ಶಿಕ್ಷಣವೆಂಬುದು ಬರೀ ಬೋಧನೆಯಲ್ಲ, ಅದು ಪ್ರಗತಿಯ ಮೂಲ: ನಡುವಿನಕೇರಿ

ಶಿಕ್ಷಣವೆಂಬುದು ಬರೀ ಬೋಧನೆಯಲ್ಲ, ಅದು ಪ್ರಗತಿಯ ಮೂಲ: ನಡುವಿನಕೇರಿ Education is not just teaching, it is the source of progress: Dharikeri

             ದೇವರಹಿಪ್ಪರಗಿ 30 : ಶಿಕ್ಷಣವೆಂಬುದು ಬರೀ ಬೋಧನೆಯಲ್ಲ, ಅದು ಪ್ರಗತಿಯ ಮೂಲ ಹಾಗೂ ಸಬಲೀಕರಣದ ಪ್ರಬಲ ಅಸ್ತ್ರವಾಗಿದೆ ಎಂದು ಕೋರವಾರ ಸಮೂಹ ಸಂಪನ್ಮೂಲ ವ್ಯಕ್ತಿ ಬಿ.ಆಯ್‌.ನಡುವಿನಕೇರಿ ಅವರು ಹೇಳಿದರು. ತಾಲೂಕಿನ ಕೋರವಾರ ಕ್ಲಸ್ಟರ್ ವ್ಯಾಪ್ತಿಯ ಕೊಕಟನೂರ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಬುನಾದಿ ಸಾಮರ್ಥಕ್ಕೆ ಸಂಬಂಧಿಸಿದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕ ಎನ್‌.ಜಿ.ರಾಠೋಡ ಅವರು ಮಾತನಾಡಿ ಯಾವ ರೀತಿಯ ಶಿಕ್ಷಣದಿಂದ ಮಕ್ಕಳ ಮನ:ಶಕ್ತಿ ಹಾಗೂ ಚಾರಿತ್ರ್ಯ ರೂಪುಗೊಳ್ಳುವುದೋ ಹಾಗೂ ಯಾವುದರಿಂದ ನಮ್ಮ ಕಾಲ ಮೇಲೆ ನಾವು ನಿಂತುಕೊಳ್ಳಬಲ್ಲವೋ ಅಂತಹ ಶಿಕ್ಷಣ ಇಂದು ಅವಶ್ಯವಾಗಿದೆ ಎಂದರು.

            ಕಥೆ ಹೇಳುವ ಸ್ಪರ್ಧೆ,ಕಥೆ ಕಟ್ಟುವ ಸ್ಪರ್ಧೆ,ಸಂತಸದಾಯಕ ಗಣಿತ ಸ್ಪರ್ಧೆ,ಕೈ ಬರಹ ಹಾಗೂ ಕ್ಯಾಲಿಗ್ರಾಫಿ ಸ್ಪರ್ಧೆ,ಆರೋಗ್ಯ ಮತ್ತು ಪೌಷ್ಟಿಕಾಂಶ ಅರಿವು ಸ್ಪರ್ಧೆ,ರಸಪ್ರಶ್ನೆ ಸ್ಪರ್ಧೆ,ಮೆಮೊರಿ ಪರೀಕ್ಷೆ ಹಾಗೂ ಪೋಷಕರು-ಮಕ್ಕಳ ಸಹ ಸಂಬಂಧದ ವಲಯ ಸ್ಪರ್ಧೆಗಳು ನಡೆದವು.ಅಕ್ಷರ ತೋರಣ,ಕಲಿಕಾ ಚಪ್ಪರ, ಅಕ್ಷರ ಬಂಡಿ ಹಾಗೂ ರಂಗೋಲಿ ಗಮನ ಸೆಳೆದವು. ಆಕರ್ಷಕ ಸೆಲ್ಪಿ ಸ್ಟ್ಯಾಂಡ್ ನ್ನು ಹಾಕಲಾಗಿತ್ತು. ದಿನವೀಡೀ ಚಟುವಟಿಕೆಗಳು ನಡೆದವು. ಶಿಕ್ಷಕ ಜಿ ಪಿ ಕಾರ್ಯಕ್ರಮ ನಿರೂಪಿಸಿದರೆ,ಜಿ.ಆರಿ​‍್ಬರಾದಾರ ವಂದಿಸಿದರು. ಶಾಲಾ ಮುಖ್ಯಗುರು ಜೆ.ಡಿ.ಜಾಗೀರದಾರ,     ಪುಂಡಲೀಕ.ಜಾಲವಾದಿ,ನಾಮದೇವ.ರಾಠೋಡ,ಎಮ್‌.ಜಿ.ಸಿಂದಗಿ,ಎ.ಎಮ್‌.ನಾಯ್ಕೋಡಿ,ಬಿ.ಸಿ.ಕನ್ನೊಳ್ಳಿ,ಎಸ್‌.ಬಿ.ಕಕ್ಕಳಮೇಲಿ,ಶ್ರೀಶೈಲ.ಮೂಡಗಿ,ರಾಮು.ನಾಯಕ,ಬಿ.ಜಿ.ಬಡಿಗೇರ,ಆರ್‌.ಎಸ್‌.ಜನಗೊಂಡ,ಬಿ.ಎಸ್‌.ಗೀಜಾ,ವಾಯ್‌.ಎಸ್‌.ಮುನವಳ್ಳಿ,ಎಸ್‌.ಎಮ್‌.ಮಠ,ಉಮಾ.ಪಾಟೀಲ,ಬಿ.ಕೆ.ಪಾಟೀಲ,ಸರಸ್ವತಿ.ಹೊಸೂರ,ರವಿ.ಉಮ್ನಾಬಾದಿ,ಗುರುರಾಜ.ಖಾದೇಪುರ,ಎಸ್‌.ಆರ್‌.ನಾಯಕ,ಪಂಡಿತ.ರಾಠೋಡ,ಎಸ್‌.ಎಮ್‌.ಕೊಂಡಗೂಳಿ,ಎ.ಎಮ್‌.ಆಸಂಗಿ ಸೇರಿದಂತೆ ಕ್ಲಸ್ಟರಿನ ವಿವಿಧ ಶಾಲೆಗಳ ಮಕ್ಕಳು,ಶಿಕ್ಷಕರು ಉಪಸ್ಥಿತರಿದ್ದರು.