ಲೋಕದರ್ಶನ ವರದಿ
ಬೆಳಗಾವಿ 15: ದಿ. 14ರಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕರವರು ಮಹಾನಗರ ಪಾಲಿಕೆಯ 14 ನೇ ಹಣಕಾಸು ಯೋಜನೆಯಡಿಯಲ್ಲಿ ಒಳಚರಂಡಿ ನಿಮರ್ಾಣ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಸಲ್ಲಿಸುವುದರ ಮುಖಾಂತರ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಭೂಮಿ ಪೂಜೆಯನ್ನು ಸಲ್ಲಿಸಿ ಮಾತನಾಡಿದ ಮಹಾನಗರ ಪಾಲಿಕೆಯ 14ನೇ ಹಣಕಾಸು ಯೋಜನೆಯಡಿಯಲ್ಲಿ ನಗರದ ಶೆಟ್ಟಿ ಗಲ್ಲಿ, ಕೋತವಾಲ ಗಲ್ಲಿ, ಕ್ಲಬ ರೋಡ, ಸದಾಶಿವ ನಗರ ಹಾಗೂ ಹನುಮನ ನರದ ದೂರದರ್ಶನ ನಗರದಲ್ಲಿ ಒಳಚರಂಡಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದ್ದು, ಇಲ್ಲಿನ ಸಾರ್ವಜನಿಕರು ಗುತ್ತಿಗೆದಾರರೊಂದಿಗೆ ಸಹಕರಿಸಿ ಹಾಗೂ ಸಲಹೆ ಸೂಚನೆಗಳನ್ನು ನೀಡಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂಥೆ ನೋಡಿಕೊಳ್ಳಬೇಕೆಂದರು. ಅದರಂತೆಯೆ ಕಾಮಗಾರಿಗಳಲ್ಲಿ ಲೊಪದೋಷ ಕಂಡುಬಂದಲ್ಲಿ ನನ್ನ ಕಾಯರ್ಾಲಯಕ್ಕೆ ದೂರು ಸಲ್ಲಿಸಬೇಕೆಂದರು.
ಮಹಾನಗರ ಪಾಲಿಕೆ 14ನೇ ಹಣಕಾಸು ಯೋಜನೆಯಡಿ ಮಹಾಂತೇಶ ನಗರದ ಉದ್ಯಾನವನದಲ್ಲಿ ತಡೆಗೋಡೆ (ಕಂಪೌಂಡ ವಾಲ್) ನಿಮರ್ಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ಸಲ್ಲಿಸಿ ಚಾಲನೆಗೊಳಿಸಿದರು. ಲೋಕೋಪಯೋಗಿ ಇಲಾಖೆಯಡಿ ಶಾಹು ನಗರದ ಮರಾಠಿ ಕಿರಿಯ ಪ್ರಾಥಮಿಕ ಶಾಲೆಯ ಬಣ್ಣ ಬಳಿಯುವುದು ಮತ್ತು ಶಾಲೆಯ ಮೇಲ್ಚಾವಣಿ (ವಾಟರ್ ಪ್ರೂಪ್ ರೂಪ್) ಹಾಕಲು ಚಾಲನೆ ನೀಡಿದರು ಹಾಗೂ ಶಾಹುನಗರದ ಕನ್ನಡ ಪ್ರಾಥಮಿಕ ಶಾಲೆಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃಧ್ದಿಯಡಿಯಲ್ಲಿ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಶಾಸಕರೊಂದಿಗೆ ಸಹಾಯಕ ಕಾರ್ಯನಿವರ್ಾಹಕ ಅಭಿಯಂತರ ಚಾಗಲಾ, ಕಾರ್ಯನಿವರ್ಾಹಕ ಅಭಿಯಂತರ ಮಂಜೂಶ್ರೀ, ಸಂಬಂಧಿಸಿದ ಗುತ್ತಿಗೆದಾರರು, ಶಾಸಕರ ಆಪ್ತ ಸಹಾಯಕ ವ್ಹಿ.ಎಮ್. ಪತ್ತಾರ, ಮಾಜಿ ನಗರ ಸೇವಕರುಗಳಾದ ಮೊಹನ ಬೆಳಗುಂದಕರ, ಅನುಶ್ರೀ ದೇಶಪಾಂಡೆ, ಸರಳಾ ಹೇರೆಕರ ಹಗೂ ವಿಜಯ ಕೊಡಗನೂರ, ಕಾಂಚನಾ ಕೋಪಡರ್ೆ, ಗಜು ಮಿಸಾಳೆ, ಸಾಗರ ಚೌಗುಲೆ, ಶ್ರೇಯಸ್ ನಾಕಾಡಿ ಹಾಗೂ ನಗರದ ಎಲ್ಲ ಗುರು ಹಿರಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.