ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು : ವಾಸುಕುಮಾರ್ ಕೆ.ಬಿ

Everyone should follow traffic rules strictly: Vasukumar K.B

ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು : ವಾಸುಕುಮಾರ್ ಕೆ.ಬಿ. 

ಕಂಪ್ಲಿ 21: ಪ್ರತಿಯೊಬ್ಬರೂ ಸಂಚರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಅಪಘಾತಗಳನ್ನು ನಿಯಂತ್ರಿಸಬಹುದಾಗಿ ಎಂದು ಕಂಪ್ಲಿಯ ಆರಕ್ಷಕ ನೀರೀಕ್ಷಕ ವಸುಕುಮಾರ್ ಕೆ.ಬಿ. ತಿಳಿಸಿದರು. ಅವರು ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳಿಗೆ ಸಂಚಾರ ಸುರಕ್ಷತಾ ನಿಯಮಗಳ ಬಗ್ಗೆ ಸಮಗ್ರವಾಗಿ ವಿವರಿಸಿ ಎಲ್ಲರೂ ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಬೇಕು. ಉದಾಸೀನತೆ ಮಾಡುವುದರಿಂದ ಅಪಘಾತವಾಗುತ್ತವೆ. ವಿದ್ಯಾರ್ಥಿ ದೆಸೆಯಲ್ಲಿಯೇ ರಸ್ತೆ ಸುರಕ್ಷತಾ ನಿಯಮಗಳನ್ನು ತಿಳಿಸಿದರಬೇಕು ಎಂದರಲ್ಲದೆ, ವಿದ್ಯಾರ್ಥಿಗಳು  ಚಾಲನೆಯ ವಯಸ್ಸು ಆಗುವವರೆಗೂ ವಾಹನಗಳನ್ನು ಚಲಾಯಿಸಬಾರದು ಎಂದರು. ನಂತರ ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದಲ್ಲಿ ಎಎಸ್‌ಐ ಬಸವರಾಜ ಅವರು ಪ್ರತ್ಯಕ್ಷಿಕೆ ಮೂಲಕ ರಸ್ತೆ ಸಂಚಾರ ನಿಯಮಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಮುಖ್ಯ ಪೇದೆಗಳಾದ ರವಿವರ್ಮ, ದತ್ತಾತ್ರೇಯ, ಸ್ಕೌಟ್ಸ್‌ ಮತ್ತು ಗೈಡ್ಸ್‌ ತಾಲ್ಲೂಕು ಕಾರ್ಯದರ್ಶಿ ಕೆ.ವಿಷ್ಣು, ಗೈಡ್ ಕ್ಯಾಪ್ಟನ್ ಸೀತು ಚಕ್ರವರ್ತಿ,ಸ್ಕೌಟ್ಸ್‌ ಮಾಸ್ಟರ್ ರಾಜೇಶ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ಜ.004: ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳಿಗೆ ಎ.ಎಸ್‌.ಐ ಬಸವರಾಜ ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.