ಸ್ಥಳೀಯ ಜೇಸಿಐ ನೂತನ ಪದಾಧಿಕಾರಿಗಳ ಆಯ್ಕೆ
ರಾಣಿಬೆನ್ನೂರ 25: ಸ್ಥಳೀಯ ಜೇಸಿಐ (ಜ್ಯೂನಿಯರ್ ಛೇಂಬರ್ ಇಂಟರ್‌ನ್ಯಾಶನಲ್) ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚಿಗೆ ಜರುಗಿತು.
ಅಧ್ಯಕ್ಷರಾಗಿ ಕುಮಾರ ಎಸ್ ಬೆಣ್ಣಿ, ಉಪಾಧ್ಯಕ್ಷರಾಗಿ ಅಶೋಕ ದುರ್ಗದಶೀಮಿ, ಚಂದನ ಹಿತ್ತಲಮನಿ, ವಿನಾಯಕ ಕಾಕಿ, ಸಾಯಿನಾಥ ಗೋಂದಕರ, ಆಕರ್ಶ ಬಸ್ಮಾಂಗಿಮಠ, ವಿನಾಯಕ ಗುಲಗಂಜಿ, ರೇಖಾ ಬೆಣ್ಣಿ, ಕಾರ್ಯದರ್ಶಿಯಾಗಿ ಇಮ್ರಾನ್ ನೀಲಗಾರ, ಸಹ ಕಾರ್ಯದರ್ಶಿಯಾಗಿ ವಿನಾಯಕ ಯಕನಹಳ್ಳಿ, ಖಜಾಂಚಿಯಾಗಿ ವಿದ್ಯಾಧರ ಹಲಗೇರಿ, ತಾಂತ್ರಿಕ ವಿಭಾಗ ಮತ್ತು ಮಾಧ್ಯಮ ಪ್ರತಿನಿಧಿಯಾಗಿ ಮಂಜುನಾಥ ಹೊಸಪೇಟೆ, ಲೀಗಲ್ ಅಡ್ವೈಸರ್ ಮಲ್ಲಿಕಾರ್ಜುನ ತಾವರಗೊಂದಿ, ಬ್ಲಡ್ ಡೋನೇಶನರಾಗಿ ನಾರಾಯಣ ಪವಾರ, ಕ್ರೀಡಾ ವಿಭಾಗಕ್ಕೆ ನಾಗರಾಜ ಬೆಣ್ಣಿ, ವಿಜಯ ಮಾಳೋದೆ, ಜೆಸಿ ಸಪ್ತಾಹಕ್ಕೆ ರೂಪಾ ಕಾಕಿ, ಸಾಂಸ್ಕೃತಿಕ ವಿಭಾಗಕ್ಕೆ ಆಕಾಶ ಕೊಟ್ಟೂರ, ಲಕ್ಷ್ಮೀ ಕಾಕಿ, ಲೇಡಿ ಜೇಸಿ ವಿಭಾಗಕ್ಕೆ ರೇಖಾ ಬೆಣ್ಣಿ, ಜ್ಯೂನಿಯರ್ ಜೆಸಿಯಾಗಿ ಅಂಕಿತಾ ಕಾಕಿ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ಜ.29ರಂದು ಸಂಜೆ 06ಕ್ಕೆ ನಗರದ ಪಿ.ಬಿ.ರಸ್ತೆಯ ದೈವಜ್ಞ ಸಮುದಾಯ ಭವನದಲ್ಲಿ ಜರುಗಲಿದೆ. ಶಾಸಕ ಪ್ರಕಾಶ ಕೋಳಿವಾಡ, ಮಾಜಿ ಶಾಸಕ ಅರುಣಕುಮಾರ ಪೂಜಾರ ಮುಖ್ಯ ಅತಿಥಿಯಾಗಿ ಆಗಮಿಸುವರು. ಬಿಎಜೆಎಸ್‌ಎಸ್ ಸಮೂಹ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಡಾ.ಆರ್.ಎಂ.ಕುಬೇರ್ಪ ಮುಖ್ಯ ಭಾಷಣ ಮಾಡುವರು.
ಜೇಸಿಐ ವಲಯ-24ರ ಅಧ್ಯಕ್ಷ ಗೌರೀಶ ಭಾರ್ಗವ್ ನೂತನ ಅಧ್ಯಕ್ಷ ಕುಮಾರ ಬೆಣ್ಣೆ ಅವರಿಗೆ ಹಾಗೂ ಜೆ.ಎ.ಸಿ, ವಲಯಾಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ ಮತ್ತು ವಲಯ ಉಪಾಧ್ಯಕ್ಷ ಮಧುಸೂಧನ ನವಡ ನೂತನ ಸದಸ್ಯರುಗಳಿಗೆ ಪ್ರಮಾಣ ವಚನ ಬೋಧಿಸುವರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.