ಮಾದಕ ವಸ್ತುಗಳು ರಾಷ್ಟ್ರದ ಅಭಿವೃದ್ಧಿಗೆ ಮಾರಕಯುವಜನತೆ ಮಾದಕ ವಸ್ತುಗಳಿಂದ ದೂರವಿರಿ :ಡಾ.ಸುರೇಶ ನಾಡಗೌಡರ

Drugs are harmful to the development of the nation. Youth should stay away from drugs: Dr. Suresh N

ಮಾದಕ ವಸ್ತುಗಳು ರಾಷ್ಟ್ರದ ಅಭಿವೃದ್ಧಿಗೆ ಮಾರಕಯುವಜನತೆ ಮಾದಕ ವಸ್ತುಗಳಿಂದ ದೂರವಿರಿ :ಡಾ.ಸುರೇಶ ನಾಡಗೌಡರ

ಗದಗ 16 :  ಮದ್ಯ , ಮಾದಕ ವಸ್ತುಗಳು ರಾಷ್ಟೊದ ಅಭಿವೃದ್ಧಿಗೆ ಮಾರಕವಾದಂತಹ ವಸ್ತುಗಳಾಗಿವೆ. ಇಂದಿನ ಯುವ ಜನತೆ ಮಾದಕ ವಸ್ತುಗಳ ಸೇವನೆಯನ್ನು ಪ್ರತಿಷ್ಠೆಯನ್ನಾಗಿಸಿಕೊಳ್ಳುವದರ ಮೂಲಕ ತಮ್ಮ ಆರೋಗ್ಯವನ್ನು ಅಷ್ಟೆ ಅಲ್ಲದೇ ದೇಶದ ಅಭಿವೃದ್ಧಿಗೂ ಮಾರಕವಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಕುಲಪತಿಗಳಾದ ಡಾ.ಸುರೇಶ ನಾಡಗೌಡರ ಅವರು ನುಡಿದರು.ನಾಗಾವಿಯ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿಶ್ವವಿದ್ಯಾಲಯದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಮನಚಾಯತರಾಜ್ ವಿಶ್ವ ವಿದ್ಯಾಲಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ (ಮಾ.15) ಜರುಗಿದ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಉಪನ್ಯಾಸ ಮತ್ತು ಜನಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಮದ್ಯ ಸೇವನೆ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುತ್ತದೆ. ಮನೆಯಲ್ಲಿನ ಹಿರಿಯರ ನಡುವಳಿಕೆ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಯಾವುದೇ ದುಶ್ಚಟಗಳು ಮೀತಿಮಿರಬಾರದು ಅಲ್ಲದೇ ತಮ್ಮ ಜೀವನದ ಉದ್ದೇಶಕ್ಕೆ ಮಾರಕವಾಗಬಾರದು ಎಂದರು. ಪಾಲಕರು ತಮ್ಮ ಮಕ್ಕಳ ಮೇಲೆ ನಿಗಾವಹಿಸಬೇಕು. ಹದಿಹರೆಯದ ವಯಸ್ಸಿನಲ್ಲಿ ವಿಧ್ಯಾರ್ಥಿಗಳು ತಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಯಾವುದೇ ದುಶ್ಚಟಗಳಿಗೆ ದಾಸರಾಗದಂತೆ ತಿಳಿಸಿದರು.ಇಂದಿನ ವಿಧ್ಯಾರ್ಥಿಗಳು ದುಶ್ಚಟಗಳಿಂದಾಗುವ ಪರಿಣಾಮಗಳ ಕುರಿತು ಅರಿತುಕೊಂಡು ಇತರರಿಗೂ ತಿಳಿಸುವದರ ಮೂಲಕ ಸಧೃಡ ರಾಷ್ಟೊ ನಿರ್ಮಾಣಕ್ಕೆ ಮುಂದಾಗುವಂತೆ ಕರೆ ನೀಡಿದರು.ಡಾ. ಗೀರೀಶ ದಿಕ್ಷಿತ್ ಅವರು ಮಾತನಾಡಿ ಹುಟ್ಟಿನಿಂದ ಯಾರೂ ಕೂಡ ವ್ಯಸನಿಗಳು ಆಗಿರುವುದಿಲ್ಲ. ಆದರೆ ದಿನ ಕಳೆದಂತೆ ವ್ಯಸನಗಳಿಗೆ ದಾಸರಾಗುತ್ತಾರೆ. ಇಂದಿನ ಯುವ ಜನತೆಗೆ ದುಶ್ಚಟಗಳಿಗೆ ದಾಸರಾಗುವದು ಎಂದರೆ ಒಂದು ಪ್ರತಿಷ್ಟೆಯ ಸಂಗತಿಯಾಗಿರುವದು ಕಳವಳಕರಿಯಾದ ಸಂಗತಿಯಾಗಿದೆ. ದುಶ್ವಟಗಳಿಂದಾಗುವ ಪರಿಣಾಮಗಳ ಕುರಿತು ಅರಿವು ಹೊಂದುವದರ ಜೊತಗೆ ತಮ್ಮ ನೆರೆಹೊರೆಯವರಿಗೂ ಜಾಗೃತಿ ಮೂಡಿಸಲು ವಿಧ್ಯಾರ್ಥಿಗಳು ಮುಂದಾಗುವಂತೆ ಕರೇ ನೀಡಿದರು.ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಜಿಲ್ಲಾ ಮನರೋಗ ತಜ್ಞರಾದ ಡಾ. ರಾಘವೇಂದ್ರ ಪಾಟೀಲ ಅವರು ಮಾತನಾಡಿ ಇಂದಿನ ದಿನಮಾನಗಳಲ್ಲಿ ಮದ್ಯ ಹಾಗೂ ಮಾದಕ ವಸ್ತುಗಳ ಬಳಕೆ ಹೆಚ್ಚಾಗುತ್ತಿರುವದು ಕಳವಳಕಾರಿಯಾದಂತಹ ಸಂಗತಿಯಾಗಿದೆ. ಇವುಗಳ ಬಳಕೆಯಿಂದ ಆರೊಗ್ಯದ ಮೇಲೆ ಬೀರುವಂತಹ ಪರಿಣಾಮಗಳ ಕುರಿತು ಪ್ರತಿಯೊಬ್ಬರು ಜಾಗೃತರಾಗುವದು ಅವಶ್ಯಕವಾಗಿದೆ ಎಂದರು.ಯುವ ಜನತೆ ಇಂದು ಅನೇಕ ದುಶ್ಚಟಗಳ ದಾಸರಾಗುತ್ತಿದ್ದಾರೆ. ಮಾದಕ ವಸ್ತುಗಳ ಬಳಕೆಯಿಂದ ಆರೋಗ್ಯದ ಮೇಲೆ ನಿಧಾನವಾಗಿ ಗಂಭೀರವಾದಂತಹ ಪರಿಣಾಮ ಬೀರುತ್ತವೆ. ಮನೆಯಲ್ಲಿನ ಹಿರಿಯರು ಸಿಗರೇಟ್ ಸೇವನೆ, ಮದ್ಯ ಸೇವನೆಯಂತಹ ದುಶ್ಚಟಗಳಿಂದ ಆಕರ್ಷಿತರಾಗಿ ಯುವಜನತೆ ಮನೆಯಿಂದಲೇ ಅನೇಕ ದುಶ್ವಟಗಳಿಗೆ ದಾಸಾರಾಗುತ್ತಿದ್ದಾರೆ. ಮದ್ಯ ಸೇವನೆ ಎಂಬುದು ಇಂದಿನ ದಿನಮಾನಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ. ಕೆಲ ಜನರು ಕುತೂಹಲಕ್ಕಾಗಿ ಹಾಗೂ ಕೆಲ ಿ್ದ್ಲೃೃ ಕಲ್ಪನೆಗಳಿಂದಲೂ ಮಾದಕ ವಸ್ತುಗಳ ಸೇವನೆ ಮಾಡುವ ಮೂಲಕದುಶ್ಚಟಗಳಿಗೆ ಖಾಯಂ ದಾಸರಾಗುವ ಮೂಲಕ ಗಂಭೀರ ಪರಿಣಾಮಗಳನ್ನು ಎದುರಿಸುತ್ತಿರುವದನ್ನು ನಾವು ಕಾಣಬಹುದಾಗಿದೆ.ದುಶ್ಚಟಗಳಿಗೆ ದಾಸರಾಗಲು ಅನೇಕ ಕಾರಣಗಳಿರುತ್ತವೆ. ಆದರೆ ದುಶ್ವಟಗಳಿಗೆ ಒಮ್ಮೆ ದಾಸರಾದರೆ ಇದರಿಂದ ಹೊರಬರುವದು ಕಷ್ಟ ಸಾಧ್ಯವಾಗಿದೆ. ದುಶ್ಚಟಗಳಿಂದಾಗಿ ಜಠರ ಸಂಬಂಧಿತ, ಹೃದಯ ಸಂಭಂದಿ, ನರವ್ಯೂಹದ ಸಮಸ್ಯೆ, ಲೈಂಗಿಕ ಕಾಯಿಲೆ, ಮೂತ್ರ ಕೋಶ ಸಂಬಂಧಿತ ಗಂಭೀರ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ.ಇದರ ಜೊತೆಗೆ ಮರೆವಿನ ಕಾಯಿಲೆ, ಭಾವನೆಗಳಿಗೆ ಸಂಬಂಧಿಸಿದ, ನಿದ್ರಾಹೀನತೆ, ಮೂರ್ಚೆಯಂತಹ ಮಾನಸಿಕ ಅಸ್ವಸ್ಥತೆಗಳು ಸೇರಿದಂತೆ ಮಕ್ಕಳ, ಕುಟುಂಬದವರ ಮಾನಸಿಕ ಆರೋಗ್ಯದ ಮೇಲೆಯೂ ಗಂಭೀರ ಪರಿಣಾಮ ಬೀರುವದರ ಜೊತೆಗೆ ಸಮಾಜದಲ್ಲಿ ಎಲ್ಲರಿಂದ ್ತ್ಘ್ಠ್ಲಿೂೃಿಷ್ಮದಿಳ್ದ ತಮ್ಮ ಸ್ಥಾನಮಾನಗಳನ್ನು ಕಳೆದುಕೊಳ್ಳಬೇಕಾಗುತ್ತದೆ.ದುಶ್ಚಟಗಳಿಗೆ ದಾಸರಾದವರಿಗೆ ಆಪ್ತ ಸಮಾಲೋಚನೆ, ನಿರಂತರ ಚಿಕಿತ್ಸೆ, ಕೌಟುಂಬಿಕ, ವ್ಯಕ್ತಿಗತ ಹಾಗೂ ಗುಂಪು ಚಿಕಿತ್ಸೆ ಮೂಲಕ ಹಂತ ಹಂತವಾಗಿ ದುಶ್ಚಟಗಳಿಂದ ವಿಮುಖರಾಗಲು ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೆಶಕರಾದ ವಸಂತ ಮಡ್ಲೂರ ಅವರು ಪ್ರಾಸ್ತಾವಿಕವಾಗಿ ಮಾತಾನಾಡಿದರು.ಕಾರ್ಯಕ್ರಮದಲ್ಲಿ ಡಾ. ಅಬ್ದುಲ ಅಜೀಜ್ ಮುಲ್ಲಾ, ಸೇರಿದಂತೆ ವಿಶ್ವವಿದ್ಯಾಲಯದ ವಿಧ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ನಾಗರತ್ನ ನಾಯ್ಕ ಸ್ವಾಗತಿಸಿದರು, ಡಾ.ಸಂಧ್ಯಾ ವಂದಿಸಿದರು. ಚಂದ್ರ​‍್ಪ ಬಾರಂಗಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಪ್ರೀತಿ ನೂಲ್ವಿ ಪ್ರಾರ್ಥಿಸಿದರು.ರಾಜಶೇಖರ ಹಿರೇಮಠ ಹಾಗೂ ತಂಡದವರು ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಜಾಗೃತಿ ಗೀತೆಗಳನ್ನು ಪ್ರಚುರ ಪಡಿಸಿದರು.