ಪ್ರಾಜೆಕ್ಟ ಶಕ್ತಿ ನೋಂದಣಿ ಅಭಿಯಾನಕ್ಕೆ ಚಾಲನೆ

ಪ್ರಾಜೆಕ್ಟ ಶಕ್ತಿ ನೊಂದಣಿ ಅಭಿಯಾನದಲ್ಲಿ ಕಾಂಗ್ರೆಸ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಕಾರ್ಯಕರ್ತರಿಗೆ ಮಾಹಿತಿ ನೀಡಿದರ

ಮುನವಳ್ಳಿ 28: ದೇಶದ ಪ್ರತಿಯೊಬ್ಬ ಕಾಂಗ್ರೇಸ್ ಪಕ್ಷದ ಕಾರ್ಯಕರ್ತನನ್ನು ಬಲಗೊಳಿಸುವ ಹಾಗೂ ಅವರ ಅಭಿಪ್ರಾಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಾಜೆಕ್ಟ ಶಕ್ತಿಯನ್ನು ಪರಿಚಯಿಸಲಾಗಿದ್ದು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ ತನ್ನ ಮೊಬೈಲಿನಿಂದ ಈ ಪ್ರಾಜೆಕ್ಟನಲ್ಲಿ ನೋಂದಣಿಯಾಗಿ ಪಕ್ಷದ ಕಾರ್ಯಕ್ರಮ, ಸಂಘಟನೆ, ಪಕ್ಷದ ಮುಖಂಡರೊಂದಿಗೆ ನೇರ ಸಂಪರ್ಕ ಸಾಧಿಸುವ ಸದುದ್ದೇಶದಿಂದ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಆದ್ದರಿಂದ ಕಾಂಗ್ರೆಸ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ ಇಂದಿನಿಂದ ಪ್ರಾಜೆಕ್ಟ ಶಕ್ತಿಯಲ್ಲಿ ನೊಂದಣಿಯಾಗಬೇಕು ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಹೇಳಿದರು.

ಅವರು ಪಟ್ಟಣದ ಪಂಚಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಕಾಂಗ್ರೆಸ್ ಕಾರ್ಯಕರ್ತರ ಪ್ರಾಜೆಕ್ಟ ಶಕ್ತಿ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಸವದತ್ತಿ ತಾಲೂಕಿನ ಕಾಂಗ್ರೆಸ್ ಮುಖಂಡ ಆನಂದ ಚೋಪ್ರಾ ಮಾತನಾಡಿ ಪ್ರಾಜೆಕ್ಟ ಶಕ್ತಿ ಕಾಂಗ್ರೇಸ್ ಕಾರ್ಯಕರ್ತನ ಧ್ವನಿಯಾಗಿ ಕಾರ್ಯನಿರ್ವಹಿಸಲಿದೆ ಎಂದರು.

ಇನ್ನೋರ್ವ ಕಾಂಗ್ರೆಸ್ ಮುಖಂಡ ಉಮೇಶ ಬಾಳಿ ಮಾತನಾಡಿ ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಇಂದಿನಿಂದ ಪ್ರತಿಯೊಬ್ಬ ಕಾಂಗ್ರೇಸ್ ಕಾರ್ಯಕರ್ತ ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.  

ಜಿಲ್ಲಾ ಪಂಚಾಯತ ಸದಸ್ಯರಾದ ಫಕೀರಪ್ಪ ಹದ್ದನ್ನವರ, ಎಂ.ಎಸ್.ಹಿರೇಕುಂಬಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಕೆ.ಕೆ. ಪುಣೇದ, ಮಹಾಂತೇಶ ಉಪ್ಪೀನ, ಪುರಸಭೆ ಸದಸ್ಯ ಪರಶುರಾಮ ಗಂಟಿ, ಮೀರಾಸಾಬ ವಟ್ನಾಳ, ಡಿ.ಡಿ.ಟೋಪೋಜಿ, ಫಕೀರಪ್ಪ ಚಂದರಗಿ, ರಾಮಚಂದ್ರ ಪಟಾತ, ಉದಯ ನರಿ, ಶೇಖರ ಗೋಕಾಂವಿ, ಡಿ.ಡಿ. ಕಿನ್ನೂರಿ, ನಾಗರಾಜ ಕಟ್ಟಿ, ಮಂಜುನಾಥ ಕೊಡ್ಲಿವಾಡ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.