ನಶಾ ಮುಕ್ತ ಭಾರತ ಅಭಿಯಾನ: ವಿದ್ಯಾರ್ಥಿಗಳಿಗೆ ಜಾಗೃತಿ
ಬೆಳಗಾವಿ 05: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ರಾಜಯೋಗ ಹಾಗೂ ದೈವಿಕ ಸೇವೆಗೆ ಅನುಗುಣವಾಗಿ ಭಾರತೀಯ ಹಾಗೂ ಜಾಗತಿಕ ಮಟ್ಟದಲ್ಲಿ ಜ್ಞಾನ ಕೇಂದ್ರಗಳನ್ನು ಸ್ಥಾಪಿಸಿ ವಿಶ್ವ ಶಾಂತಿಯನ್ನು ಸ್ಥಾಪಿಸಲು ನಿರಂತರ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವುದು ಅಭಿಮಾನದ ಸಂಗತಿ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ರಾಣಿ ಪಾರ್ವತಿ ದೇವಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ದಿ.5ರಂದು ನಶಾ ಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮವನ್ನು ಕೈಗೊಂಡು ಮಾನಸಿಕ ಹಾಗೂ ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳುವ ಅರಿವನ್ನು ನೀಡುವ ಕಾರ್ಯವನ್ನು ಕೈಗೊಂಡಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಶೇಖ ಹೋಮೊಯೋಪತಿ ಕಾಲೇಜಿನ ಅಧ್ಯಾಪಕ ಡಾ. ಸಂಗೀತಾ ಹಾಗೂ ಬ್ರಹ್ಮಕುಮಾರಿಯರಾದ ಬಿ.ಕೆ.ಪಾರ್ವತಿ , ಬಿ.ಕೆ. ದೀಪಿಕಾ ಹಾಗೂ ಡಾ. ಶೈಲಜಾ ಎಮ್. ಹಿರೇಮಠ, ವಿಶೇಷ ಆಹ್ವಾನಿತರಾಗಿ ಡಾ. ಎಮ್. ಜಿ. ಹಿರೇಮಠ ರವರು ಮೊದಲಾದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪದಾಧಿಕಾರಿಗಳು ಆಗಮಿಸಿ ವಿದ್ಯಾರ್ಥಿಗಳಿಗೆ ಮಾನಸಿಕ ಹಾಗೂ ದೈಹಿಕ ಸದೃಢತೆಯ ಅರಿವು ಮೂಡಿಸಿದರು. ಮಾದಕ ದ್ರವ್ಯ ಹಾಗೂ ದುಶ್ಚಟಗಳಿಂದ ದೂರವಿರಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅಧ್ಯಕ್ಷತೆಯನ್ನು ವಿದ್ಯಾರ್ಥಿ ಕಲ್ಯಾಣಿ ಅಧಿಕಾರಿ ಡಾ. ಎಚ್. ಬಿ. ಕೋಲ್ಕಾರ ವಹಿಸಿದ್ದರು. ಸಂಚಾಲಕರಾಗಿ ಕಾರ್ಯಕ್ರಮವನ್ನು ಪ್ರೊ. ಸುರೇಶ ಚೌಗಲಾ ರವರು ರೂಪಿಸಿದ್ದರು. ವಂದನಾರೆ್ಣಯನ್ನು ಪ್ರೊ. ವೈಶಾಲಿ ಹಣಮಗೊಂಡರವರು ನಿರ್ವಹಿಸಿದರು. ಯೋಗ ಮತ್ತು ಧ್ಯಾನದ ಪ್ರಾತ್ಯಕ್ಷಿಕೆಯ ತಾಂತ್ರಿಕ ವ್ಯವಸ್ಥೆಯನ್ನು ಪ್ರೊ. ಹೇಮಾ ಬಿ. ಅನಗೋಳ್ಕರವರು ನಿರ್ವಹಿಸಿದರು. ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿ ಬಳಗ ಹಾಗೂ ಅಧ್ಯಾಪಕ ಬಳಗ ಹಾಜರಾಗಿದ್ದರು.