ಆರ್.ಪಿ.ಡಿ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ ಚುನಾವಣಾ ವೀಕ್ಷಕರು ಮತ ಎಣಿಕೆ ಕೇಂದ್ರ, ಸ್ಟ್ರಾಂಗ್ ರೂಮ್ ಪರಿಶೀಲನೆ

ಬೆಳಗಾವಿ, 08: ಲೋಕಸಭಾ ಚುನಾವಣೆಯ ಬೆಳಗಾವಿ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ರಾಜೀವ್ಚಂದ್ರ ದುಬೆ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ.ವಿಶಾಲ್ ಆರ್. ಅವರು ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗುತ್ತಿರುವ ನಗರದ ಆರ್.ಪಿ.ಡಿ ಮಹಾವಿದ್ಯಾಲಯಕ್ಕೆ ಸೋಮವಾರ(ಏ.8) ಅವರು ಭೇಟಿ ನೀಡಿದರು.

  ಮತ ಎಣಿಕೆ ಕೊಠಡಿಗಳು ಹಾಗೂ ಮತಯಂತ್ರಗಳನ್ನು ಇರಿಸುವ ಸ್ಟ್ರಾಂಗ್ ರೂಮ್ ಗಳನ್ನು ಚುನಾವಣಾ ಆಯೋಗದ ನಿದರ್ೇಶನದ ಪ್ರಕಾರವೇ ನಿಮರ್ಿಸುವಂತೆ ಅಧಿಕಾರಿಗಳಿಗೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರವಾರು ಮತ ಎಣಿಕೆ ಕೊಠಡಿಗಳು ಹಾಗೂ ಸ್ಟ್ರಾಂಗ್ ರೂಮ್ ನಿಮರ್ಾಣ ಕೆಲಸವನ್ನು ಪರಿಶೀಲಿಸಿದ ಅವರು, ಮತ ಎಣಿಕೆ ದಿನ ಭದ್ರತೆ ಸೇರಿದಂತೆ ಯಾವುದೇ ರೀತಿಯ ಲೋಪ ಉಂಟಾಗದಂತೆ ಎಚ್ಚರಿಕೆ ವಹಿಸುವಂತೆ ನಿದರ್ೇಶನ ನೀಡಿದರು.

ಈ ಬಾರಿ ಹೆಚ್ಚುವರಿ ಬ್ಯಾಲೆಟ್ ಯುನಿಟ್ಗಳನ್ನು ಬಳಸಬೇಕಿರುವುದರಿಂದ ಅಗತ್ಯಕ್ಕೆ ಅನುಸಾರವಾಗಿ ಇನ್ನಷ್ಟು ಕೊಠಡಿಗಳನ್ನು ಸಜ್ಜುಗೊಳಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ವಿಶಾಲ್ ಅವರು ಚುನಾವಣಾ ವೀಕ್ಷಕರಿಗೆ ವಿವರಿಸಿದರು.

ಮತ ಯಂತ್ರ, ವಿವಿಪ್ಯಾಟ್ ಹಾಗೂ ಬ್ಯಾಲೆಟ್ ಯೂನಿಟ್ಗಳನ್ನು ಪ್ರಾಯೋಗಿಕವಾಗಿ ಸ್ಟ್ರಾಂಗ್ ರೂಮ್ ನಲ್ಲಿರಿಸಿ ಖುದ್ದಾಗಿ ಪರಿಶೀಲಿಸುವ ಮೂಲಕ ನಿಯಮ ಪಾಲನೆಯನ್ನು ಖಚಿತಪಡಿಸಿಕೊಂಡರು.

ಮತ ಎಣಿಕೆ ಕೌಂಟರ್ಗಳು, ಬ್ಯಾರಿಕೇಡ್ ವ್ಯವಸ್ಥೆ ಹಾಗೂ ಮತ ಎಣಿಕೆ ಸಿಬ್ಬಂದಿಗೆ ಕಲ್ಪಿಸಲಾಗುತ್ತಿರುವ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು.

ನಂತರ ಮತ ಎಣಿಕೆ ಕೇಂದ್ರದಲ್ಲಿ ಸ್ಥಾಪಿಸಲಾಗುವ ಸಾಮಾನ್ಯ ವೀಕ್ಷಕರ ಕೊಠಡಿ, ಚುನಾವಣಾಧಿಕಾರಿಗಳ ಕೊಠಡಿ, ಮಾಧ್ಯಮ ಕೇಂದ್ರ ಮತ್ತಿತ್ತರ ವ್ಯವಸ್ಥೆಯನ್ನು ಕಲ್ಪಿಸುವುದಕ್ಕೆ ನಿಗದಿಪಡಿಸಲಾದ ಕೊಠಡಿಗಳನ್ನು ಸಾಮಾನ್ಯ ವೀಕ್ಷಕರಾದ ರಾಜೀವ್ಚಂದ್ರ ದುಬೆ ಮತ್ತು ಜಿಲ್ಲಾ ಚುನಾವಣಾಧಿಕಾರಿ ಡಾ.ವಿಶಾಲ್ ಪರಿಶೀಲಿಸಿದರು.

ಭದ್ರತಾ ಕ್ರಮಗಳ ಕುರಿತು ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಬಿ.ಎಸ್. ಲೋಕೇಶ್ ಕುಮಾರ್ ಅವರು, ಚುನಾವಣಾ ವೀಕ್ಷಕರಿಗೆ ವಿವರಿಸಿದರು.

ಡಿಸಿಪಿ ಸೀಮಾ ಲಾಟ್ಕರ್, ಡಿಸಿಪಿ ಯಶೋಧಾ ಒಂಟಗೋಡಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿವರ್ಾಹಕ ಎಂಜಿನಿಯರ್ ಸಂಜಯ್ ಹುಲಕಾಯಿ, ಹೆಸ್ಕಾಂ, ಎನ್ಐಸಿ ಅಧಿಕಾರಿಗಳು ಉಪಸ್ಥಿತರಿದ್ದರು.