ಮಾತಾ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ

Educational Tour of Mata Angla Medium School Students

ಮಾತಾ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ

ರಾಣೇಬೆನ್ನೂರು 31: ಮಕ್ಕಳ ಬೆಳವಣಿಗೆ ಮತ್ತು ಪರಿಸರದ ಬದಲಾವಣೆಗೆ ಶೈಕ್ಷಣಿಕ ಪ್ರವಾಸಗಳು ಹೊಸ ಚೈತನ್ಯ ಮತ್ತು ಸ್ಫೂರ್ತಿ ಬರುವಲ್ಲಿ ತುಂಬಾ ಸಹಕಾರಿಯಾಗಿದೆ ಎಂದು ಜಿಲ್ಲಾ ಡಯಟ್ ಹಿರಿಯ ಉಪನ್ಯಾಸಕ ಎಂ.ಎಚ್‌. ಪಾಟೀಲ್ ಹೇಳಿದರು.   ಅವರು ಇಲ್ಲಿನ ಚೋಳಮರಡೇಶ್ವರ ನಗರದ, ಮಾತ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳ, ಹುಬ್ಬಳ್ಳಿಯ ಪಿ ಆರ್ ಎಸ್ ಪ್ರವಾಸಿ ಸ್ಥಳಕ್ಕೆ ಆಯೋಜಿಸಲಾಗಿದ್ದ, ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.   

     ನಮ್ಮ ಪೂರ್ವಜರು ಇತಿಹಾಸದಲ್ಲಿ ಕೋಶ ಓದು ಇಲ್ಲ ದೇಶ ಸುತ್ತು ಇದರಿಂದ ಜ್ಞಾನ ಸಂಪಾದನೆ ಹೆಚ್ಚಿಸಿಕೊಳ್ಳಲು ಸಾಧ್ಯವಾಗುವುದು ಎನ್ನುವ ಅವರ  ಅವರ ವಿಚಾರದಂತೆ, ಪ್ರವಾಸ ಕೈಗೊಂಡಿರುವುದು ಸಂತೋಷದ ಸಂಗತಿ ಎಂದರು.  

     ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಚನ್ನಬಸಪ್ಪ ಎಸ್, ಶಿಕ್ಷಕರಾದ ನಾಗರಾಜ್ ಎಂ, ಪುಷ್ಪ ಉಜ್ಜೇರ, ಆಶಾ ಬಿ.ಎ., ಗೀತಾ ಕಮ್ಮಾರ, ಪ್ರವೀಣ ಗೌಡ ಪಾಟೀಲ್, ಮಮತಾ ಕೆ.ಎಂ. ಚೈತ್ರಾ ಸಿ.ಪಿ.,  ದೀಪಾ ಕೆ, ಅನಿತಾ ಪಿ, ಈರಮ್ಮ, ಬಸವರಾಜ ಕಣವಿ, ಸಂತೋಷ ಡೊಕ್ಕೇರ, ಸೇರಿದಂತೆ ಮತ್ತು ಇತರರು ಉಪಸ್ಥಿತರಿದ್ದರು. ಪಾಲ್ಗೊಂಡಿದ್ದ ನೂರಾರು ಪಾಲಕರು ಶಾಲೆಯ ಎಲ್ಲ ಮಕ್ಕಳಿಗೆ ವಿತರಿಸಿ, ಪ್ರವಾಸಕ್ಕೆ ಶುಭ ಹಾರೈಸಿದರು.