ವಿಕಲಚೇತನರೊ ಸಹ ನಮ್ಮಂತೆ ಮನುಷ್ಯರೇ - ವಿದ್ಯಾ ಕುರುವತ್ತಿ
ರಾಣೇಬೆನ್ನೂರು 15: ಅಂದ ಅಂಗವಿಕಲತೆ ಯಾವುದೇ ಶಾಪವೂ ಅಲ್ಲ ಪಾಪು ಅಲ್ಲ. ಇದೆಲ್ಲವೂ ದೈವ ನಿಯಮ. ವಿಕಲಚೇತನರು ಸಹ ನಮ್ಮಂತೆಯ ಮನುಷ್ಯರೇ ಅವರು ಸಹ ನಮ್ಮಂತೆ ಸಮಾನತೆಯಲ್ಲಿ ಬದುಕಬೇಕು ಎಂದು ಇನ್ನರವ್ಹಿಲ್ ಸೇವಾ ಸಂಸ್ಥೆಯ ಅಧ್ಯಕ್ಷ ವಿದ್ಯಾ ಕುರುವತ್ತಿ ಹೇಳಿದರು.
ಅವರು, ಇಲ್ಲಿನ ಸ್ನೇಹ ದೀಪ ಅಂದ ಹಾಗೂ ಅಂಗವಿಕಲರ ಸೇವಾ ಸಂಸ್ಥೆಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ, ಶೈಕ್ಷಣಿಕ ಪ್ರವಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪರಿಸರದಲ್ಲಿ ಅಂದ ಹಾಗೂ ಅಂಗವಿಕಲರು ಎಲ್ಲವನ್ನು ಆಸ್ವಾದಿಸುವ ಗುಣಧರ್ಮವನ್ನು ಹೊಂದಿದ್ದಾರೆ. ಪರಿಸರ ಯಾರನ್ನು ನಿರಾಕರಿಸಿಲ್ಲ. ಇದು ಸೃಷ್ಟಿ ನಿಯಮ ಹೀಗಾಗಿ ಅವರು ಸಹ ನಮ್ಮಂತೆ, ಮನ ಸಂತೋಷ ಹೊಂದುವುದು ಅಗತ್ಯವಿದೆ ಎಂದರು.
ಶಿಗ್ಗಾವಿ ಬಳಿಯ ಪಿ. ಆರ್.ಎಸ್. ವಾಟರ್ ಪಾರ್ಕಿಂಗ್ ಶೈಕ್ಷಣಿಕ ಪ್ರವಾಸಕ್ಕೆಬೆಂಗಳೂರಿನ ಇನ್ನರ್ ವ್ಹಿಲ್ ಸಂಸ್ಥೆಯು ತನ್ನ ಪ್ರಾಯೋಜಕತ್ವವನ್ನು ನೀಡಿದ್ಧರು. ಶೈಕ್ಷಣಿಕ ಪ್ರವಾಸದಲ್ಲಿ ಪಾಲ್ಗೊಂಡಿದ್ದ ಸ್ನೇಹ ದೀಪ ಸಂಸ್ಥೆಯ ನೂರಾರು ವಿದ್ಯಾರ್ಥಿಗಳು, ವಿಶೇಷ ಅನುಭವದ ಮೂಲಕ ಪ್ರವಾಸವನ್ನು ಸಂಭ್ರಮಿಸಿದರು. ಸಂಸ್ಥೆಯ ಸಿಬ್ಬಂದಿಗಳು, ಉಪಸ್ಥಿತರಿದ್ದರು.