ಧಾರವಾಡ.20: ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಬಹಿರಂಗ ಪ್ರಚಾರ ರವಿವಾರ ಏ. 21ರ ಸಂಜೆ 06 ಗಂಟೆಗೆ ಅಂತ್ಯಗೊಳ್ಳಲಿದೆ. ಈ ಅವಧಿಯ ಬಳಿಕ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿರುವ ವಿವಿಧ ಕ್ಷೇತ್ರಗಳ ರಾಜಕೀಯ ಕಾರ್ಯಕರ್ತರು, ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರದಿಂದ ನಿರ್ಗಮಿಸುವಂತೆ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಚುನಾವಣಾ ಆಯೋಗದ ನಿದರ್ೇಶನದಂತೆ ಚುನಾವಣಾ ಬಹಿರಂಗ ಪ್ರಚಾರ ಏ. 21 ರಂದು ರವಿವಾರ ಸಂಜೆ 06 ಗಂಟೆಗೆ ಅಂತ್ಯಗೊಳ್ಳಲಿದೆ. ಈ ಅವಧಿಯ ನಂತರ ವಿವಿಧೆಡೆಗಳಿಂದ ಆಗಮಿಸಿರುವ ರಾಜಕೀಯ ಕಾರ್ಯಕರ್ತರು, ಕ್ಷೇತ್ರದ ಮತದಾರರಲ್ಲದವರು ಧಾರವಾಡ ಕ್ಷೇತ್ರದಲ್ಲಿ ಇರುವಂತಿಲ್ಲ.
ಕೂಡಲೇ ಅಂತಹವರು ಮತಕ್ಷೇತ್ರದಿಂದ ನಿರ್ಗಮಿಸಬೇಕು. ಬೇರೆ ಬೇರೆ ಕ್ಷೇತ್ರದಿಂದ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ರಾಜಕೀಯ ವ್ಯಕ್ತಿಗಳು, ಇತರರು ಜಿಲ್ಲೆಯ ವಿವಿಧ ಲಾಡ್ಜ್, ಫಾರಂಹೌಸ್, ಹೋಟೆಲ್ ಮತ್ತು ಇತರ ಸ್ಥಳಗಳಲ್ಲಿ ತಂಗಿರುವ ಸಾಧ್ಯತೆಗಳಿದ್ದು, ಅಂತಹವರು ಕೂಡಲೇ ಅಲ್ಲಿಂದ ನಿರ್ಗಮಿಸಬೇಕು.
ಅಭ್ಯಥರ್ಿಗಳು/ಏಜೆಂಟರಿಗೆ ಸೂಚನೆ : ಯಾವುದೇ ಪಕ್ಷ, ಅಭ್ಯಥರ್ಿಗಳು, ಏಜೆಂಟರು ಅಥವಾ ಅಭ್ಯಥರ್ಿಗಳ ಪರವಾಗಿ ಏಪ್ರಿಲ್ 23ರಂದು ಮತದಾರರನ್ನು ಮತಗಟ್ಟೆಗಳಿಗೆ ಕರೆದುಕೊಂಡು ಬರಲು ಮತ್ತು ಹೋಗಲು ವಾಹನದ ವ್ಯವಸ್ಥೆಯನ್ನು ಮಾಡುವಂತಿಲ್ಲ. ಅಲ್ಲದೆ ಉಪಹಾರ ಅಥವಾ ಊಟದ ವ್ಯವಸ್ಥೆ ಮಾಡಬಾರದು.
ಮತಗಟ್ಟೆ ಏಜೆಂಟರುಗಳು ಆದಷ್ಟು ನಿಗದಿತ ಸಮಯದೊಳಗೆ ಮತಗಟ್ಟೆಗಳಿಗೆ ಹಾಜರಾಗಬೇಕು. ಬೆಳಿಗ್ಗೆ 6 ಗಂಟೆಗೆ ಮತಗಟ್ಟೆಗಳಲ್ಲಿ ಸಿಬ್ಬಂದಿಗಳು ಅಣಕು ಮತದಾನ (ಮಾಕ್ ಪೊಲಿಂಗ್) ನಡೆಸುವರು, ಈ ಸಂದರ್ಭದಲ್ಲಿ ಸಂಬಂಧಪಟ್ಟ ಏಜೆಂಟರು ಹಾಜರಿರಬೇಕು. ಏಜೆಂಟರು ಮತಗಟ್ಟೆಗಳಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಬೇಕು.
ಡಿ-ಮಸ್ಟರಿಂಗ್ ಕೇಂದ್ರದಿಂದ ಭದ್ರತಾ ಕೊಠಡಿಗೆ ಇವಿಎಂ ಗಳನ್ನು ಸಾಗಿಸುವಾಗ ಅಭ್ಯಥರ್ಿಗಳು ಕೂಡ ಜೊತೆಯಲ್ಲಿ ಬರಲು ಅವಕಾಶವಿದ್ದು, ಮತದಾನಕ್ಕೆ ಉಪಯೋಗಿಸಿದ ಇವಿಎಂ ಗಳನ್ನು ಭದ್ರತಾ ಕೊಠಡಿಯಲ್ಲಿ ಇಡುವಾಗ, ಅಭ್ಯಥರ್ಿಗಳು ಹಾಜರಿದ್ದು, ಕೊಠಡಿಗಳನ್ನು ಸೀಲು ಮಾಡುವಾಗ ತಮ್ಮ ಮೊಹರು ಸಹ ಮಾಡಬಹುದಾಗಿದೆ. ಅಭ್ಯಥರ್ಿಗಳು ಅಥವಾ ಅವರ ನಿಯೋಜಕರು ಭದ್ರತಾ ಕೊಠಡಿಗಳ ಬಳಿ ಮತ ಎಣಿಕೆಯವರೆಗೆ ಇರಬಹುದಾಗಿದೆ.
ಲಾಡ್ಜ್/ಹೋಟೆಲ್ ಗಳಿಗೆ ಸೂಚನೆ : ಲೋಕಸಭೆ ಸಾರ್ವತ್ರಿಕ ಚುನಾವಣೆ ನಿಮಿತ್ಯ ಏಪ್ರಿಲ್ 23 ರಂದು ರಾಜ್ಯದ ಎರಡನೇ ಹಂತದಲ್ಲಿ ಧಾರವಾಡ ಸೇರಿದಂತೆ ಒಟ್ಟು 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಅಂದು ಸಾರ್ವತ್ರಿಕ ರಜೆ ಘೋಷಣೆಯಾಗಿರುತ್ತದೆ. ಹೀಗಾಗಿ ಮತದಾರರು ಮತದಾನ ಮಾಡದೆ ಪ್ರವಾಸ ಕೈಗೊಳ್ಳಬಾರದು. ಇದರಿಂದಾಗಿ ಶೇಕಡಾವಾರು ಮತದಾನ ಕಡಿಮೆಯಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಹೋಟೆಲ್ಗಳು ಅಥವಾ ಲಾಡ್ಜ್ ನವರು ಕೊಠಡಿ ಕೋರಿ ಬರುವ ಪ್ರವಾಸಿಗರಿಗೆ ಹಾಗೂ ಇತರೆಯವರಿಗೆ ಕೊಠಡಿ ಕಾಯ್ದಿರಿಸುವ ಮೊದಲು ಅವರ ಎಪಿಕ್ ಕಾಡರ್್ ಹಾಗೂ ವಿಳಾಸ ಪರಿಶೀಲಿಸಿ, ಮತದಾರರು ಚುನಾವಣೆ ನಡೆಯುವ ಕ್ಷೇತ್ರಗಳ ಪ್ರವಾಸಿಗರೆ ಅಥವಾ ಚುನಾವಣೆ ಇಲ್ಲದ ಕ್ಷೇತ್ರದ ಪ್ರವಾಸಿಗರೆ ಎಂಬುದನ್ನು ತಿಳಿದುಕೊಂಡು, ಚುನಾವಣೆ ಇಲ್ಲದ ಜಿಲ್ಲೆಯ ಪ್ರವಾಸಿಗರಿಗೆ ಆದ್ಯತೆ ನೀಡಿ, ಕೊಠಡಿ ಕಾಯ್ದಿರಿಸುವ ಮೂಲಕ ಪ್ರಜಾಪ್ರಭುತ್ವದ ಹಬ್ಬವಾದ ಲೋಕಸಭಾ ಚುನಾವಣೆಯ ಮತದಾನದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುವಂತೆ ಕೋರಲಾಗಿದೆ.
ಎಲ್ಲ ರಾಜಕೀಯ ಪಕ್ಷಗಳು, ಅಭ್ಯಥರ್ಿಗಳು ಚುನಾವಣಾ ಆಯೋಗದ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ, ಚುನಾವಣೆಗಳನ್ನು ಮುಕ್ತ ಹಾಗೂ ಶಾಂತ ರೀತಿಯಿಂದ ಕೈಗೊಳ್ಳಲು ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.