ವಕೀಲರ ಸಂಘಕ್ಕೆ ನೂತನ ಉಪಾಧ್ಯಕ್ಷರಾಗಿ ಆಯ್ಕೆ
ರಾಣಿಬೆನ್ನೂರ 04: ಇಲ್ಲಿನ ಶ್ರೀರಾಮನಗರದ ಶಿರಡಿ ಸಾಯಿಬಾಬ ದೇವಸ್ಥಾನದ ಸಭಾಭವನದಲ್ಲಿ ಸ್ಥಳಿಯ ವಕೀಲರ ಸಂಘಕ್ಕೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಹೆಚ್.ಹೆಚ್.ತಿಮ್ಮೇನಹಳ್ಳಿ ಮತ್ತು ಯುವ ವಕೀಲ ಅಮರೇಶ ಹಳ್ಳಹಳ್ಳಿ ಇವರನ್ನು ತಾಲೂಕಾ ಗಂಗಾಮತ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಸಲಾಯಿತು.
ನ್ಯಾಯವಾದಿ ಎಂ.ಬಿ. ಚಿನ್ನಪ್ಪನವರ, ಸಮಾಜದ ಮುಖಂಡರುಗಳು ಕಾರ್ಯಕ್ರಮದ ಕುರಿತು ಸಭೆಯಲ್ಲಿ ಸಲಹೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕಾ ಗಂಗಾಮತ ಸಮಾಜದ ಅಧ್ಯಕ್ಷ ರಾಜು ಜಡಮಲಿ, ನಿವೃತ್ತ ಶಿಕ್ಷಕ ಆರ್.ಎಚ್. ಐರಣಿ, ನ್ಯಾಯವಾದಿ ಹೊನ್ನಪ್ಪ ತಿಮ್ಮೇನಹಳ್ಳಿ, ಸಮಾಜ ಮುಖಂಡರಾದ ಫಕ್ಕೀರ್ಪ ತುಮ್ಮಿನಕಟ್ಟಿ, ಕರಬಸಪ್ಪ ಬಾರ್ಕಿ, ಕಾಳಪ್ಪ ಅಂಬಿಗೇರ, ಕೊಟ್ರೇಶ ಕುದರಿಹಾಳ, ರಾಜು ರಟ್ಟಿಹಳ್ಳಿ, ಮೂರ್ತಿ ಸುಣಗಾರ, ಆಂಜನೇಯ ಬಾಳಿಕಾಯಿ, ಹಾಲೇಶ ಜಾಡರ ಸೇರಿದಂತೆ ಮತ್ತಿತರ ಮುಖಂಡರು ಇದ್ದರು.