ಲೋಕದರ್ಶನ ವರದಿ
ಮಹಾಲಿಂಗಪುರ 8: ನಮ್ಮ ದೇಶದ ಅಧ್ಯಾತ್ಮಿಕ, ಸಾಂಸ್ಕ್ರತಿಕ, ಭಾವೈಕ್ಯತೆಯ ಸಹ ಬಾಳ್ವೆ, ನಮ್ಮ ಉಡುಗೆ ತೊಡುಗೆ, ಆಹಾರ ಪದ್ಧತಿ, ಪುರಾತನ ಆಯುವರ್ೆದಿಕ (ಔಷಧ) ವೈದ್ಯಕೀಯ ಪದ್ಧತಿ ಜಗತ್ತಿಗೆ ಮಾದರಿಯಾಗಿವೆ.ಎಂದು ವಿಶ್ರಾಂತ ಮುಖ್ಯೋಪಾಧ್ಯಾಯ ಎಸ್.ಎಮ್.ಅಣ್ಣಿಗೇರಿ ಹೇಳಿದರು.
ಚಮಕೇರಿ ಬಡಾವಣೆಯಲ್ಲಿ ಸಾಯಿ ಮಹಿಳಾ ಸಂಘ ವತಿಯಿಂದ ಉಗಾದಿ ಸಂಬ್ರಮ ಹಾಗೂ ಇಳಕಲ್ ಸೀರೆ ಪುನಃ ಚೇತನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ದೇಶದ ವಿಭಿನ್ನ ಸಂಸ್ಕ್ರತಿಯುಳ್ಳ ಸಮಾಜಗಳಿಗೆ ನಮ್ಮ ಪೂರ್ವಜರ ಅನೇಕ ಕೊಡುಗೆಗಳು ಅತ್ಯಂತ ಮಹತ್ವ ಪಡೆದಿವೆ. ವೈಜ್ಞಾನಿಕವಾಗಿ ತುಲನೆ ಮಾಡಿದರೆ ಇಂದಿಗೂ ದೇಶ ವಿದೇಶಗಳಲ್ಲಿಯೂ ಮಹತ್ವಪಡೆದಿದ್ದನ್ನು ಹೆಮ್ಮೆಯಿಂದ ಹೇಳಬೇಕು. ಇಂಥ ಸಮಯದಲ್ಲಿ ಪೂರ್ವಜರ ದಾರಿಯಲ್ಲಿ ಸಾಗಿ ಅವರ ಕೊಡುಗೆಗಳ ಮಹತ್ವ ಅರಿತುಕ್ಕೊಂಡು ಜೀವನದಲ್ಲಿ ಅಳವಡಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕಾಗಿದೆ.ಆಗ ಮಾತ್ರ ನಮ್ಮತನ ಉಳಿಯಲು ಸಾಧ್ಯವೆಂದು ದೇಶದ ಶ್ರೇಷ್ಠತೆಯನ್ನು ಒತ್ತಿ ಹೇಳಿದರು.
ಯುವಕರು ದೇವರ ಮೇಲಿನ ಭಕ್ತಿ, ತಂದೆ ತಾಯಿಗಳಿಗೆ ವಿಧೇಯತೆ, ಹಿರಿಯರಿಗೆ ಮಯರ್ಾದೆ ಕೊಡುವುದನ್ನು ಮರೆತು ತಂಬಾಕು ಸೇವನೆ, ಧೂಮ್ರಪಾನ, ಮದ್ಯಪಾನ, ಜೂಜು ( ಬೆಟ್ಟಿಂಗ, ಇಸ್ಪಿಟ್) ಆಟಕ್ಕೆ ಬಲಿಯಾಗಿ ತಮ್ಮ ಬದುಕಿನ ದುರಂತ ಅಂತ್ಯಕ್ಕೆ ಕಾರಣ ರಾಗುತ್ತಿದ್ದು ಇಂಥ ಸಮಯದಲ್ಲಿ ಯುವಕರ ಜೀವನಕ್ಕೆ ಒಳ್ಳೆಯವರ ಮಾರ್ಗದರ್ಶನದ ಅವಶ್ಯಕತೆಯಿದೆ.
ಪಾಶ್ಛಿಮಾತ್ಯ ದೇಶಗಳ ಪರಂಪರೆಯ ಜೀವನಶೈಲಿ, ಉಡುಗೆ ತೊಡುಗೆ, ಹಾವಭಾವ, ಅಹಾರ , ಇನ್ನೂ ಹಲವಾರು ಪದ್ಧತಿಗಳನ್ನು ಅಳವಡಿಸಿಕ್ಕೊಂಡು ನಮ್ಮತನವನ್ನು ಕಳೆದುಕ್ಕೊಳ್ಳುತ್ತಿದ್ದೇವೆ.ಎಂದು ವಿಷಾಧಿಸಿದರು.
ಇಂಥ ಸಂಧರ್ಭದಲ್ಲಿ ಸಂಸ್ಥೆಯ ಮಹಿಳಾ ಸದಸ್ಯರು ಶತ ಶತಮಾನಗಳ ನಮ್ಮ ಪೂರ್ವಜ ಮಹಿಳೆಯರು ತೊಡುವ ಕುಂ.ಕುಂ, ಬಳೆ ಸೀರೆಯನ್ನು ಉಟ್ಟು ನಮ್ಮ ಸಂಸ್ಕ್ರತಿ ಇನ್ನೂ ಜೀವಂತವಿದೆ ಎಂದು ತೋರಿಸಿದ ಮಹಿಳೆಯರ ಕಾರ್ಯ ಶ್ಲ್ಯಾಘನೀಯ. ತಪ್ಪುದಾರಿ ತುಳಿಯುತ್ತಿರುವ ಯುವಕರಾದಿಯಾಗಿ ಎಲ್ಲರನ್ನು ಸರಿ ದಾರಿಗೆ ತರಲು ಮಹಿಳೆಯರು ಪ್ರಯತ್ನಿಸಿ ಇದೆ ರೀತಿಯ ಹಲವಾರು ಕಾರ್ಯಕ್ರಮ ಹಾಕಿಕೊಂಡು ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸಿ ಮಾದರಿಯಾಗಬೇಕಾಗಿದೆಎಂದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿ ವರದಿಗಾರ ನಾರಾಣಗೌಡ ಉತ್ತಂಗಿ, ತಾಯಿಯ ಮಡಿಲು ಮೊದಲ ಪಾಠಶಾಲೆ, ತಾಯಿ ಮೊದಲ ಗುರು ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಬಾಲ್ಯದಲ್ಲಿಯೆ ದೇಶಕ್ಕೆ ಬಲಿದಾನ ನೀಡಿದ ಮಹಾತ್ಮಾ ಗಾಂಧಿ, ಭಗತ್ ಸಿಂಘ್, ರಾಣಿ ಚೆಣ್ಣಮ್ಮ, ಸಂಗೋಳಿ ರಾಯಣ್ಣ, ಇನ್ನೂ ಹಲವರ ತ್ಯಾಗ, ಬಲಿದಾನ, ಜೀವನ ಚರಿತ್ರೆ ಹೇಳಿ ಮಹಾತ್ಮರ ಆದರ್ಶಗುಣಗಳು, ಹಾಗೂ ದೇಶ ಭಕ್ತಿ, ಒಳ್ಳೆಯ ಸಂಸ್ಕ್ರತಿ ಮಕ್ಕಳಲ್ಲಿ ಬರುವಂತೆ ಮಾಡಬೇಕು. ಆಗ ಮಾತ್ರ ದೇಶದ ಪ್ರಗತಿ ಸಾದ್ಯವೆಂದರು.
ಬಡಾವಣೆ ಮಹಿಳೆಯರು ಇಳಕಲ್ ಸೀರೆ ಪುರುಷರು ಬಿಳಿ ಶರ್ಟ, ಬಿಳಿ ಪಂಚೆ, ಮಕ್ಕಳು ವಿವಿಧ ಪೋಷಾಕುಗಳಲ್ಲಿ ಕಂಗೋಳಿಸಿದರು.
ಈ ಸಂಧರ್ಭದಲ್ಲಿ ಅತಿಥಿಗಳಾಗಿ ಪುರ ಸಭೆ ಸದಸ್ಯ ಚನಬಸು ಯರಗಟ್ಟಿ, ಶಿಕ್ಷಕ ಕೆ.ಎಸ್.ಮಠ ಇನ್ನಿತರ ರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುವರ್ಣ ಒಂಟಿ, ಮೀನಾಕ್ಷಿ ಉಮರಾಣಿ ಸ್ವಾಗತ, ಅಕ್ಷತಾ ಸಪ್ತಸಾಗರ ವಂದನಾರ್ಪನೆ, ಈರಣ್ಣ ಸಪ್ತಸಾಗರ ನಿರೂಪನೆ ಮಾಡಿದರು