ತಪ್ಪದೆ ಪ್ರತಿಯೊಬ್ಬರು ಮತದಾನ ಮಾಡಿ: ಪ್ರಕಾಶ ಕುದರಿ

ಧಾರವಾಡ 18: ಪ್ರಜಾಪ್ರಭುತ್ವದ ಸದೃಡಕ್ಕೆ ಪ್ರತಿಯೋಬ್ಬರು ಚುನಾವಣೆಗಳಲ್ಲಿ ಭಾಗವಹಿಸಿ ತಪ್ಪದೆ ಮತದಾನ ಮಾಡಬೇಕು. ಹಬ್ಬ ಹರಿದಿನ, ಜಾತ್ರೆ, ಉತ್ಸವ, ಕುಟುಂಬ ಸಮಾರಂಭಗಳಿಗೆ ನೀಡುವ ಪ್ರಾಮುಖ್ಯತೆಯನ್ನು ಮತದಾನ ಮಾಡುವದಕ್ಕೂ ನೀಡಬೇಕು. ಅದು ರಾಷ್ಟ್ರದ ಭವಿಷ್ಯ ನಿಮರ್ಾಣಕ್ಕೆ ನೀಡುವ ಗೌರವವಾಗಿದೆ ಎಂದು ಧಾರವಾಡ ತಹಸಿಲ್ದಾರ ಪ್ರಕಾಶ ಕುದರಿ ಹೇಳಿದರು.

ಅವರು ನಿನ್ನೆ ಭಾನುವಾರ ಮಧ್ಯಾಹ್ನ ನಗರದ ಮದಿಹಾಳ ಪ್ರದೇಶದಲ್ಲಿರುವ ಜೋಶಿ ಮಂಗಳ ಕಾಯರ್ಾಲಯ (ಮತಗಟ್ಟೆ ಸಂಖ್ಯೆ 195)ದಲ್ಲಿ ಮತದಾರ ಜಾಗೃತಿ ಕಾರ್ಯಕ್ರಮ ಅಂಗವಾಗಿ ಮತದಾನ ಯಂತ್ರ (ಇವಿಎಂ) ಮತ್ತು ಮತಖಾತ್ರಿ (ವಿವಿಪ್ಯಾಟ್) ಯಂತ್ರಗಳ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು.

ಹಬ್ಬ, ಜಾತ್ರೆ, ಸೀಮಂತ, ಮದುವೆ ಇತ್ಯಾದಿಗಳನ್ನು ಪವಿತ್ರವೆಂದು ಭಾವಿಸಿ ಭಯ ಭಕ್ತಿಯಿಂದ ತಪ್ಪದೆ ಮಾಡುತ್ತೆವೆ ಆದರೆ ರಾಷ್ಟ್ರ ಕಟ್ಟುವ ನಾಯಕರ ಆಯ್ಕೆಗಾಗಿ ನಡೆಯುವ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸದೆ ದೂರ ಉಳಿಯುತ್ತಿವೆ ರಾಷ್ಟ್ರ ಅಭಿವೃದ್ದಿಗೆ ಉತ್ತಮ, ಸುಸ್ಥಿರ ಆಡಳಿತ ಮತ್ತು ಆದರ್ಶ ನಾಯಕರ ಆಯ್ಕೆಯಾಗಬೇಕು.

ಭಾರತ ಚುನಾವಣಾ ಆಯೋಗ ಮತ್ತು ಧಾರವಾಡ ಜಿಲ್ಲಾಧಿಕಾರಿಗಳು ಪ್ರತಿಯೋಬ್ಬ ಮತದಾರ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡಲು ಜಾಗೃತಿ ಮೂಡಿಸುವಂತೆ ಆದೇಶ ನೀಡಿದ್ದಾರೆ.

ಅದರಂತೆ ಬರುವ ಫೆ 28 ರವರೆಗೆ ಧಾರವಾಡ-71 ವಿಧಾನ ಸಭಾ ಮತಕ್ಷೇತ್ರದಲ್ಲಿ ಬರುವ ನಗರ ಮತ್ತು ಗ್ರಾಮೀಣ ಪ್ರದೇಶದ ಒಟ್ಟು 231 ಮತದಾನ ಕೇಂದ್ರಗಳಲ್ಲಿ ಕಂದಾಯ ನಿರೀಕ್ಷಕರು, ಸೆಕ್ಟರ್ ಆಫಿಸರ್ ಪೋಲಿಸ್ ಸೆಕ್ಟರ್ ಆಫೀಸರ್ ಮತದಾರ ಜಾಗೃತಿ ಕಾರ್ಯಕ್ರಮ ನಡೆಸಲ್ಲಿದ್ದಾರೆ ಆಯಾ ಮತಗಟ್ಟೆ ವ್ಯಾಪ್ತಿಯ ಮತದಾರರಿಗೆ ಅಲ್ಲಿನ ಗ್ರಾಮಲೆಕ್ಕಾಧಿಕಾರಿ, ವಾಲಿಕಾರ ಹಾಗೂ ಇತರ ಸಿಬ್ಬಂದಿ ಈ ಕುರಿತು ಮುಂಚಿತವಾಗಿ ಮಾಹಿತಿ ನೀಡಲಿದ್ದಾರೆ ಎಂದು ಅವರು ಹೇಳಿದರು.

ಜೋಶಿ ಮಂಗಳ ಕಾಯರ್ಾಲಯ ಮತಗಟ್ಟೆಯಾಗಿದ್ದರಿಂದ ಮತ್ತು ಇಂದು ಇಲ್ಲಿ ಪ್ರಿಯಾಂಕಾ ಮುಕುಂದ ಮೊಟೆಯವರ ಸೀಮಂತ ಕಾರ್ಯನಡೆಯುತ್ತಿರುವದರಿಂದ ಸಾಕಷ್ಟು ಬಂಧು ಬಳಗ ಗ್ರಾಮಸ್ಥರು ಮತ್ತು ನಾಗರಿಕರು ಬಂದಿದ್ದಿರಿ, ನಿವೆಲ್ಲರೂ ಬರುವ ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡಬೇಕೆಂದು ವಿನಂತಿಸಿದ ತಹಸಿಲ್ದಾರ ಪ್ರಕಾಶ ಕುದರಿ ನೆರದವರಿಗೆ ಸ್ವತಃ ಮತಹಾಕಲು ತಿಳಿಸಿ ಪ್ರಾತ್ಯಕ್ಷಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಧಾರವಾಡ ವಲಯ ಕಂದಾಯ ನಿರೀಕ್ಷಕ ಪಿ.ಎಂ.ಹಿರೇಮಠ, ಸೆಕ್ಟರ್ ಅಧಿಕಾರಿ ಪ್ರವೀಣಕುಮಾರ, ಗ್ರಾಮಲೆಕ್ಕಾಧಿಕಾರಿ ವಾಯ್.ಆರ್.ಮುಗದ ಸೇರಿದಂತೆ ಇತರರು ಭಾಗವಹಿಸಿದ್ದರು.

ನಂತರ ಮಾದರ ಮಡ್ಡಿ, ಕಾಮನಕ್ಕಟ್ಟಿ, ಹೊಸಯಲ್ಲಾಪೂರ, ಮುರುಘಾಮಠ ಸೇರಿದಂತೆ ವಿವಿದೆಡೆ ಮತದಾರ ಜಾಗೃತಿ ನಡೆಸಲಾಯಿತು.

ಗ್ರಾಮೀಣ ಭಾಗದಲ್ಲಿ ಮತದಾರ ಜಾಗೃತಿ:

ಅಮ್ಮಿನಭಾವಿ ವಲಯ ಕಂದಾಯ ನಿರೀಕ್ಷಕ ವಿನಾಯಕ ದೀಕ್ಷಿತ ಹಾಗೂ ಗರಗ ವಲಯ ಕಂದಾಯ ನಿರೀಕ್ಷಕ ಅಜಯ ಆಯಿ ನೇತೃತ್ವದಲ್ಲಿ ಸೆಕ್ಟರ್ ಅಧಿಕಾರಿ ಹಾಗೂ ಇತರರೊಂದಿಗೆ ಸೇರಿ ಗರಗ, ಅಮ್ಮಿನಭಾವಿ, ಕುರಬಗಟ್ಟಿ, ಕೊಟುರು, ತಲವಾಯಿ, ಕನಕೂರ ಮುಂತಾದ ಗ್ರಾಮಗಳಲ್ಲಿ ಮತದಾರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು