್ರೋ ಫೈನಾನ್ಸ್‌ನವರ ಕಿರುಕುಳಕ್ಕೇನೆ ಅವರು ಆತ್ಮಹತ್ಯಾ ಮಾಡಿಕೊಳ್ಳುತ್ತಿರುವುದು ಸಾಬೀತಾಗಿದ್ದರೂ ಕೂಡ ಇದುವರೆಗೂ ಫೈನಾನ್ಸ್‌ಗಳ ಬಗ್ಗೆ ಯಾವುದೇ ಕ್ರಮವನ್ನು ಸರಕಾರಗಳು ಕೈಗೊಳ್ಳದೆ ಇರುವುದು ರಾಜ್ಯದಲ್ಲಿ ಇನ್ನಷ್ಟು ಹೊರ ರಾಜ್ಯದ ಫೈನಾನ್ಸುಗಳು ತಲೆ ಎತ್ತಲು ಕಾರಣವಾಗಿದೆ ನಾಳೆಯ ಸದನದಲ್ಲಿ ಸರಕಾರ ಈ ಬಗ್ಗೆ ಶಾಸನ ರಚಿಸಿ ಆಯಾ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಇಂತಹ ಫೈನಾನ್ಸ್‌ಗಳ ಬಗ್ಗೆ ಪ್ರಕರಣ ದಾಖಲಿಸಲು ಅನುಮತಿ ನೀಡಬೇಕೆಂದು ಪಾಟೀಲರು ರಾಜ್ಯದ ರೈತರ ಬೆಳೆವಿಮೆ ಬಾಕಿ ಹಣವನ್ನು ರೈತರಿಗೆ ನೀಡದೆ ರೈತರಿಗೆ ಮಕ್ಮಲ್ ಟೋಪಿ ಹಾಕಲು ಯತ್ನಿಸುತ್ತಿರುವ ರಿಲ್ಯಾಯನ್ಸ್‌ ಇನ್ಸೂರೆನ್ಸ್‌ ಕಂಪನಿಯ ಮೇಲೆ ತುರ್ತು ಕ್ರಮ ಜರುಗಿಸಿ ಬಾಕಿ ಹಣ ಬಿಡುಗಡೆ ಮಾಡಿಸಬೇಕೆಂದು ಪಾಟೀಲರು ಅಧಿವೇಶನದ ಹೆಸರಿನಲ್ಲಿ ವಿನಾಃಕಾರಣ ಕೆಲಸಕ್ಕೆ ಬಾರದ ವಿಚಾರಗಳ ಬಗ್ಗೆ ಚರ್ಚಿಸಿ ಸಮಯ ಮತ್ತು ಸರಕಾರದ ಹಣ ಪೋಲು ಮಾಡದೆ ರಾಜ್ಯದ ರೈತರಿಗೆ ಮತ್ತು ಸಮಸ್ತ ಜನತೆಗೆ ಅನುಕೂಲವಾಗುವಂತಹ ಕಾನೂನು ಮತ್ತು ಯೋಜನೆಗಳ ಬಗ್ಗೆ ಚರ್ಚಿಸಬೇಕೆಂದು ಕುಟುಕಿದರು. 

     ಈ ಸಂದರ್ಭದಲ್ಲಿ ಶಾಸಕ ಪ್ರಕಾಶ ಕೋಳಿವಾಡ, ಮಾಜಿ ಶಾಸಕ ಅರುಣುಕುಮಾರ ಪೂಜಾರ, ನಗರ ಸಿ.ಪಿ.ಐ. ಶಂಕರ, ಪಿ.ಎಸ್‌.ಐ. ಗದ್ದೆಪ್ಪ ಗುಂಜುಟಗಿ, ನಗರಸಭಾ ಸದಸ್ಯರಾದ ಶಶಿಧರ ಬಸನಾಯಕ, ಪ್ರಕಾಶ ಪೂಜಾರ, ಅಜ್ಜಯ್ಯ ಮಠದ, ಚಂದ್ರಣ್ಣ ಬೇಡರ, ನಿವೃತ್ತ ಪ್ರಚಾರ್ಯ ಚಂದ್ರಶೇಖರ, ಪ್ರಕಾಶ ಬುರಡಿಕಟ್ಟಿ ಮಾತನಾಡಿದರು.  

     ಸಂಘಟನೆಯ ಮುಖಂಡ ಮೈಲಪ್ಪ ದಾಸಪ್ಪನವರ ನೇತೃತ್ವ ವಹಿಸಿದ್ದರು. ಮಾಲತೇಶ ಪೂಜಾರ, ಮೈಲಪ್ಪ ಗೋಣಿಬಸಮ್ಮನವರ, ಕರ್ನಾಟಕ ರಕ್ಷಣಾ ವೇದಿಕೆಯ ಸಂಜೀವರಡ್ಡಿ ಮುದಗುಣಕಿ, ಮಲ್ಲೇಶಪ್ಪ ಮೆಣಸಿನಹಾಳ, ನಿಖಿತ್ ಮುಂತಾದವರು ಭಾಗವಹಿಸಿದ್ದರು. ಸ್ವಾಭೀಮಾನ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಿತ್ಯಾನಂತ ಕುಂದಾಪೂರ ಕಾರ್ಯಕ್ರಮ ನೆರವೇರಿಸಿಕೊಟ್ಟರು.