ಲೋಕದರ್ಶನ ವರದಿ
ವಿಜಯಪುರ 27: ಇಂದಿನ ಯುವ ಉದ್ದಿಮೆದಾರರಿಗೆ ಅಗಾಧ ಅವಕಾಶಗಳು ಹಾಗೂ ಎಲ್ಲ ರೀತಿಯ ಸೌಕರ್ಯಗಳು ಲಭ್ಯವಿದ್ದು, ಅದನ್ನು ಬಳಸಿಕೊಳ್ಳುವ ಜಾಣ್ಮೆ ಉದ್ದಿಮೆದಾರರಲ್ಲಿರಬೇಕು ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ದುಂಡಪ್ಪ ಎಸ್.ಗುಡ್ಡೋಡಗಿ ಅವರು ಹೇಳಿದರು.
ಜಿಲ್ಲಾ ಪಂಚಾಯತ್, ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ರುಡಸೆಟ್ ಸಂಸ್ಥೆ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ನಗರದ ರುಡಸೆಟ್ ಸಂಸ್ಥೆಯ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನೂತನ ಜವಳಿ ನೀತಿ ಹಾಗೂ ಇಲಾಖೆಯ ವಿವಿಧ ಯೋಜನೆಗಲ ಕುರಿತು ಎರಡು ದಿನಗಳ ಉದ್ಯಮಶೀಲತಾಭಿವೃದ್ದಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ವಿವಿಧ ಯೋಜನೆಗಳಡಿಯಲ್ಲಿ ನವ ಉದ್ದಿಮೆದಾರರಿಗೆ ಅನೇಕ ಸೌಲಭ್ಯಗಳಿವೆ. ಆಸಕ್ತರಿಗೆ ಉದ್ದಿಮೆಗಳಲ್ಲಿ ಉದ್ಯೋಗಾವಕಾಶಗಳು ಇವೆ. ಇನ್ನೂ ರುಡಸೆಟ್ ಸಂಸ್ಥೆಯ ಹಲವಾರು ಉದ್ದಿಮೆಗಳ ಸ್ಥಾಪನೆಗೆ ಉತ್ತಮ ತರಬೇತಿ ನೀಡುವುದರ ಮೂಲಕ ಭದ್ರ ಬುನಾದಿ ಹಾಕಿ ಕೊಡುತ್ತದೆ. ಎಂದು ಹೇಳಿದರು.
ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಕಾಟನ್ ಜಿನ್ನಿಂಗ್, ಪ್ರೆಸಿಂಗ್, ಸ್ಪಿನ್ನಿಂಗ್, ವೀವಿಂಗ್, ಗಾಮರ್ೆಂಟ್ಸ್, ಜವಳಿ ಸಂಸ್ಕರಣಾ ಘಟಕಗಳನ್ನು ಪ್ರಾರಂಭಿಸಲು, ಯಂತ್ರೋಪಕರಣ, ತಾಂತ್ರಿಕತೆ, ಉತ್ಪಾದನೆ, ಯೋಜನಾ ವರದಿ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಂದ ದೊರೆಯುವ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಯಶಸ್ವಿ ಉದ್ದಿಮೆದಾರರಾದ ಯಶೋಧಾ ಗುಜ್ಜರ, ಅಶೋಕ ಸಜ್ಜನ್, ರುಡಸೆಟ್ ಸಂಸ್ಥೆಯಿಂದ ಪಡೆದ ತರಬೇತಿ ಉದ್ದಿಮೆ ಸ್ಥಾಪನೆಗೆ ಹಾಗೂ ಯಶಸ್ವಿಗೆ ಕಾರಣವಾದ ಯಶೋಗಾಥೆಯನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ರುಡಸೆಟ್ ಸಂಸ್ಥೆಯ ನಿದರ್ೇಶಕ ಆರ್.ಟಿ.ಉತ್ತರಕರ, ಕೈಮಗ್ಗ ಮತ್ತು ಜವಳಿ ಇಲಾಖೆ ಟಿಪಿಓ ವಾಗ್ಮೋರೆ ಇತರೆ ಸಿಬ್ಬಂದಿ ಸೇರಿದಂತೆ ಹಾಲಿ ಮತ್ತು ಭಾವಿ ಜವಳಿ ಉದ್ದಿಮೆದಾರರು ಉಪಸ್ಥಿತರಿದ್ದರು. ರುಡಸೆಟ್ ಸಂಸ್ಥೆ ಸಿಬ್ಬಂದಿ ಕಾರ್ಯಕ್ರಮ ನಡೆಸಿಕೊಟ್ಟರು.