ಲೋಕದರ್ಶನ
ವರದಿ
ಕಂಪ್ಲಿ 24:
ನ.3ರಂದು ನಡೆಯುವ ಲೋಕಸಭಾ
ಉಪ ಚುನಾವಣೆಯಲ್ಲಿ ಮತದಾರರು ಕಡ್ಡಾಯವಾಗಿ ಮತಚಲಾಯಿಸಬೇಕು ಎಂದು ತಹಶೀಲ್ದಾರ ದಿವಾಕರ
ರೆಡ್ಡಿ ಹೇಳಿದರು.
ತಾಲೂಕಿನ ಉದ್ಭವ ಮಹಾಗಣಪತಿ ದೇವಸ್ಥಾನ ಬಳಿಯಲ್ಲಿ ತಹಶೀಲ್ದಾರರ ಕಛೇರಿ ಹಾಗೂ ಪುರಸಭೆಯ ಸಹಯೋಗದಲ್ಲಿ
ನಿನ್ನೆ ಹಮ್ಮಿಕೊಂಡಿದ್ದ 'ಮತದಾನ ಜಾಗೃತಿ ಜಾಥ'ಕ್ಕೆ ಚಾಲನೆ
ನೀಡಿ ಮಾತನಾಡಿ, ಬಳ್ಳಾರಿ ಲೋಕಸಭಾ ಉಪ ಚುನಾವಣೆ ನ.3ರಂದು ನಡೆಯಲಿದೆ. 18 ವರ್ಷ
ಮೇಲ್ಪಟ್ಟ ಯುವಕ, ಯುವತಿಯರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.
ಪ್ರತಿಯೊಬ್ಬರು ಮತದಾನದ ಜಾಗೃತಿಯೊಂದಿಗೆ ಶೇ.100ಕ್ಕೆ ನೂರರಷ್ಟು ಮತದಾನ
ಮಾಡಬೇಕು. ಮತದಾರರು ಹಣ, ಆಮಿಷಗಳಿಗೆ ಕೈವೊಡ್ಡದೆ,
ನಿಭರ್ಿತಿಯಿಂದ ಮತಚಲಾಯಿಸಬೇಕು ಎಂದು ಹೇಳಿದರು.
ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಆರಂಭಗೊಂಡು ಮತದಾನ ಜಾಗೃತಿ ಜಾಥವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿಯಲ್ಲಿ ಸಮಾವೇಶಗೊಂಡಿತು.
ಈ ಸಂದರ್ಭದಲ್ಲಿ ಉಪ
ತಹಶೀಲ್ದಾರ ಬಿ.ರವೀಂದ್ರಕುಮಾರ್, ಪುರಸಭೆ
ಹಿರಿಯ ನೈರ್ಮಲ್ಯ ನಿರೀಕ್ಷಕ ಸಿ.ಫಕೃದ್ದೀನ್, ಕಿರಿಯ
ನೈರ್ಮಲ್ಯ ನಿರೀಕ್ಷಕಿ ಎ.ಕೆ.ರಾಧಿಕಾ,
ಮಹಿಳಾ ಮೇಲ್ವಿಚಾರಕಿ ಲತೀಫಾಬೇಗಂ, ಸಮುದಾಯ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕ ಚನ್ನಬಸವರಾಜ ಹಾಗೂ ಪುರಸಭೆ ಸಿಬ್ಬಂದಿಗಳು,
ಪೌರ ಕಾಮರ್ಿಕರು, ಅಂಗನವಾಡಿ ಕಾರ್ಯಕತರ್ೆಯರು, ಆಶಾ ಕಾರ್ಯಕತರ್ೆಯರು, ಸಕರ್ಾರಿ
ಪಾಲಿಟೆಕ್ನಿಕ್ ಕಾಲೇಜಿನ ಎನ್ಎಸ್ಎಸ್ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.