ಇಎಲ್‌ಎಸ್ ನಾನ್ ಬಿಟಿ ಹತ್ತಿ ತರಬೇತಿ ಕಾರ್ಯಕ್ರಮ
ಹಾವೇರಿ 12: ತಾಲ್ಲೂಕಿನ ದೇವಿಹೊಸೂರ ಗ್ರಾಮದಲ್ಲಿ ಭಾರತ ಸರಕಾರ ಕೃಷಿ ಮಂತ್ರಾಲಯ.ಓಟ್ ರಿಚ್ ಸಂಸ್ಥೆ ಹಾವೇರಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಇಎಲ್‌ಎಸ್ ನಾನ್ ಬಿಟಿ ಹತ್ತಿ ಬೆಳೆಯುವುದರ ಕುರಿತು ತರಬೇತಿ ಕಾರ್ಯಕ್ರಮ ಜರುಗಿತು.
ಸಹಾಯಕ ಯೋಜನಾಧಿಕಾರಿಗಳಾದ ಎ.ಎ. ಕಿಲ್ಲೇಧಾರ ಪ್ರಾಸ್ತಾವಿಕವಾಗಿ ಮಾತನಾಡಿ ಇತ್ತಿಚೀನ ದಿನಗಳಲ್ಲಿ ರೈತರು ಹತ್ತಿ ಬೆಳೆಯುವುದನ್ನು ಕಡಿಮೆ ಮಾಡಿದ್ದು,ಹವಾಮಾನ ವೈಪರಿತ್ಯ,ಬೆಂಬಲ ಬೆಲೆ ಕೊರತೆ ಹಲವು ಕಾರಣಗಳಿಂದ ರೈತರು ಹತ್ತಿ ಬೆಳೆಯುವುದರ ಬಗ್ಗೆ ಆಸಕ್ತಿ ತೊರುತ್ತಿಲ್ಲ ಆದರೆ ಕೇಂದ್ರ ಸರ್ಕಾರ ರೈತರುಗಳಿಗೆ 2025ರ ಬಜೆಟ್‌ನಲ್ಲಿ ರೈತರಿಗೆ ಹತ್ತಿ ಬೆಳೆಯುವಂತೆ ಪ್ರೊಸಾಹಿಸಲು ಮತ್ತು ಅತಿ ಉದ್ದನೆ ಎಳಿ ಹತ್ತಿ ಬೆಳೆಯಲು ಕ್ರಮವಹಿಸಿದೆ.ಜಿಲ್ಲೆಯ ಎಲ್ಲ ರೈತ ಉತ್ಪಾದಕರ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸದಸ್ಯರಿಗೆ ಓಟ ರಿಚ್ ಸಂಸ್ಥೆಯ ಸಿಬ್ಬಂದಿಗಳಿಗೆ ರೈತ ಮುಖಂಡರುಗಳಿಗೆ ಜಿಲ್ಲೆಯಲ್ಲಿ ಇಎಲ್‌ಎಸ್ ಅತಿ ಉದ್ದನೆ ಎಳೆಯ ಹತ್ತಿ ನಾನ್ ಬಿಟಿ ಹತ್ತಿ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಕಾರ್ಯಕ್ರಮ ಅಧಿಕಾರಿಗಳಾದ ಗುರುಸ್ವಾಮಿ ವಿಲಿಯಂ,ಯೋಜನ ಸಂಯೋಜಕರಾದ ಡಿಸೋಜಾ,ಬೇಸಾಯಿ ತಜ್ಞರಾದ ಶ್ರೀಧರ,ರೈತ ಉತ್ಪಾದಕರ ಸಂಸ್ಥೆಯ ವಿಸ್ತರಣಾ ಅಧಿಕಾರಿಗಳು ಮತ್ತು ಬೇಸಾಯ ತಜ್ಞರು ಹಾಗೂ ರೈತರು ಇದ್ದರು.ಫಕ್ಕೀರೇಶ ದೇವಿಹೊಸೂರ ನಿರೂಪಿಸಿದರು.ಶಿವಕುಮಾರ ಸ್ವಾಗತಿಸಿದರು,ಜಿ ನಾಗೇಂದ್ರ್ಪ ವಂದಿಸಿದರು.