ಟೀಪು ಸುಲ್ತಾನ್ ಸರ್ಕಲ್‌ಗೆ ಲಾರಿ ಡಿಕ್ಕಿ: ಸರ್ಕಲ್ ನಾಶ

ಟೀಪು ಸುಲ್ತಾನ್ ಸರ್ಕಲ್‌ಗೆ ಲಾರಿ ಡಿಕ್ಕಿ: ಸರ್ಕಲ್ ನಾಶ Lorry hits Tipu Sultan Circle: Circle destroyed

ಲೋಕದರ್ಶನ ವರದಿ

ಜಮಖಂಡಿ 27: ನಗರದ ಟೀಪು ಸುಲ್ತಾನ್ ಸರ್ಕಲ್‌ಗೆ ಲಾರಿ ಡಿಕ್ಕಿ ಪರಿಣಾಮ ಸಂಪೂರ್ಣವಾಗಿ ಟೀಪು ಸುಲ್ತಾನ್ ಸರ್ಕಲ್ ನಾಶವಾಗಿರುವ ಘಟನೆ ಜರುಗಿದೆ. ಇಲ್ಲಿನ ಕುಂಚನೂರ ರಸ್ತೆಯ ಹತ್ತಿರ ಇರುವ ಟೀಪು ಸುಲ್ತಾನ್ ಸರ್ಕಲ್‌ಗೆ ಮಹಾರಾಷ್ಟ್ರದ ಮೂಲದ ಸಿಮೆಂಟ್ ತುಂಬಿದ ಲಾರಿ ಮುಧೋಳ ಕಡೆಯಿಂದ ಅತೀ ವೇಗವಾಗಿ ಲಾರಿ ಚಲಾಯಿಸಿದ ಕಾರಣ ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಸರ್ಕಲ್‌ಗೆ ಡಿಕ್ಕಿ ಹೊಡೆದಿದೆ. ರಾತ್ರಿ ಸುಮಾರ 8 ಘಂಟಗೆ ಈ ಘಟನೆ ಜರುಗಿದ ಪರಿಣಾಮ ಟೀಪು ಸುಲ್ತಾನ್ ಸರ್ಕಲ್ ಸಂಪೂರ್ಣ ನಾಶವಾಗಿದೆ. 

ಟೀಪು ಸುಲ್ತಾನ್ ಸರ್ಕಲ್‌ನ ಮಧ್ಯ ಭಾಗದಲ್ಲಿ ಹೈಮಾಕ್ಸ್‌ ವಿದ್ಯುತ್ ಕಂಬ ನೆಲಕ್ಕೆ ಉರುಳಿದ ಕಾರಣ ಭಾರಿ ಅನಾಹುತ ತಪ್ಪಿದಂತಾಗಿದೆ.ಸತತವಾಗಿ ಜನಸಂದಣಿಯ ಇರುವ ಸರ್ಕಲ್ ನಿತ್ಯ ನೂರಾರು ವಾಹನಗಳು ಹಾಗೂ ಬೈಕ್ ಸವಾರರು ಸಾರ್ವಜನಿಕರು ನಿತ್ಯ ಓಡಾಡುವ ಸರ್ಕಲ್‌ನಲ್ಲಿ ಭಾರಿ ಅನಾಹುತ ತಪ್ಪಿದಂತಾಗಿದೆ. ಲಾರಿ ಚಾಲಕ ಅರೆಪ್ರಜ್ಞೆಯನ್ನು ತಪ್ಪಿದ್ದು ಲಾರಿಯೊಳಗೆ ಸಿಲಿಕಿಕೊಂಡಿದ್ದಾನೆ. ಆತನನ್ನು ಸಾರ್ವಜನಿಕರು ಹೋರಗೆ ತೆಗೆದು ಸರಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಶಹರ ಪೋಲಿಸರು ಭೇಟಿ ನೀಡಿ. ಸಾರ್ವಜನಿಕರನ್ನು ಚದುರಿಸಲು ಹರಸಾಹಸ ಪಡುವ ಜೊತೆಗೆ ಲಾಠಿ ರುಚಿಯನ್ನು ಸಹ ತೋರಿಸಿದ್ದಾರೆ.