ಲೋಕದರ್ಶನ ವರದಿ
ಹೂವಿನಹಡಗಲಿ 18:ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ನಾನಾ ಕಡೆಗಳಲ್ಲಿ ನಾನಾ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆಯನ್ನು ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಚಾಲನೆ ನೀಡಿದರು.
ಪಟ್ಟಣದ ಎಂ.ಪಿ.ನಗರ ಹೊರವಲಯದಲ್ಲಿ 3ಕೋಟಿ ರೂ.ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಸೇತುವೆ ನಿಮರ್ಾಣದ ಕಾಮಗಾರಿಗೆ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಭೂಮಿ ಪೂಜೆ ನೆರವೇರಿಸಿದರು.ನಂತರ ಹಿರೇಹಡಗಲಿ ಗ್ರಾಮದಲ್ಲಿ ಹೈದ್ರಾಬಾದ್ ಕನರ್ಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಯೋಜನೆ ಅಡಿಯಲ್ಲಿ 30ಲಕ್ಷ ರೂ.ವೆಚ್ಚದಲ್ಲಿ ವಿಕೆಕೆ ಪ್ರೌಢ ಶಾಲೆಯಲ್ಲಿ 2ಹೆಚ್ಚುವರಿ ಕೊಠಡಿ,30ಲಕ್ಷ ರೂ.ವೆಚ್ಚದಲ್ಲಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3ಹೆಚ್ಚುವರಿಗೆ ಕೊಠಡಿ ಹಾಗೂ 25ಲಕ್ಷ ರೂ.ವೆಚ್ಚದಲ್ಲಿ ವಾಲ್ಮೀಕಿ ಓಣಿ ಸಿ.ಸಿ.ರಸ್ತೆಯ ಕಾಮಗಾರಿಗೆ ಭೂಮಿ ಪೂಜೆ ಮಾಡಿದರು.
ಕತ್ತೆಬೆನ್ನೂರು ಗ್ರಾಮದಲ್ಲಿ 1ಕೋಟಿ ರೂ.ವೆಚ್ಚದಲ್ಲಿ ಸಿಸಿರಸ್ತೆ ಕಾಮಗಾರಿಗೆ ಚಾಲನೆ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಚಾಲನೆ ನೀಡಿದರು. ತಾ.ಪಂ.ಅಧ್ಯಕ್ಷೆ ಶಾರದಮ್ಮ, ಇಒ ಸೋಮಶೇಖರ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಶಿವಪುರ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶಿವಯೋಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐಗೋಳ ಚಿದಾನಂದ, ಎಂ.ಪರಮೇಶ್ವರಪ್ಪ, ಮುಖಂಡರಾದ ಅರವಳ್ಳಿ ವೀರಣ್ಣ, ಬಿ.ಹನುಮಂತಪ್ಪ, ವಾರದಗೌಸ ಮೊಹಿದ್ದೀನ್, ಬಸವನಗೌಡ ಪಾಟೀಲ, ಚಂದ್ರನಾಯ್ಕ, ಶ್ಯಾನಭೋಗರ ಸುಧಾಕರ,ವಸಂತ ಇದ್ದರು