ವಿಶ್ವಾಸ ಕಿರಣ ತರಬೇತಿಗೆ ಚಾಲನೆ

ಲೋಕದರ್ಶನ ವರದಿ

ಕಂಪ್ಲಿ.15: ವಿದ್ಯಾಥರ್ಿಗಳ ಆಂಗ್ಲಭಾಷೆ ಶೈಕ್ಷಣಿಕ ಪ್ರಗತಿಗಾಗಿ ವಿಶ್ವಾಸ ಕಿರಣ ತರಬೇತಿ ಹಮ್ಮಿಕೊಂಡಿದೆ ಎಂದು ಪ್ರಾಚಾರ್ಯ ಮಹ್ಮದ್ ಶಫಿ ಹೇಳಿದರು.

    ತಾಲೂಕಿನ ಷಾ.ಮಿಯಾಚಂದ್ ಪಿಯೂ ಕಾಲೇಜಿನ ವಿದ್ಯಾಥರ್ಿಗಳಿಗಾಗಿ ಶಿಕ್ಷಣ ಇಲಾಖೆ ಸೋಮವಾರ ಹಮ್ಮಿಕೊಂಡಿದ್ದ 'ವಿಶ್ವಾಸ ಕಿರಣ' ತರಬೇತಿಗೆ ಚಾಲನೆ ನೀಡಿ ಮಾತನಾಡುತ್ತಾ ಮೇ ಮಾಹೆಯಲ್ಲೂ ರಜೆ ಕಡಿತಗೊಳಿಸಿ ಬೇಗನೆ ಕಾಲೇಜು ಆರಂಭಿಸಲಾಗಿತ್ತು.

    ಇದೀಗ ದಸರೆ ರಜೆಯಲ್ಲೂ ವಿಶ್ವಾಸ ಕಿರಣ ತರಬೇತಿ ಆಯೋಜಿಸುವ ಮೂಲಕ ರಜೆ ದಿನಗಳನ್ನು ತೀವ್ರವಾಗಿ ಮೊಟಕುಗೊಳಿಸಿದಂತಾಗಿದೆ.

    ಇದರಿಂದ ಶೈಕ್ಷಣಿಕ ಒತ್ತಡ ಹೆಚ್ಚಾಗುತ್ತಿದೆ. ಪಿಯೂ ಶಿಕ್ಷಣ ಇಲಾಖೆಯ ಆಶಯ ಅರಿತುಕೊಳ್ಳುವಲ್ಲಿ ವಿದ್ಯಾಥರ್ಿ ಮತ್ತು ಉಪನ್ಯಾಸ ವರ್ಗ ಜಾಗೃತಿ ತೋರಬೇಕು. ವಿದ್ಯಾಥರ್ಿಗಳು ಆಂಗ್ಲಭಾಷೆಯಲ್ಲಿ ಪ್ರೌಢಿಮೆ ಗಳಿಸುವ ನಿಟ್ಟಿನಲ್ಲಿ ವಿಶ್ವಾಸ ಕಿರಣ ತರಬೇತಿಯನ್ನು ಪರಿಣಾಮಕಾರಿಯಾಗಿ ಸದ್ಭಳಕೆ ಮಾಡಿಕೊಳ್ಳುವಂತೆ ವಿದ್ಯಾಥರ್ಿಗಳಿಗೆ ಸಲಹೆ ನೀಡಿದ ಅವರು ದಸರಾ ರಜೆ ದಿನಗಳಲ್ಲೂ ವಿಶ್ವಾಸ ಕಿರಣ ತರಬೇತಿ ಆಯೋಜಿಸುವ ಮೂಲಕ ವಿದ್ಯಾಥರ್ಿ, ಉಪನ್ಯಾಸಕರಿಗೆ ಕಿರಿಕಿರಿಯಾಗಿ ತೋರಿದೆ. ಶಿಕ್ಷಣ ಇಲಾಖೆಯ ಕಳಕಳಿಯನ್ನು ಅಥರ್ೈಸಿಕೊಂಡು ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸಬೇಕು ಎಂದು ಹೇಳಿದರು.

ಷಾ.ಮಿಯಾಚಂದ್ ಸಕರ್ಾರಿ ಪ್ರೌಢಶಾಲೆ ಉಪ ಪ್ರಾಚಾರ್ಯ ಎಸ್.ಜಿ.ಚಿತ್ರಗಾರ ಮಾತನಾಡಿ, ವಾಷರ್ಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಲು ವಿಶ್ವಾಸ ಕಿರಣ ಉರುಗೋಲಾಗಿದೆ. ಆಂಗ್ಲಭಾಷೆ ಕಠಿಣ ಎನ್ನುವ ಮನೋಭಾವನೆಯಿಂದ ವಿಮುಖರಾಗಿ ಕಲಿಕಾಸಕ್ತಿಯ ಭಾಷೆಯನ್ನಾಗಿ ರೂಢಿಸಿಕೊಳ್ಳುವಂತೆ ಹೇಳಿದರು.

      ಸಂಪನ್ಮೂಲ ಉಪನ್ಯಾಸಕ ವಿ.ಸತ್ಯನಾರಾಯಣ ಪ್ರಾಸ್ತವಿಕ ಮಾತನಾಡಿ, ರಜೆ ಇಲ್ಲದೆ ದೈನಂದಿನ ಒತ್ತಡಗಳ ಮಧ್ಯೆಯೂ ಉಪನ್ಯಾಸಕರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಂಗ್ಲ ಭಾಷೆ ಸೇರಿ ಎಲ್ಲಾ ವಿಷಯಗಳಲ್ಲೂ ಶೇ.100ರಷ್ಟು ಫಲಿತಾಂಶ ಸಾಧಿಸುವ ಹಿನ್ನಲೆಯಲ್ಲಿ ವಿಶೇಷ ಯೋಜನೆಗಳನ್ನು ಹಮ್ಮಿಕೊಂಡಿದ್ದು ವಿದ್ಯಾಥರ್ಿಗಳು ಸಹಕರಿಸಬೇಕು. ನಿತ್ಯ ಎರಡು ಬಾರಿ ಹಾಜರಿ ಹಾಕಲಿದ್ದು ವಿದ್ಯಾಥರ್ಿಗಳು ತಪ್ಪದೆ ನಿತ್ಯ ತರಬೇತಿಗೆ ಹಾಜರಾಗುವಂತೆ ಗಮನಸೆಳೆದು ಹೇಳಿದರು.

       ಎಸ್ಡಿಎಂಸಿ ಅಧ್ಯಕ್ಷ ಯು.ಎಂ.ವಿದ್ಯಾಶಂಕರ್, ಉಪನ್ಯಾಸಕ ಆನಂದ್ ಸೇರಿ ವಿದ್ಯಾಥರ್ಿಗಳು, ಬೋಧಕ ಬೋಧಕೇತರ ಸಿಬ್ಬಂದಿ ಭಾಗವಹಿಸಿದರು.