ಶಿಕ್ಷಣವು: ವಿದ್ಯಾರ್ಥಿಗಳು ಭವಿಷ್ಯದಲ್ಲಿ ಜೀವನ ಸುಂದರವಾಗಿ ರೂಪಿಸಿಕೊಳ್ಳುವಲ್ಲಿ ಸಹಕಾರಿಯಾಗಲಿದೆ
ರಾಣೆಬೆನ್ನೂರು 24: ಶಿಕ್ಷಣವು ಜೀವನದ ಮಾರ್ಗವಾಗಿದೆ ,ವಿದ್ಯಾರ್ಥಿಗಳು ಕಲಿಕಾ ಹಂತದಲ್ಲೇ ಶಿಸ್ತು, ಸಂಯಮ, ನೈತಿಕತೆ, ಸಂಸ್ಕಾರ , ಮತ್ತು ಸಂಸ್ಕೃತಿ ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಜೀವನ ಸುಂದರವಾಗಿ ರೂಪಿಸಿಕೊಳ್ಳುವಲ್ಲಿ ಸಹಕಾರಿಯಾಗಲಿದೆ ಎಂದು ದೊಡ್ಡಪೇಟೆ ಮತ್ತು ದಾವಣಗೆರೆ ಆವರಗೊಳ್ಳಪುರ ವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯರು ಹೇಳಿದರು ಅವರು ಇಲ್ಲಿನ ಮಾರುತಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 17 ರಲ್ಲಿ ಆಯೋಜಿಸಲಾಗಿದೆ ಶಾಲಾ ವಾರ್ಷಿಕೋತ್ಸವ, ಮತ್ತು ತಂದೆ ತಾಯಿಗಳ ಪಾದಪೂಜೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಮಕ್ಕಳು ಈ ದೇಶದ ಭಾವಿ ಪ್ರಜೆಗಳು ಶಾಲಾ ಹಂತದಲ್ಲಿಯೇ ಉತ್ತಮ ಶಿಕ್ಷಣದ ಜೊತೆಗೆ, ಶಿಕ್ಷಕರ ಅತ್ಯುತ್ತಮ ಮಾರ್ಗದರ್ಶನ ಸಿಕ್ಕರೆ ಭವಿಷ್ಯದಲ್ಲಿ ಸಮಗ್ರ ಶಿಕ್ಷಣವಂತರಾಗಿ, ಸಮಾಜದಲ್ಲಿ ವ್ಯಕ್ತಿತ್ವ ನಿರ್ಮಿಸಿಕೊಂಡು ಮತ್ತೊಬ್ಬರಿಗೆ ಮಾದರಿಯಾಗಲು ಸಾಧ್ಯವಾಗುವುದು ಎಂದರು.
ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮ ಸುಂದರ ಅಡಿಗ ಅವರು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸರಕಾರಗಳು ವಿವಿಧ ರೂಪದಲ್ಲಿ ಅನುಕೂಲತೆಗಳು ಕಲ್ಪಿಸಿವೆ. ಅವುಗಳ ಪ್ರಯೋಜನವನ್ನು ಪಡೆದು, ಸಮಾಜದಲ್ಲಿ ವ್ಯಕ್ತಿತ್ವಂತರಾಗಿ ಬಾಳಬೇಕಾದ ಅಗತ್ಯವಿದೆ ಎಂದು ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಶೇಕಪ್ಪ ಹೊಸಗೌಡ್ರು, ಪತ್ರಕರ್ತ ರಾಮಕೃಷ್ಣ ತಾಂಬೆ, ನಗರಸಭಾ ಸದಸ್ಯ ಪುಟ್ಟಪ್ಪ ಮರಿಯಮ್ಮನವರ, ಸಮನ್ವಯಾಧಿಕಾರಿ ಎಲ್. ಮಂಜು ನಾಯಕ, ಐಡಿಬಿಐ ಶಾಖಾಧಿಕಾರಿ ಎಂ. ಎಸ್. ಪ್ರಸನ್ನ, ಸೋಮಶೇಖರ್ ಆರ್, ವಿನಾಯಕ ಹಮ್ಮಿಗಿ ಮತ್ತಿತರರು ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಆನಂದ ಚಿನ್ನಿಕಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಉಮಾ ಗೌಡ್ರ, ಸದಸ್ಯರಾದ ಹನುಮಂತಪ್ಪ ಸಿದ್ದನ ಕೋಟೆ, ಶಂಭುಲಿಂಗಪ್ಪ ಅಟವಾಳಗಿ, ಮೌಲಾಲಿ ಸಾಬ್ ಶೇಖ, ಪ್ರತಿಭಾ ಮೈಲಾರ ಕಳ್ಳಿಮಠ, ಶ್ವೇತಾ ಹೆಚ್.ವಿ. ಇತರರು ಉಪಸ್ಥಿತರಿದ್ದರು. ಸವಿತಾ ಸಂಗಡಿಗರು ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯ ಬಿ. ಪಿ. ಶಿಡೇನೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿಕ್ಷಕ ಆರ್. ಬಿ. ಚಲವಾದಿ ನಿರೂಪಿಸಿದರು, ಕೆ ಎಸ್ ಮ್ಯಾಗೇರಿ ವಂದಿಸಿದರು. ನಂತರ ನಡೆದ ಶಾಲಾ ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪಾಲಕರ ಗಮನ ಸೆಳೆದವು.