ಲೋಕದರ್ಶನ ವರದಿ
ಚಿಕ್ಕೋಡಿ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸುಮಾರು 8 ಕೋಟಿ ರೂಗಳ ಅಂದಾಜಿನಲ್ಲಿ ಕೆಎಲ್ಇ ಸಂಸ್ಥೆ ಸಿಬಿಎಸ್ಇ ಶಾಲೆಯ ನೂತನ ಕಟ್ಟಡ ನಿಮರ್ಿಸುವ ಮೂಲಕ ಬರುವ ಶೈಕ್ಷಣಿಕ ವರ್ಷದಲ್ಲಿ ಶಾಲೆಯನ್ನು ಪ್ರಾರಂಭಿಸಲು ನಿರ್ದರಿಸಲಾಗಿದೆ ಎಂದು ರಾಜ್ಯಸಭೆ ಸದಸ್ಯ ಹಾಗೂ ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ಪಟ್ಟಣದ ಬಾಣಂತಿ ಕೊಡಿ ರಸ್ತೆಯ ಬಳಿ ಸುಮಾರು 5.5 ಎಕರೆ ಜಾಗದಲ್ಲಿ ಕೆಎಲ್ಇ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡ ನಿಮರ್ಾಣದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಚಿಕ್ಕೋಡಿಯಲ್ಲಿ ಒಂದು ಸಿಬಿಎಸ್ಇ ಶಾಲೆ ಆಗಬೇಕೆಂಬ ಜನರ ಬಹು ದಿನಗಳ ಬೇಡಿಕೆಯನ್ನು ಶೀಘ್ರದಲ್ಲಿಯೇ ಕೆಎಲ್ಇ ಸಂಸ್ಥೆ ಸಾಕಾರಗೊಳಿಸಲಿದೆ ಎಂದರು.
ಈಗಾಗಲೇ ಚಿಕ್ಕೋಡಿಯಲ್ಲಿ ಎಲ್ಲ ಕಾಲೇಜುಗಳಿದ್ದು, ಕಾನೂನು ಮಹಾವಿದ್ಯಾಲಯದ ಕಟ್ಟಡ ನಿಮರ್ಾಣಕ್ಕೆ ಸಹ ಜಾಗವನ್ನು ಖರೀದಿಸಲಾಗಿದೆ. ಅದರ ಭೂಮಿ ಪೂಜೆಯನ್ನು ಸಹ ಶೀಘ್ರದಲ್ಲಿಯೇ ಮಾಡಲಾಗುವುದು ಎಂದರು.
ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಗಡಿಭಾಗದಲ್ಲಿ ಕೆಎಲ್ಇ ಮತ್ತೊಂದು ಹೆಜ್ಜೆ ಇಟ್ಟಿದೆ. ಬಹುದಿನಗಳ ಬೇಡಿಕೆಯನ್ವಯ ಸಿಬಿಎಸ್ಇ ಶಾಲೆ ಶೀಘ್ರದಲ್ಲಿಯೇ ಪ್ರಾರಂಭಗೊಳ್ಳಲಿದೆ ಎಂದರು. ಈಗಾಗಲೇ ಚಿಕ್ಕೋಡಿಯಲ್ಲಿ ಪಾಲುಟೆಕ್ನಿಕ್, ಇಂಜಿನಿಯರಿಂಗ, ಕಾನೂನು ಶಿಕ್ಷಣ, ಬಿಸಿಎ, ಬಿಬಿಎ ಕಾಲೇಜುಗಳನ್ನು ಪ್ರಾರಂಭಿಸಿದ್ದು ಎಲ್ಲವು ಸಹ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಮುಂಚುನಿಯಲ್ಲಿವೆ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಚಿಕ್ಕೋಡಿ ಸಂಪಾದನಾ ಚರಮೂತರ್ಿ ಮಠದ ಸಂಪಾದನಾ ಮಹಾಸ್ವಾಮಿಗಳು ಕೆಎಲ್ಇ ಶಾಲೆಸಿಬಿಎಸ್ಇಯ ಕಟ್ಟಡದ ಭೂಮಿಪೂಜೆಯನ್ನು ನೇರವೆರಿಸಿದರು.
ಕೆಎಲ್ಇ ಆಡಳಿತ ಮಂಡಳಿ ಸದಸ್ಯ ಬಸವರಾಜ ಪಾಟೀಲ, ಮಹೇಶ ಭಾತೆ, ಚಿಕ್ಕೋಡಿ ಪಟ್ಟಣದ ಗಣ್ಯ ವ್ಯಾಪಾರಸ್ಥರಾದ ಎಸ್.ಎಸ್.ಕವಲಾಪೂರೆ, ಎನ್.ಎಸ್.ವಂಟಮುತ್ತೆ, ಟಿಎಪಿಸಿಎಂಎಸ್ ಅಧ್ಯಕ್ಷ ಜಗದೀಶ ಕವಟಗಿಮಠ, ಎಸ್.ಎಸ್.ಚೆನ್ನವರ, ಷಡಕ್ಷರಿ ಮೂಗೇರಿ, ಪ್ರಭು ಬೆಲ್ಲದ, ಸಂಜು ಕವಟಗಿಮಠ, ಸಂಜಯ ಅರಗೆ, ಅಂಗಸಂಸ್ಥೆಗಳ ಪ್ರಾಚಾರ್ಯರಾದ ಸಿದ್ದರಾಮಪ್ಪ ಇಟ್ಟಿ, ಭಾರತಿ ಪಾಟೀಲ, ಎಂ.ಟಿ.ಕುರಣಿ, ಡಿ.ಬಿ.ಸೊಲ್ಲಾಪುರೆ, ಸಂದೀಪ ಖ್ಯಾತನವರ, ನಾಗರಾಜ ಮೇದಾರ, ಸತೀಶ ಅಪ್ಪಾಜಿಗೋಳ, ಅಕ್ರಮ ಅಕರ್ಾಟೆ ಸೇರಿದಂತೆ ಪುರಸಭೆ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.