ಶಾಲೆಗಳಲ್ಲಿ ಕರಡಿಗುಡ್ಡ ಪ್ರದರ್ಶನಕ್ಕೆ ಪ್ರಯತ್ನ

Efforts to show Kardigudda in schools

ಶಾಲೆಗಳಲ್ಲಿ ಕರಡಿಗುಡ್ಡ ಪ್ರದರ್ಶನಕ್ಕೆ ಪ್ರಯತ್ನ  

ಕಾರವಾರ 14: ಮಕ್ಕಳನ್ನು ಮೊಬೈಲ್ ಗೀಳು, ದುಶ್ಚಟಗಳಿಂದ ದೂರ ಇರುವಂತೆ ಸಂದೇಶ ಸಾರುವ ‘ಕರಡಿ ಗುಡ್ಡ’ ಚಿತ್ರವನ್ನು ಉತ್ತರ ಕನ್ನಡ ಜಿಲ್ಲೆಯ ಶಾಲೆಗಳಲ್ಲಿ ಪ್ರದರ್ಶಿಸಲು ,ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯಲು ಪ್ರಯತ್ನ ಮಾಡಲಾಗುವುದು ಎಂದು ಚಿತ್ರದ ನಿರ್ದೇಶಕ, ನಟ ಅಮಿತ್ ರಾವ್ ಹೇಳಿದರು.ಕಾರವಾರದಲ್ಲಿ ವಾರ್ತಾ ಇಲಾಖೆಯ ಅಧೀನದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾವುದೇ ವಯಸ್ಸಿನ ಮಕ್ಕಳು ಚಿತ್ರ ನೋಡಬಹುದು ಎಂದು ಪ್ರಮಾಣ ಪತ್ರ ಸಿಕ್ಕಿದೆ. ವಿದ್ಯಾರ್ಥಿಗಳು ಮತ್ತು ಅವರ ಪಾಲಕರಿಗೆ ಪರಿಣಾಮಕಾರಿ ಸಂದೇಶ ನೀಡಿದೆ ಎಂಬುದು ಬೆಂಗಳೂರಿನ ಶಾಲೆಗಳಲ್ಲಿ ಚಿತ್ರ ಪ್ರದರ್ಶಿಸಿದಾಗ ಅನುಭವಕ್ಕೆ ಬಂದಿದೆ. ಶಿಕ್ಷಣ ಇಲಾಖೆಯ ಅನುಮತಿ ಪಡೆದು ಪ್ರದರ್ಶನಕ್ಕೆ ಪ್ರಯತ್ನಿಸಲಾಗುವುದು ಎಂದರು.ಕನಿಷ್ಠ ಶುಲ್ಕದಲ್ಲಿ ಚಿತ್ರ ಪ್ರದರ್ಶಿಸಲಾಗುವುದು. ಸಂಗ್ರಹವಾದ ಮೊತ್ತದಲ್ಲಿ ಪ್ರತಿಭಾವಂತ ಮಕ್ಕಳಿಗೆ ಸಹಾಯ ಒದಗಿಸಲಾಗುವುದು. ಚಿತ್ರ ಪ್ರದರ್ಶನಕ್ಕೆ ನೆರವಾಗಲು ಸಂಘಸಂಸ್ಥೆಗಳು ಮುಂದೆ ಬಂದರೆ ಅನುಕೂಲ ಆಗಲಿದೆ ಎಂದರು.ಸಾಮಾಜಿಕ ಕಾರ್ಯಕರ್ತ ಬಿ.ಜಿ.ಸಾವಂತ್, ಅಜಯ ದೈವಜ್ಞ ಉಪಸ್ಥಿತರಿದ್ದರು.