ಮಕ್ಕಳು ಮೊಬೈಲ್ ದಾಸರಾಗದಂತೆ ನೋಡಿಕೊಳ್ಳಿ: ಸಿಆರಿ್ಪ ವಿಜಾಪುರ ಸಲಹೆ
ತಾಳಿಕೋಟಿ 07: ಇಂದಿನ ತಂತ್ರಜ್ಞಾನದ ಯುಗದಲ್ಲಿ ಮೊಬೈಲ್ ನ ಅಗತ್ಯ ಬಹಳಷ್ಟಿದೆ ಆದರೆ ಅದರ ಸರಿಯಾದ ಸದ್ಬಳಕೆ ಆಗುತ್ತಿಲ್ಲ, ಅತಿಯಾದ ಮೊಬೈಲ್ ಗೀಳಿನಿಂದಾಗಿ ಮಕ್ಕಳು ದೈಹಿಕ ಹಾಗೂ ಮಾನಸಿಕವಾಗಿ ಪ್ರಭಾವಿತ ರಾಗುತ್ತಿದ್ದಾರೆ ಅವರು ಮೊಬೈಲ್ ದಾಸರಾಗದಂತೆ ನೋಡಿಕೊಳ್ಳುವುದು ಪಾಲಕರ ಜವಾಬ್ದಾರಿಯಾಗಿದೆ ಎಂದು ತಾಳಿಕೋಟಿ ಸಿಆರಿ್ಪ ರಾಜು ವಿಜಾಪುರ ಸಲಹೆ ನೀಡಿದರು. ತಾಳಿಕೋಟಿ ಪಟ್ಟಣದ ಹಡಗಿನಾಳ ರಸ್ತೆಯಲ್ಲಿರುವ ಶ್ರೀ ಸುಗೂರೇಶ್ವರ ವಿದ್ಯಾ ವರ್ಧಕ ಸಂಘದ ಸರಸ್ವತಿ ವಿದ್ಯಾ ಮಂದಿರ ಹಿರಿಯ ಪ್ರಾಥಮಿಕ ಶಾಲೆಯ 2024-25 ಸಾಲಿನ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸಾಂಸ್ಕೃತಿಕ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೆಲವೇ ವರ್ಷಗಳ ಹಿಂದೆ ಒಂದು ಚಿಕ್ಕ ಬಾಡಿಗೆ ಕಟ್ಟಡದಲ್ಲಿ ಆರಂಭವಾದ ಈ ಶಾಲೆ ಇಂದು ಹೆಮ್ಮರವಾಗಿ ಬೆಳೆದ ನಿಂತಿದೆ ಇದಕ್ಕೆ ಸಂಸ್ಥೆಯ ಅಧ್ಯಕ್ಷರು,ಆಡಳಿತ ಮಂಡಳಿ ಸದಸ್ಯರು,ಇಲ್ಲಿ ಸೇವೆ ಸಲ್ಲಿಸುತ್ತಿರುವ ಮುಖ್ಯ ಗುರುಗಳು ಹಾಗೂ ಶಿಕ್ಷಕ ವರ್ಗದವರ ತ್ಯಾಗ ಮತ್ತು ಶ್ರಮ ಬಹಳಷ್ಟಿದೆ. ಪಟ್ಟಣದಲ್ಲಿಯೇ ಅತಿ ಕಡಿಮೆ ಶುಲ್ಕ ಪಡೆದು ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆ ಇದಾಗಿದೆ ಎಂದರು.ಸ.ಪ್ರಾ.ಶಿ.ಸ. ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ವಾಲಿಕರ ಹಾಗೂ ನಿವೃತ್ತ ಶಿಕ್ಷಕ ಬಸವರಾಜ್ ಗೊರಜಿ ಮಾತನಾಡಿ ಮಕ್ಕಳಿಗೆ ಕೇವಲ ಅಂಕ ಗಳಿಕೆ ವಿಧಾನ ಕಲಿಸದೆ ಅವರಿಗೆ ಉತ್ತಮ ಮಾನವೀಯ ಮೌಲ್ಯಗಳನ್ನೂ ಕಲಿಸಬೇಕಾದ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು. ಸಂಸ್ಥೆಯ ಅಧ್ಯಕ್ಷ ಮುರುಗೇಶ ಅ.ಕಡಕೋಳ ಅಧ್ಯಕ್ಷತೆ ವಹಿಸಿದ್ದರು.ಇದೇ ಸಂದರ್ಭದಲ್ಲಿ ಶಾಲೆಯ ಆದರ್ಶ ವಿದ್ಯಾರ್ಥಿಗಳಿಗೆ ಪದಕಗಳನ್ನು ನೀಡಿ ಗೌರವಿಸಲಾಯಿತು. ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಸಂಸ್ಥೆಯ ಅಧ್ಯಕ್ಷ ಮುರುಗೇಶ ಕಡಕೋಳ ಹಾಗೂ ಕಾರ್ಯದರ್ಶಿ ಶ್ರೀಮತಿ ಪಲ್ಲವಿ ಎಂ.ಕಡಕೋಳ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಾಧ್ಯಮ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಾದ ಬಸವರಾಜ ಕಟ್ಟಿಮನಿ, ಅಬ್ದುಲಗನಿ ಮಕಾನದಾರ, ಸಂಜಯಸಿಂಗ್ ರಜಪೂತ ಹಾಗೂ ನಜೀರ್ ಅಹ್ಮದ್ ಚೋರಗಸ್ತಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಮಯದಲ್ಲಿ ಪುರಸಭೆ ಅಧ್ಯಕ್ಷೆ ಜುಬೇದಾ ಹುಸೇನಬಾಷಾ ಜಮಾದಾರ, ಪಿಕೆಪಿಎಸ್ ವ್ಯವಸ್ಥಾಪಕ ಶಂಕರಗೌಡ ಪಾಟೀಲ,ನಿರ್ದೇಶಕ ಶರಣಪ್ಪ ಇಲಕಲ್ಲ, ಮೂಕಿಹಾಳ ಗ್ರಾಪಂ ಸದಸ್ಯ ಜಾವೇದ್ ಪಟೇಲ, ಸಂಸ್ಥೆ ಉಪಾಧ್ಯಕ್ಷ ರಮೇಶ ಮದ್ದರಕಿ, ಮುಖ್ಯ ಭಾಗ್ಯವಂತಿ ದೇವಸ್ಥಾನ ಅಧ್ಯಕ್ಷ ಶಂಕರ ಸೋನೂನೆ, ಈರಣ್ಣ ಕಲಬುರ್ಗಿ, ಎನ್.ಎಚ್.ಮದರಿ, ಮುಖ್ಯ ಶಿಕ್ಷಕ ಬಿ.ವಾಯ್.ಚವನಭಾವಿ, ವಿನಾಯಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಂಗಮೇಶ ದೇಸಾಯಿ, ಭೋಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂಗನಗೌಡ ಹಣಮರೆಡ್ಡಿ,ಎಂ.ಬಿ.ಪೂಜಾರಿ, ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರಾದ ಆಬೀದ ಲಾಹೋರಿ,ಶಾಹೀದ್ ಶಿವಣಗಿ, ಮಹಿಬೂಬ ನದಾಫ, ಶಿಕ್ಷಕ ವರ್ಗ ಹಾಗೂ ಪಾಲಕರು ಇದ್ದರು. ವೇದಿಕೆ ಕಾರ್ಯಕ್ರಮ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕೀಯರಾದ ಸ್ನೇಹಾ, ರೇಣುಕಾ ಪ್ರಾರ್ಥಿಸಿದರು. ಉಪಾಧ್ಯಕ್ಷ ರಮೇಶ ಮದ್ದರಕಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಬಿ.ವಾಯ್. ಚವನಭಾವಿ ನಿರೂಪಿಸಿ ವಂದಿಸಿದರು.