ಪ್ರತಿಯೊಬ್ಬರೂ ಅತ್ಯಂತ ಪ್ರಮುಖವಾದ ನೇತ್ರಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು : ವಿ.ಎ.ಆಂಜಿನೇಯ್ಯ ಪ್ರಸಾದ್.
ಕಂಪ್ಲಿ 21: ಮನುಷ್ಯನ ಅಂಗಾಂಗಗಳಲ್ಲಿ ಅತ್ಯಂತ ಪ್ರಮುಖವಾಗಿರುವ ನೇತ್ರಗಳನ್ನು ಆದಷ್ಟು ಜಾಗ್ರತೆಯಿಂದ ನೋಡಿಕೊಳ್ಳಬೇಕೆಂದು ಬಳ್ಳಾರಿ ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಡಾ. ವಿ.ಎ. ಆಂಜಿನೇಯ್ಯ ಪ್ರಸಾದ್ ತಿಳಿಸಿದರು. ಅವರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಬಳ್ಳಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಳ್ಳಾರಿ, ವಿಕಲಚೇತನರ ಹಾಗೂ ಹಿರಿಯ ನಾಕರೀಕರ ಸಬಲೀಕರಣ ಇಲಾಖೆ ಬಳ್ಳಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ಮತ್ತು ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರ ಬಳ್ಳಾರಿ ಇವರುಗಳ ಸಂಯುಕ್ತಾಶ್ರಯದಲ್ಲಿ ಏರಿ್ಡಸಿದ್ದ ನೇತ್ರ ತಪಾಸಣೆ ಉಚಿತ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. 60 ವರ್ಷ ಮೇಲ್ಪಟ್ಟ ಪುರುಷರು ಹಾಗು ಮಹಿಳೆಯರಿಗೆ ಉಚಿತವಾಗಿ ನೇತ್ರ ತಪಾಸಣೆ ಮಾಡಿ ಅಗತ್ಯವಿರುವವರಿಗೆ ಕಣ್ಣಿನ ನೇತ್ರ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುವುದು. ಹಾಗು ಉಚಿತವಾಗಿ ಓಷಧಿಗಳನ್ನು ವಿತರಿಸಲಾಗುವುದು ಎಂದರು. ಕಂಪ್ಲಿಯಲ್ಲಿಂದು ಒಟ್ಟಾರೆ ತಾಲ್ಲೂಕಿನ ಸುಮಾರು 78 ಜನರ ನೇತ್ರಗಳ ತಪಾಸಣೆ ಮಾಡಲಾಗಿದ್ದು, ಇದರಲ್ಲಿ ಸುಮಾರು 38 ಜನರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದ್ದು, ಅವರಿಗೆ ಜ.27 ರಂದು ಬಳ್ಳಾರಿ ಎಲ್.ವಿ. ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನಡೆಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರವೀಂದ್ರ ಕನಕೇರಿ ಮಾತನಾಡಿ ಸರ್ಕಾರದಿಂದ ಹಿರಿಯ ನಾಗರೀಕರಿಗೆ ಉಚಿತವಾಗಿ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆಯನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ನೇತ್ರ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರನ್ನು ಕಂಪ್ಲಿಯಿಂದ ಬಳ್ಳಾರಿಗೆ ಕರೆದುಕೊಂಡು ಹೋಗಿ ಶಸ್ತ್ರಚಿಕಿತ್ಸೆಯ ನಂತರ ಅವರನ್ನು ಪುನಃ ಕಂಪ್ಲಿಗೆ ಕರೆದುಕೊಂದು ಬರಲಾಗುವುದು. ಶಸ್ತ್ರ ಚಿಕಿತ್ಸೆಯ ನಂತರ ಕಣ್ಣುಗಳನ್ನು ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳಬೇಕೆಂದರು. ನಂತರ ನೇತ್ರಗಳ ತಪಾಸಣೆ ನಡೆಸಿ ಶಸ್ತ್ರ ಚಿಕಿತ್ಸೆಯ ಅಗತ್ಯವಿಲ್ಲದವರಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.ಕಾರ್ಯಕ್ರಮದಲ್ಲಿ ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರುಗಳಾದ ಡಾ.ಶ್ರೀನಿವಾಸ್, ಡಾ.ನಂದೀಶ್,ಡಾ.ಹಾರಿಕಾ,ನೇತ್ರ ಪರೀಕ್ಷ ಪ್ರಕಾಶಗೌಡ, ಉಮಾಪತಿಗೌಡ, ಬಳ್ಳಾರಿ ಎಂ,ಆರ್,ಡಬ್ಲ್ಯು. ಸಿ.ರಾಣಿ,ವಿ.ಆರ್.ಡಬ್ಲ್ಯು. ಬೋವೇರ್ ಮಲ್ಲೇಶ್, ಗೌಳೇರ್ ರಮೇಶ್ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಇದ್ದರು. ಜ.002: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಿರಿಯ ನಾಗರೀಕರ ನೇತ್ರಗಳ ತಪಾಸಣೆ ಜರುಗಿತು. ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಡಾ.ವಿ.ಎ. ಆಂಜಿನೇಯ್ಯ ಪ್ರಸಾದ್ ನೇತ್ರಗಳ ತಪಾಸಣೆ ನಡೆಸಿದರು.