ಭಯಮುಕ್ತರಾಗಿ ಪರೀಕ್ಷೆ ಎದುರಿಸಿ-ಎಂಎಲ್ಸಿ ನಿರಾಣಿ

Face the exam without fear - MLC Nirani

ಭಯಮುಕ್ತರಾಗಿ ಪರೀಕ್ಷೆ ಎದುರಿಸಿ-ಎಂಎಲ್ಸಿ ನಿರಾಣಿ 


ಬೀಳಗಿ  20 : ಇಂದು ರಾಜ್ಯಾದ್ಯಂತ ನಡೆಯುವ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗೆ ಸನ್ನದ್ಧರಾಗಿರುವ ನಾಡಿನ ಸಮಸ್ತ ವಿದ್ಯಾರ್ಥಿಗಳೇ ಭಯ ಮುಕ್ತರಾಗಿ ಪರೀಕ್ಷೆ ಎದುರಿಸಿ ನಿಮ್ಮ ಶೈಕ್ಷಣಿಕ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲು ಇದೊಂದು ಸುವರ್ಣ ಅವಕಾಶ ಎಂದು ವಿಧಾನ ಪರಿಷತ್ ಸದಸ್ಯ ಎಚ್‌.ಆರ್‌.ನಿರಾಣಿ ಕಿವಿಮಾತು ಹೇಳಿದ್ದಾರೆ. 

      ಹತ್ತನೇ ತರಗತಿಯ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ತಮ್ಮ ಜೀವನದ ಮಹತ್ವವಾದ ಮೈಲುಗಲ್ಲು. ವಿದ್ಯಾರ್ಥಿ ಜೀವನದಿಂದ ನಿಮ್ಮ ಬದುಕು ಕಟ್ಟಿಕೊಳ್ಳವ ಒಂದು ಅಡಿಪಾಯ ಇದಾಗಿದೆ. ಹತ್ತನೇ ತರಗತಿ ವಾರ್ಷಿಕ ಪರೀಕ್ಷೆ ಇರುವುದರಿಂದ ತಾವು ಯಾವುದೇ ಬಯ-ಬೀತಿಗೆ ಒಳಪಡದೆ ಧೈರ್ಯದಿಂದ ಪರೀಕ್ಷೆಯನ್ನು ಎದುರಿಸಿ ಉತ್ತಮ ಅಂಕಗಳನ್ನು ಗಳಿಸಿ ನಿಮ್ಮ ತಂದೆ-ತಾಯುಗೆ ಕಲಿತ ಶಾಲೆಗೆ ಕಲಿಸಿದ ಶಿಕ್ಷಕರಿಗೆ ಗೌರವ ತರಬೇಕು. ನಮ್ಮ ವಿದ್ಯಾರ್ಥಿಗಳನ್ನು ಪರೀಕ್ಷೆ ಸನ್ನದ್ದುಗೊಳಿಸಿದ ಶಿಕ್ಷಕರ ಬಳಗಕ್ಕೂ ಮತ್ತು ವಿದ್ಯಾರ್ಥಿಗಳ ಪಾಲಕ-ಪೋಷಕರಿಗೂ ಹೃತ್ಪುರ್ವಕ ಅಭಿನಂದನೆಗಳನ್ನು ವಿಧಾನ ಪರಿಷತ್ತ ಸದಸ್ಯ ಎಚ್ ಆರ್‌. ನಿರಾಣಿ ರಾಜ್ಯದ ವಿದ್ಯಾರ್ಥಿಗಳಿಗೆ ಶುಭ ಹಾರೈಯಿಸಿ ಪ್ರಕಟಣೆಗೊಳಿಸಿದ್ದಾರೆ. 

್ಸ