ಲೋಕದರ್ಶನ ವರದಿ
ಹೊನ್ನಾವರ: ಪರಿಸರದ ಬಗ್ಗೆ ಎಲ್ಲರು ಜಾಗೃತರಾಗಬೇಕು. ವಿದ್ಯಾರ್ಥಿ ಜೀವನದಲ್ಲೇ ಇದನ್ನು ಪರಿಪಾಠ ಮಾಡಿಸಿದಾಗ ಮಾತ್ರ ಪರಿಸರದ ಬಗ್ಗೆ ಜಾಗೃತಿಯಾಗಲು ಸಾಧ್ಯ ಎಂದು ಭಟ್ಕಳ-ಹೊನ್ನಾವರ ಶಾಸಕ ಸುನೀಲ್ ನಾಯ್ಕ ಅಭಿಪ್ರಾಯಿಸಿದರು.
ಕೆಂದ್ರ ಸರ್ಕಾರ ಹಾಗೂ ಜಿಲ್ಲಾ ಆಡಳಿತ, ಪ್ರವಾಸೋದ್ಯಮ ಇಲಾಖೆ ಕಾರವಾರ ಮತ್ತು ಅರಣ್ಯ ಇಲಾಖೆ ಹೊನ್ನಾವರ ವಿಭಾಗ ವತಿಯಿಂದ ತಾಲೂಕಿನ ಕಾಸರಕೋಡ ಕಡಲತೀರದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಗಿಡಕ್ಕೆ ನೀರೆರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೇ ನೀಡಿ ಅವರು ಮಾತನಾಡಿದರು. ಪಶ್ಚಿಮ ಘಟ್ಟ ಪ್ರದೇಶಗಳಲ್ಲೇ ಒಂದೊಂದು ಬಿಂದಿಗೆ ನೀರಿಗು ತತ್ವಾರ ಬಂದಿದೆ. ಇದು ಅರಣ್ಯ ನಾಶದ ಪರಿಣಾಮವಾಗಿದೆ. ಇಂದು ಜನರು ಮನೆಕಟ್ಟಲು 4-5 ಗುಂಟೆ ಜಾಗ ಬೇಕಾದರೆ ಏಕರೆಗಟ್ಟಲೆ ಅರಣ್ಯ ನಾಶ ಮಾಡುತ್ತಾರೆ. ಅರಣ್ಯ ನಾಶ ಮಾಡುವವರ ವಿರುದ್ದ ಅರಣ್ಯ ಇಲಾಖೆ ಹೆಚ್ಚಿನ ಕ್ರಮ ಕೈಗೊಳ್ಳಬೇಕು. ಪರಿಸರ ಜಾಗೃತಿ ಕುರಿತಾದ ಕಾರ್ಯಕ್ರಮಗಳು ಇನ್ನು ಹೆಚ್ಚಿನ ರೀತಿಯಲ್ಲಿ ನಡೆಯಬೇಕು ಎಂದರು.
ಹೊನ್ನಾವರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ. ಕೆ ಮಾತನಾಡಿ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಪರಿಸರ ಸಂರಕ್ಷಣೆಯ ಜೊತೆ ಜೊತೆಗೆ ನಮ್ಮ ಜೀವನವನ್ನು ಸುಬದ್ರವಾಗಿಸಿಕೊಳ್ಳಬೇಕು.ಮುಂದಿನ ಪಿಳಿಗೆಗೆ ಯಥಾ ಸ್ಥಿತಿಯಲ್ಲಿ ಕೈಗೊಪ್ಪಿಸಬೇಕು. ಪರಿಸರವೊಂದಿದ್ದರೆ ಸಾಲದು ಅದರಲ್ಲಿ ಮನುಷ್ಯ ಜೀವ ಸಂಕುಲದ ಜೀವನವು ನಡೆಯಬೇಕು. ಅರಣ್ಯ ನಾಶದಿಂದ ಪಶ್ಚಿಮ ಘಟ್ಟದಲ್ಲಿ ಸಹ ಬೊರ್ವೆಲ್ ತೆಗೆದು ನೀರು ಪಡೆಯಬೇಕಾದ ಸ್ಥಿತಿ ಉದ್ಭವಾಗಿದೆ ಇದು ತೀವೃ ಕಳವಳಕಾರಿ ಸಂಗತಿ ಎಂದರು. ಅರಣ್ಯ ರಕ್ಷಣೆಯ ಬಗ್ಗೆ ನಡೆಸುವ ಕಾರ್ಯಕ್ರಮಗಳಿಗೆ ಕೇವಲ ಅರಣ್ಯ ಇಲಾಖೆಯವರು, ವಿಜ್ಞಾನಿಗಳು ಪಾಲ್ಗೊಂಡರೆ ಸಾಲದು ಜನಪ್ರತಿನಿಧಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಳ್ಳಬೇಕು. ಮಕ್ಕಳಲ್ಲಿಯು ಸಹ ಪರಿಸರ ಕಾಳಜಿಯ ಅರಿವು ಮೂಡಿಸಬೇಕು ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಅನೇಕ ರೀತಿಯಲ್ಲಿ ಅರನ್ಯ ಸಂರಕ್ಷಣೆ ಕುರಿತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಅರಣ್ಯ ರಕ್ಷಣೆಯ ಕುರಿತು ಉಪನ್ಯಾಸಕರಾಗಿ ಆಗಮಿಸಿದ ಮಹೇಶ್ ಕಲ್ಯಾಣಪುರ್ ಮಾತನಾಡಿ, ಇಂದು ಪೃತ್ವಿಯ ತಾಪಮಾನ ದಿನದಿಂದ ದಿನಕ್ಕೆ ಎರುತ್ತಿದೆ. ಇದು ಬಹಳ ಆತಂಕಕಾರಿ ಸಂಗತಿ. ಇದರ ಬಗ್ಗೆ ಎಲ್ಲರು ಹೆಚ್ಚಿನ ಜಾಗೃತರಾಗಬೇಕು. ಗ್ಲೋಬಲ್ ವಾಮರ್ಿಂಗ್ ತಡೆಗಟ್ಟಲು ಅನೇಕ ಮಾರ್ಗೋ ಪಾಯಗಳಿವೆ. ಅದರ ಬಗ್ಗೆ ಎಲ್ಲರಲ್ಲು ಅರಿವು ಮೂಡಬೇಕು. ಇಂದು ಅಭಿವೃದ್ದಿ ಹೆಸರಿನಲ್ಲಿ ಪರಿಸರ ನಾಶವಾಗುತ್ತಿದೆ. ಅಭಿವೃದ್ದಿಯ ಜೊತೆಗೆ ಪರಸರ ರಕ್ಷಣೆಯ ಕಾರ್ಯವು ನಡೆಯಬೇಕೆಂದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ತದನಂತರ ಶಾಲಾ ವಿದ್ಯಾರ್ಥಿ ಗಳಿಂದ ಅರಣ್ಯ ರಕ್ಷಣೆಯ ಕುರಿತ ಕಿರುನಾಟಕ ಪ್ರದರ್ಶನ ನಡೆಯಿತು.
ವೇದಿಕೆಯಲ್ಲಿ ಪ್ರವಸೋದ್ಯಮ ಇಲಾಖೆಯ ಉಪನಿರ್ದೇಶಕರು ಪುರುಷೋತ್ತಮ ಎಸ್,ಪ್ರಿಯಾಂಕ ನವದೆಹಲಿ, ಕಾಸರಕೋಡ್ ಗ್ರಾಮ ಪಂಚಾಯತ್ ಅಧ್ಯಕ್ಷೆ ದಿಲಸಾದ್ ಬೆಗಂ,ಮಾರ್ ಥೋಮ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲ ಜೋನ ಉಮ್ಮನ್, ಮತ್ತಿತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮ ಪೂರ್ವದಲ್ಲಿ ಪಟ್ಟಣದ ಅರಣ್ಯ ಇಲಾಖಾ ಕಚೇರಿಯಿಂದ ಶರಾವತಿ ವೃತ್ತದವರೆಗೆ ಜಾಥಾ ನಡೆಯಿತು. ತದನಂತರ ಕಾಸರಕೋಡ ಕಡಲತೀರದಲ್ಲಿ ಸ್ವಚ್ಚತಾ ಕಾರ್ಯಕ್ರಮ, ವನಮಹೋತ್ಸವ ನಡೆಯಿತು.