ಅರಣ್ಯ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವಲ್ಲಿ ಪ್ರಶಂಸನೀಯ ಕಾರ್ಯ: ನಾಯ್ಕ

ಗದಗ 08: ಜನರಿಗೆ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಆರಂಭಿಕ ನಾಯಕತ್ವ ನೀಡಿದ ಗದಗ ಜಿಲ್ಲೆಯಲ್ಲಿ ಪಾರಂಪರಿಕ ಅರಣ್ಯ ಸಾಗುವಳಿದಾರರಿಗೆ ಹಕ್ಕು ಪತ್ರಗಳನ್ನು ನೀಡುವಲ್ಲಿ ಪ್ರಶಂಸನೀಯ ಕಾರ್ಯ ಮಾಡಿದೆ ಎಂದು ರಾಜ್ಯ ಕೌಶಲ್ಯಾಭಿವೃದ್ಧಿ, ಮುಜರಾಯಿ ಇಲಾಖೆಗಳ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಪಿ.ಟಿ.ಪರಮೇಶ್ವರ ನಾಯ್ಕ ನುಡಿದರು.

ಗದಗ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಮುನ್ನ 479 ಪೈಕಿ ಸಾಂಕೇತಿಕವಾಗಿ 13 ಫಲನುಭವಿಗಳಿಗೆ ಅರಣ್ಯ ಸಾಗುವಳಿ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಅರಣ್ಯ ಸಾಗುವಳಿ  ಹಕ್ಕು ಪತ್ರದ ಫಲಾನುಭವಿಗಳಿಗೆ ರಾಜ್ಯ ಸಕರ್ಾರದ ವಿವಿಧ ಇಲಾಖೆಗಳ ಯೋಜನೆಗಳಡಿ ನೀರಾವರಿ ಸೌಲಭ್ಯ ಕಲ್ಪಿಸಲು ಕ್ರಮ ಜರುಗಿಸುವ ಕುರಿತು ಭರವಸೆ ನೀಡಿದರು.

ಶಾಸಕ ಎಚ್.ಕೆ.ಪಾಟೀಲ ಅವರು ಮಾತನಾಡಿ 30 ವರ್ಷಗಳಿಂದ ಗದಗ ಜಿಲ್ಲೆಯಲ್ಲಿ ಅರಣ್ಯ ಸಾಗುವಳಿ ಹಕ್ಕುಪತ್ರ ಪಡೆಯುವ ಕುರಿತಂತೆ ನಡೆಸಿದ ಪ್ರಯತ್ನಗಳು ಇಂದು ಫಲ ನೀಡುತ್ತಿದ್ದು ಕೇಂದ್ರ ಸಕರ್ಾರವೇ ಈ ಕುರಿತು ಅರಣ್ಯ ಕಾಯ್ದೆ ತಿದ್ದುಪಡಿ ತರುವಂತಾಗಿ ದೇಶದ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರೆಯುವಂತಾಗಿದೆ. ಜಿಲ್ಲೆಯಲ್ಲಿ ಬಾಕಿ ಉಳಿದ ಫಲಾನುಭವಿಗಳಿಗೂ ಹಕ್ಕು ಪತ್ರ ನೀಡಲು ಬೇಗನೇ ಕ್ರಮ ಜರುಗಿಸಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿದರ್ೇಶಕ ಖಾಜಾಹುಸೇನ ಮುಧೋಳ ಅವರು ಮಾತನಾಡಿ ಅನುಸೂಚಿತ ಜಾತಿ, ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ ಕುರಿತು ಅಧಿನಿಯಮ 2012ರ ತಿದ್ದುಪಡಿ ರೀತ್ಯ ಗದಗ ಜಿಲ್ಲೆಯಲ್ಲಿ ಈಗಾಗಲೇ ಒಟ್ಟಾರೆ 1153 ಎಕರೆ, 29ಗುಂಟೆ ಜಮೀನಿನ ಹಕ್ಕುಪತ್ರಗಳನ್ನು 616 ಫಲಾನುಭವಿಗಳಿಗೆ ನೀಡಲಾಗಿತ್ತು. ಇಂದು 107.03 ಎಕರೆ ಜಮೀನನ್ನು 479 ಫಲಾನುಭವಿಗಳಿಗೆ ವಿತರಿಸಲಾಗುತ್ತಿದ್ದು ಒಟ್ಟಾರೆ ಗದಗ ಜಿಲ್ಲೆಯಲ್ಲಿ 1095 ಪಲಾನುಭವಿಗಳಿಗೆ 2226 ಎಕರೆ 31 ಗುಂಟೆ ಜಮೀನಿನ ಸಾಗುವಳಿ ಹಕ್ಕು ಪತ್ರ ವಿತರಿಸಿದಂತಾಗಿದೆ ಎಂದರು.

ಮಾಜಿ ಶಾಸಕ ಡಿ.ಆರ್.ಪಾಟೀಲ ಮಾತನಾಡಿ ಜಿಲ್ಲೆಯ ಎಲ್ಲ ಅರಣ್ಯ ಸಾಗುವಳಿ ಹಕ್ಕು ಪತ್ರ ಇರುವ ಫಲಾನುಭವಿಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಆಗ್ರಹಿಸಿದರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಾತನಾಡಿ ಜಿಲ್ಲೆಯಲ್ಲಿ ಸಲ್ಲಿಕೆಯಾದ ಎಲ್ಲ ಅಜರ್ಿಗಳ ಸಮಗ್ರ ಹಾಗೂ ಮರುಪರಿಶೀಲನೆ ಮಾಡಿ ಯಾವುದೇ ಅರ್ಹರು ಅರಣ್ಯ ಸಾಗುವಳಿ ಹಕ್ಕು ಪತ್ರದಿಂದ ವಂಚಿತರಾಗದಂತೆ ಕ್ರಮ ಕೈಕೊಳ್ಳಲಾಗಿದೆ ಎಂದರು.

ಶಾಸಕರಾದ ರಾಮಣ್ಣ ಲಮಾಣಿ, ಜಿಲ್ಲಾ ಪಂಚಾಯತ ಅಧ್ಯಕ್ಷ ಎಸ್.ಪಿ.ಬಳಿಗಾರ, ಉಪಾಧ್ಯಕ್ಷೆ ಶ್ರೀಮತಿ ಶಕುಂತಲಾ ಮೂಲಿಮನಿ, ಗದಗ ತಾ.ಪಂ. ಅಧ್ಯಕ್ಷ ಮೋಹನ ದುರಗಮ್ಮನವರ, ಜಿ.ಪಂ. ಸದಸ್ಯರಾದ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಗದಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ ಉಪಸ್ಥಿತರಿದ್ದರು.