ಶೈಕ್ಷಣಿಕ ಪ್ರವಾಸ ಜ್ಞಾನದ ವೃದ್ಧಿಗೆ ಸಹಕಾರಿ: ಬಿಇಒ ಮಹೇಶ್‌

Educational tours contribute to knowledge enhancement: BEO Mahesh

ಶೈಕ್ಷಣಿಕ ಪ್ರವಾಸ ಜ್ಞಾನದ ವೃದ್ಧಿಗೆ ಸಹಕಾರಿ: ಬಿಇಒ ಮಹೇಶ್‌

ಹೂವಿನ ಹಡಗಲಿ 06: ಶೈಕ್ಷಣಿಕ ಪ್ರವಾಸ ಜ್ಞಾನದ ವೃದ್ಧಿಗೆ ಸಹಕಾರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ ಹೇಳಿದರು.ತಾಲೂಕಿನ ಸರ್ಕಾರಿ ಪ್ರೌಢ ಶಾಲೆಗಳು, ಮುರಾರ್ಜಿ ದೇಸಾಯಿ, ಕ್ರೈಸ್ ವಸತಿ ಶಾಲೆಗಳಲ್ಲಿ 2024- 25ನೇ ಸಾಲಿನಲ್ಲಿ 8ನೇ ತರಗತಿಯಲ್ಲಿ ಕಲಿಯುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ  ವರ್ಗದ ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಪಠ್ಯದಲ್ಲಿ ಓದುವ ಐತಿಹಾಸಿಕ ಸ್ಥಳಗಳು ದೇವಾಲಯಗಳು ಜಲಪಾತಗಳ ವೀಕ್ಷಣೆ ಮಕ್ಕಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುತ್ತದೆ ಎಂದರು.ಈ ಸಂದರ್ಭದಲ್ಲಿ  ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಎ. ಕೋಟಪ್ಪ, ದೈಹಿಕ ಶಿಕ್ಷಣ ಅಧಿಕಾರಿ ರಫಿ ಅಹಮದ್ ಖವಾಸ್ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಿವಲಿಂಗಪ್ಪ.ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ಗಡ್ಡಿ ಶಿವಕುಮಾರ್, ಶೇಖ್ ಅಹಮದ್ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಡಗಲಿ  ವಿ ಬಿ ಜಗದೀಶ್ , ಪ್ರಧಾನ ಕಾರ್ಯದರ್ಶಿ ವಿ ಹೆಚ್ ಯೇಸು ನೋಡಲ್ ಅಧಿಕಾರಿ ಮಿಟ್ಯಾ ನಾಯ್ಕ , ಪ್ರವಾಸೋದ್ಯಮ ಇಲಾಖೆಯ ನೋಡಲ್ ಅಧಿಕಾರಿ ರುಕ್ಮಂಗದ, ಶಿಕ್ಷಕರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖ್ಯ ಗುರುಗಳು, ಶಿಕ್ಷಕರು, ಪಾಲಕರು ವಿದ್ಯಾರ್ಥಿಗಳು ಹಾಜರಿದ್ದರು. ತಾಲೂಕಿನಲ್ಲಿ 8ನೇ ತರಗತಿ ಓದುತ್ತಿರುವ ಒಟ್ಟು 148 ವಿದ್ಯಾರ್ಥಿಗಳು 6 ಜನ ಶಿಕ್ಷಕರು ನಾಲ್ಕು ದಿನಗಳ ಪ್ರವಾಸಕ್ಕೆ ಚಾಲನೆ ನೀಡಲಾಯಿತು ನೀಡಲಾಯಿತು.