ಸುಳ್ಳು ಸುದ್ದಿಗಳಿಂದ ಮಾಧ್ಯಮಗಳ ವಿಶ್ವಾಸಾರ್ಹತೆಗೆ ಧಕ್ಕೆ

ಸಂವಹನ ಕೂಟ' ಹಿರಿಯ ವರದಿಗಾರ ಇ.ಎಸ್.ಸುಧೀಂದ್ರ ಪ್ರಸಾದ ಮಾತನಾಡುತ್ತಿರುವುದು. ವಿಭಾಗದ ಮುಖ್ಯಸ್ಥ ಪ್ರೊ.ಜೆ.ಎಂ. ಚಂದುನವ


ಧಾರವಾಡ 26: ಇಂದಿನ ವಿದ್ಯುನ್ಮಾನ ಯುಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ  ಸುಳ್ಳು ಸುದ್ದಿಗಳು ಜನಸಾಮಾನ್ಯರಲ್ಲಿ ಗೊಂದಲ ಸೃಷ್ಠಿ ಮಾಡುತ್ತಿದ್ದು, ಸುಳ್ಳು ಮೂಲಗಳ ಸೃಷ್ಠಿಯಾಗುವ ಸುದ್ದಿಗಳನ್ನು ಯಾವುದೇ ಪರಿಶೀಲನೆಯಿಲ್ಲದೆ ಪ್ರಕಟಿಸುವ, ಪ್ರಸಾರ ಮಾಡುವುದು ಮಾಧ್ಯಮಗಳ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತವೆ ಕಾರಣ ಸತ್ಯ ಪರಿಶೋಧನೆ ಇಂದು ಅಗತ್ಯವಾಗಿದೆ ಎಂದು ಹಿರಿಯ ವರದಿಗಾರ ಇ.ಎಸ್. ಸುಧೀಂದ್ರ ಪ್ರಸಾದ ಹೇಳಿದರು.

ಕನರ್ಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗ ಆಯೋಜಿಸಿದ್ದ ಸಂವಹನ ಕೂಟದಲ್ಲಿ 'ಸತ್ಯ ಪರಿಶೋಧನೆ ಕಲಿಕೆ' ವಿಷಯ ಕುರಿತು ಅವರು ಮಾತನಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಎಗ್ಗಿಲ್ಲದೆ ಹರಿದಾಡುತ್ತಿರುವ ವಿಡಿಯೋಗಳು ಗೊಂದಲಕಾರಿ ಚಿತ್ರಗಳ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶದ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡುತ್ತಿದ್ದು, ವರದಿಗಾರರು ತಮಗೆ ಬಂದಿರುವ ಮಾಹಿತಿಗಳನ್ನು ಪುನರ್ ಪರಿಶೀಲನೆಗೊಳಪಡಿಸುವ ವಿಧಾನಗಳನ್ನು ವಿವರಿಸಿದರು. ಡಿಜಿಟಲ್ ಸುರಕ್ಷತೆ ಬಹು ಅವಶ್ಯಕವಾಗಿದೆ ಎಂದು ಹೇಳಿದರು. 

ಮಾಧ್ಯಮಗಳಲ್ಲಿ ಬರುವ ಚಿತ್ರಗಳು, ದೃಶ್ಯಗಳು, ಸ್ಥಳ ಹಾಗೂ ಸುದ್ದಿಗಳು ಸರಿಯಾದ ಮೂಲಗಳಿಂದ ಮಾಹಿತಿಗಳು ಬಂದಿವೆಯೇಎಂದು ಪರಿಶೀಲಿಸಬೇಕು. ಈ ಪರಿಶೀಲನೆಗಾಗಿ ಅನೇಕ ಸಾಧನಗಳು ಲಭ್ಯ. ಗೂಗಲ್, ಇನ್ವಿಡ್, ವಿಡಿಯೋಡಿಬಂಕಿಂಗ್, ಸ್ನಿಪ್ಪರ್, ಸ್ಟ್ರೀಟ್ ವಿವ್ನಂತಹ ಅನೇಕ ಸಾಧನಗಳ ಮೂಲಕ ಸತ್ಯವನ್ನು ಶೋಧಿಸಬಹುದು ಎಂದು ಹೇಳಿದರು. 

ಸಾಮಾಜಿಕ ಮಾಧ್ಯಮಗಳಲ್ಲಿ ಅಧಿಕೃತ ವ್ಯಕ್ತಿ ಹಾಗೂ ಮೂಲಗಳ ಮೂಲಕ ಮಾಹಿತಿ ಪಡೆಯಬೇಕು. ನಾವು ಬಳಸುವ ವಿದ್ಯುನ್ಮಾನ ಖಾತೆಗಳಿಗೆ ಸೂಕ್ತ ಪಾಸವರ್ಡ ಬಳಸಿದಾಗ ಮಾತ್ರಅವು ಸುರಕ್ಷಿತವಾಗಿರುತ್ತವೆ ಎಂದು ಅಭಿಪ್ರಾಯಪಟ್ಟರು. ಗೂಗಲ್ ಫೇಸ್ಬುಕ್ಗಳು ಸತ್ಯಶೋಧನೆಗಾಗಿಯೇ ಸಾವಿರ ಸಂಖ್ಯೆಯಲ್ಲಿ ಜನರನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಮಾಧ್ಯಮ ವಿದ್ಯಾಥರ್ಿಗಳು ಇಂತಹ ಹೊಸ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಬೇಕು ಎಂದು ಅವರು ಸಲಹೆ  ನೀಡಿದರು.

ಅಧ್ಯಕ್ಷತೆ ವಹಿಸಿದ ವಿಭಾಗದ ಮುಖ್ಯಸ್ಥ ಪ್ರೊ. ಜೆ.ಎಂ.ಚಂದುನವರ  ಮಾತನಾಡಿ, ಈಗ ತಾಂತ್ರಿಕತೆ ಬಹಳಷ್ಟು ಮುಂದುವರೆದಿದೆ. ಮುಂಬರುವ ವರ್ಷಗಳಲ್ಲಿ ಪಠ್ಯದಲ್ಲಿ ಬಹುಭಾಗ ಡಿಜಿಟಲ್ ಮಾಧ್ಯಮ ಕಲಿಕೆ ಹಾಗೂ ಅದರ ಪ್ರಾಯೋಗಿಕತೆಗೆ ಆದ್ಯತೆ ನೀಡಲಾಗುವುದು ಎಂದು ಮುಂಬರುವ ದಿನಗಳಲ್ಲಿ ಸತ್ಯ ಶೋಧನೆ ತಜ್ಞರ ಬೇಡಿಕೆ ಹೆಚ್ಚು ಎಂದು ತಿಳಿಸಿದರು.

ವಿಜಯಕುಮಾರ ಲಮಾಣಿ ನಿರೂಪಿಸಿದರು. ಸ್ವಾತಿ ಸುರಳೇಶ್ವರ ಪರಿಚಯಿಸಿದರು. ಲಕ್ಷ್ಮೀ ಜಾಲಗೇರಿ ವಂದಿಸಿದರು. ವಿದ್ಯಾಥರ್ಿ ಕಾರ್ಯದಶರ್ಿ ಮಂಜುನಾಥ ಕವಳಿ, ಮಾಲತೇಶ ಅಗಸರ, ಗೌರಿ ಕಟ್ಟಿಮನಿ ಇತರರು ಹಾಜರಿದ್ದರು.