ಎಲಬು ಸಾಂದ್ರತಾ ಉಚಿತ ಶಿಬಿರದಲ್ಲಿ ಡಾ. ನಾರಾಯಣ ಪವಾರ ಅಭಿಮತಸಂಧಿವಾತ ನೋವುಗಳ ಪರಿಹಾರಕ್ಕೆ ಆಹಾರ ಪದ್ದತಿಯೇ ಕಾರಣ

Elabu Concentration Free Camp Dr. Narayana Pawar Abhima Arthritis pain relief is due to diet

ಎಲಬು ಸಾಂದ್ರತಾ ಉಚಿತ ಶಿಬಿರದಲ್ಲಿ ಡಾ. ನಾರಾಯಣ ಪವಾರ ಅಭಿಮತಸಂಧಿವಾತ ನೋವುಗಳ ಪರಿಹಾರಕ್ಕೆ ಆಹಾರ ಪದ್ದತಿಯೇ ಕಾರಣ

ರಾಣೇಬೆನ್ನೂರ 23: ಮಾನವನ ದೇಹದ ಎಲಬುಗಳ ನೋವು ಸೇರಿ ಇತರ ಸಂಧಿವಾತಗಳ ನೋವು ನಿವಾರಣೆಗೆ ಆರಂಭದಲ್ಲೇ ವೈದ್ಯರನ್ನು ಭೇಟಿಯಾಗಿ, ನಿಯಮಿತ ಆರೋಗ್ಯ ತಪಾಸಣೆ ಮತ್ತು ಅಗತ್ಯ ಚಿಕಿತ್ಸೆ ಪಡೆಯುವುದರಿಂದ ಹಾಗೂ ಆಹಾರದ ಪದ್ದತಿಯಿಂದ ಮೂಳೆ ಸಂಬಂಧಿತ ಕಾಯಿಲೆಗಳನ್ನು ಜೀವನದುದ್ದಕ್ಕೂ ದೂರವಿಡಬಹುದು  ಎಂದು ಸ್ಥಳೀಯ ಅಮೃತಂ ಆಯುರ್ವೇದಿಕ್ ಆಸ್ಪತ್ರೆಯ ವೈದ್ಯ ಡಾ. ನಾರಾಯಣ್ . ಎಂ. ಪವಾರ್ ಹೇಳಿದರು.  ಅವರು ಸೋಮವಾರ ನಗರದ   ಚರ್ಚ್‌ ರಸ್ತೆಯಲ್ಲಿನ ಎಂ.ಕೆ. ಪವಾರ ಮೆಮೋರಿಯಲ್ ಸೊಸೈಟಿಯ ಅಮೃತಂ ಆಸ್ಪತ್ರೆಯಲ್ಲಿ  ಮುಂಬೈನ ಗುಫಿಕ್ ಬಯೋಸೈನ್ಸ್‌ ಲಿಮಿಟೆಡ್ ಸಹಯೋಗದಲ್ಲಿ ಏರಿ​‍್ಡಸಿದ್ದ ಉಚಿತ ಎಲುಬು ಸಾಂದ್ರತೆ ಪರೀಕ್ಷೆ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.   ಸಂಧಿವಾತವು ರೋಗವಲ್ಲ. ಆದರೆ ಅದು ವಿವಿಧ ರೋಗಗಳ ತವರೂರಾಗಿದೆ. ಇಂದಿನ ಯಾಂತ್ರೀಕೃತ ಜೀವನ,ಅತಿಯಾದ ಜಂಕ್ ಆಹಾರ ಸೇವನೆ, ದೈಹಿಕ ಚಟುವಟಿಕೆ ಇಲ್ಲದ ಜೀವನಶೈಲಿ, ಏರುತ್ತಿರುವ ಬೊಜ್ಜು, ಒತ್ತಡದ ಬದುಕು, ಗಂಟೆಗಟ್ಟಲೇ ಕೂತು ಕೆಲಸ ಮಾಡುವುದರಿಂದ ಮೂಳೆ ಮತ್ತು ಕೀಲು ಸಂಬಂಧಿತ ಕಾಯಿಲೆಗಳು  ಹೆಚ್ಚಾಗಿ ಬಾಧಿಸುತ್ತವೆ ಎಂದರು.  ಸಂಧಿವಾತ, ಮಂಡಿನೋವು, ಹಿಮ್ಮಡಿ ನೋವು, ಕೀಲು ಸಂಬಂಧಿ ಸೇರಿದಂತೆ ಯಾವುದೇ ಸಮಸ್ಯೆಗಳು ಕಂಡು ಬಂದರೆ  ತಜ್ಞ ವೈದ್ಯರನ್ನು ಸಂಪರ್ಕಿಸಿ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೆಯೇ  ಈ ನೋವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು ಎಂದರು.   

ಮೂಳೆ ಸಮಸ್ಯೆ, ಕೀಲು ನೋವಿನಿಂದ ಬಳಲುತ್ತಿರುವವರಿಗೆ ಸುಧಾರಿತ ವೈದ್ಯಕೀಯ ಕ್ಷೇತ್ರದಲ್ಲಿ ಪರಿಹಾರವಿದೆ. ಸಂಧಿವಾತವು ಯಾವುದೇ ಲಿಂಗ, ವಯಸ್ಸಿನ ಬೇಧವಿಲ್ಲದೇ ಕಾಣಿಸಿಕೊಳ್ಳುವ ರೋಗವಾಗಿದೆ ಎಂದರು.  ನಿಗದಿತ ಸಮಯದಲ್ಲಿ ಚಿಕಿತ್ಸೆ ಲಭಿಸದಿದ್ದರೆ ಸಂಧಿನ ತೊಂದರೆ, ದೇಹದ ಬೆಳವಣಿಗೆ ಕುಂಠಿತ, ಮಾನಸಿಕ ಅಸ್ವಸ್ಥತೆಗಳಿಗೆ ಎಡೆಮಾಡಿಕೊಡುವುದಲ್ಲದೇ,ಬೆನ್ನುಹುರಿ ವ್ಯಾದಿಗೆ ತುತ್ತಾಗಬೇಕಾಗುತ್ತದೆ. ಸಂಧಿವಾತ ಇದು ಮಾನವನ ಜೀವನವನ್ನು ಸಂಪೂರ್ಣವಾಗಿ ನೋವಿನಿಂದ ಬಳಲುವಂತೆ ಮಾಡುತ್ತಿದೆ ಎಂದರು.   ಬಹಳಷ್ಟು ರೋಗಗಳಲ್ಲಿ ಸಂಧಿನ ಪಾತ್ರ ಅತ್ಯಧಿಕವಾಗಿದೆ. ವಾಯು ಸಂದಿವಾತ (ರ್ಯುಮ್ಯಾಟಾಯ್ಡ), ಎಲುಬು ಸಂದಿವಾತ(ಅಸ್ಟಿಯೋ) ಸಣ್ಣ ಸಂಧಿನ ಸಂಧಿವಾತ(ಗೌಟ) ಬೆನ್ನೆಲುಬು ಸಂಧಿವಾತ(ಸ್ಪಾಡಿಲೈಟಿಸ್) ಹೀಗೆ ವಿವಿಧ ರೀತಿಯ ಸಂಧಿವಾತಗಳೆಂದು ವಿಂಗಡಿಸಬಹುದು  ಎಂದು ನಾರಾಯಣ ಪವಾರ ಹೇಳಿದರು.     

ಸೊಸೈಟಿ ಅಧ್ಯಕ್ಷ ಕೃಷ್ಣಾಸಾ ಪವಾರ್, ನಗರಸಭಾ ಮಾಜಿ ಸದಸ್ಯೆ ರೂಪಾ ಪವಾರ್, ಡಾ.ಜಾಹ್ನವಿ ಹೊನ್ನಾಳಿ, ಪತ್ರಕರ್ತ ಎಂ. ಚಿರಂಜೀವಿ,ಶಿವಾನಂದ ಸೊಂಡೂರ, ಕಾಶಿನಾಥ್ ಪವಾರ್,  ನಾಗರಾಜ್ ಪವಾರ್, ಶ್ರೀಕಾಂತ್ ಕಳಸದ, ಗುಫಿಕ್ ಬಯೋ ಸೈನ್ಸ್‌ ನ ಎಸ್‌. ದಿವಾಕರ, ವಿ . ಸುನಿಲ್ ಕುಮಾರ್, ಆರ್ . ಚೇತನ್, ಸಿಬ್ಬಂದಿಗಳಾದ ಮಂಜುಳಾ, ಪ್ರತಿಭಾ, ಸಂತೋಷ್, ಸುಶೀಲಮ್ಮ, ಕವಿತಾ, ಶೋಭಾ, ಪ್ರಜ್ವಲ್, ಶ್ರುತಿ, ಲಕ್ಷ್ಮಿ, ಮತ್ತಿತರರು ಇದ್ದರು. 108 ಜನರು  ಉಚಿತವಾಗಿ ಎಲುಬು ಸಾಂದ್ರತೆ ಪರೀಕ್ಷಿಸಿಕೊಂಡರು.