ಮತದಾನದ ಜಾಗೃತಿ ಮೂಡಿಸಲು ಪುರುಷರ ವ್ಹಾಲಿಬಾಲ್ ಪಂದ್ಯಾವಳಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ: ರಾಜೇಂದ್ರ ಕೆ.ವಿ

ಬೆಳಗಾವಿ, 18 : ಏಪ್ರಿಲ್ 23 ರಂದು ಜರುಗಲಿರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ, ಯಾವುದೇ ಆಮಿಷಗಳಿಗೆ ಒಳಗಾಗದೇ ತಮ್ಮ ಮತವನ್ನು ಚಲಾಯಿಸಬೇಕು. ಭಾಗವಹಿಸಿರುವ ಎಲ್ಲ ಕ್ರೀಡಾಪಟುಗಳು ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಹೆಚ್ಚಿನ ಜಾಗೃತಿಯನ್ನು ಮೂಡಿಸಬೇಕೆಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಾದ ಡಾ. ರಾಜೇಂದ್ರ ಕೆ.ವಿ ಅವರು ಕರೆ ನೀಡಿದರು. 

  ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿಯು ಏಪ್ರಿಲ್ 18 ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ "ಸ್ವೀಪ್ ಕಪ್ (ಖಗಿಇಇಕ ಅಗಕ)" ಪುರುಷರ ವ್ಹಾಲಿಬಾಲ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು.  

 "ಸ್ವೀಪ್ ಕಪ್ ಪುರುಷರ ವ್ಹಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪರಶುರಾಮ ದುಡಗುಂಟಿ, ಮುಖ್ಯ ಲೆಕ್ಕಾಧಿಕಾರಿಗಳು ಜಿಲ್ಲಾ ಪಂಚಾಯತ ಬೆಳಗಾವಿ, ಜಿಲ್ಲಾ ಸ್ವೀಪ್ ಐಕಾನ್ ರಾಘವೇಂದ್ರ ಅಣ್ವೇಕರ, ರವಿ ಭಜಂತ್ರಿ ಸ್ವೀಪ್ ಸಹಾಯಕ ಅಧಿಕಾರಿ, ಪಿ.ಪಿ. ದೇಶಪಾಂಡೆ, ತಾಲೂಕ ಯೋಜನಾಧಿಕಾರಿಗಳು, ಎ.ಪಿ. ಬಸನಾಳ ಲೆಕ್ಕ ಅಧೀಕ್ಷಕರು, ಜಿಲ್ಲಾ ಪಂಚಾಯತ, ಬೆಳಗಾವಿ, ಡಿ.ಜಿ. ನಾಗೇಶ, ಸಹಾಯಕ ಕಾಮರ್ಿಕ ಆಯುಕ್ತರು, ಜಿ.ಎನ್.ಪಾಟೀಲ ನಿವೃತ್ತ ದೈಹಿಕ ನಿದರ್ೇಶಕರು, ಎಸ್.ಟಿ.ಪಾಟೀಲ ದೈಹಿಕ ಶಿಕ್ಷಕರು, ಬಸವರಾಜ ಹೊಸಮಠ ವಾಲಿಬಾಲ್ ತರಬೇತಿದಾರರು ಮೊದಲಾದವರು ಉಪಸ್ಥಿತರಿದ್ದರು. 

ಯುವ ಸಬಲೀಕರಣ ಮತ್ತು ಕೀಡಾ ಇಲಾಖೆಯ ಉಪ ನಿದರ್ೇಶಕರಾದ ಸೀಬಿರಂಗಯ್ಯರವರು ಸ್ವಾಗತ ಹಾಗೂ ವಂದಣಾರ್ಪನೆಯನ್ನು ನೆರವೇರಿಸಿದರು. ಈ "ಸ್ವೀಪ್ ಕಪ್  ಪುರುಷರ ವ್ಹಾಲಿಬಾಲ್ ಪಂದ್ಯಾವಳಿಯಲ್ಲಿ 28 ತಂಡಗಳು ಭಾಗವಹಿಸಿದ್ದವು.