ಯರಗಟ್ಟಿ 01: ಪಾಲಕರು ಹೆಚ್ಚಾಗಿ ಮಕ್ಕಳನ್ನು ಮುದ್ದು ಮಾಡುತ್ತಾ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ದ್ವಿಚಕ್ರ ವಾಹನ, ಕಾರು, ಮೋಬೈಲ್ಗಳನ್ನು ಕೊಡಿಸುವುದರಿಂದ ಅವುಗಳನ್ನು ಅವಶ್ಯಕತೆಗೆ ಬಳಸಿಕೊಳ್ಳದೇ ಮೋಜು ಮಸ್ತಿಗಾಗಿ ಹೆಚ್ಚಾಗಿ ಬಳಸುವುದರಿಂದ ಮತ್ತು ರಸ್ತೆ ನಿಯಮ ಉಲ್ಲಂಘಿಸುವುದರಿಂದ ಅಪಘಾತಗಳು ಹೆಚ್ಚುತ್ತಿವೆ ಎಂದು ಬೆಳಗಾವಿ ಸಾರಿಗೆ ಜಂಟಿ ಆಯುಕ್ತ ಉಮಾಶಂಕರ ಬಿ.ಪಿ ಹೇಳಿದರು.
ಸ್ಥಳೀಯ ಎಮ್ಜಿ ರಸ್ತೆಯಲ್ಲಿ ಕನರ್ಾಟಕ ರಾಜ್ಯ ಹೆದ್ದಾರಿ ಪ್ರಾಧಿಕಾರ ಮತ್ತು ಪೋಲಿಸ್ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿರುವ ರಸ್ತೆ ಸುರಕ್ಷತೆ ತಿಳುವಳಿಕೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರತಿ ವರ್ಷ ಭಾರತದಲ್ಲಿ ಐದು ಲಕ್ಷ ಅಪಘಾತಗಳು ಸಂಭವಿಸಿ ಸುಮಾರು 1.5ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ. ಉಳಿದವರು ಅಂಗವೈಕಲ್ಯಗಳಿಗೆ ತುತ್ತಾಗುತ್ತಿದ್ದಾರೆ ಎಂದರು.
ರಾಮದುರ್ಗ ಡಿವಾಯ್ಎಸ್ಪಿ ಬಿ.ಎಸ್ ಪಾಟೀಲ ಮಾತನಾಡಿ ವಾಹನ ಚಾಲಕರು ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿರಬೇಕು. ಮದ್ಯಪಾನ ಮಾಡಿ ವಾಹನ ಚಲಯಿಸಬಾರದು. ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ನಿಮ್ಮ ಕುಟುಂಬದ ನಿರ್ವಹಣೆ ಹಾಗೂ ಜವಾಬ್ದಾರಿ ಅರಿತು ಜೀವನ ಸಾಗಿಸಬೇಕು ಎಂದರು.
ಅಪಘಾತಗಳ ಕುರಿತು ವಿಡಿಯೋ ಕಿರು ಚಿತ್ರಗಳನ್ನು ಮತ್ತು ಕಲಾವಿದರಿಂದ ನಾಟಕಗಳನ್ನು ಪ್ರದಶರ್ಿಸಲಾಯಿತು.
ಬೈಲಹೊಂಗಲ ಎಆರ್ಟಿಓ ಎನ್.ವಾಯ್ ಪಡಸಲಗಿ, ಜಿ.ಪಂ.ಸದಸ್ಯ ಅಜೀತಕುಮಾರ ದೇಸಾಯಿ, ರಾಮದುರ್ಗ ಸಿಪಿಐ ಶ್ರೀನಿವಾಸ ಹಂಡಾ, ನಿವೃತ್ತ ಶಿಕ್ಷಕ ಎ.ಕೆ.ಜಮಾದಾರ, ಎಎಸ್ಐ ಎಮ್.ಜಿ.ಮಾರಿಹಾಳ, ಹವಾಲ್ದಾರ ರಮೇಶ ಖೇಮಾಳೆ, ಎನ್ಸಿಸಿ ಹಾಗೂ ಸ್ಕೌಟ್ ಕೆಡೇಟ್ಗಳು, ರಕ್ಷಣಾ ವೇದಿಕೆ, ರೈತ ಸೇನೆ, ಯರಗಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿವಿಧ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು. ನಿವೃತ್ತ ಪೋಲಿಸ್ ಅಧೀಕ್ಷಕ ರಾಜೇಂದ್ರನಾಥ ಸ್ವಾಗತಿಸಿದರು. ಸುಭಾನಿ ಹುಕ್ಕೇರಿ ನಿರೂಪಿಸಿದರು. ಪಿಎಸ್ಐ ಪ್ರಸಾದ ಪಣೇಕರ ವಂದಿಸಿದರು.